ಕೂಲಿ ಕೆಲಸ ಮಾಡುವ ಮೂಲಕ ಮುಂದುವರಿದ ಅತಿಥಿ ಉಪನ್ಯಾಸಕರ ಹೋರಾಟ

Get real time updates directly on you device, subscribe now.

ಮುಂದುವರಿದ ಅತಿಥಿ ಉಪನ್ಯಾಸಕರ ಹೋರಾಟ         

ಕೊಪ್ಪಳ. ರಾಜ್ಯಾದ್ಯಂತ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮನ್ನು ಖಾಯಂಗೊಳಿಸಬೇಕೆಂದು ಆಗ್ರಹಿಸಿ  ಕಳೆದ  23 ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹತ್ತು ಹಲವು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರದಿಂದ ಏನಾದರೂ ಸಿಹಿ ಸುದ್ದಿ  ಬರುತ್ತದೆಯೋ ಎಂದು ಕಾದು ನೋಡುತ್ತಿದ್ದಾರೆ.

*ಇವರಿಂದಲೇ ಕಾಲೇಜುಗಳು ರನ್:      ಪೂರ್ಣಕಾಲಿಕ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ  ರಾಜ್ಯದ ಎಲ್ಲಾ  ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಅತಿಥಿ ಉಪನ್ಯಾಸಕರಿಂದಲೇ  ಹೆಚ್ಚು ಪಾಠ ಪ್ರವಚನಗಳು ನಡೆಯುತ್ತವೆ. ಈ ಸಲದ  ತರಗತಿ ಬಹಿಷ್ಕಾರ ಮತ್ತು ಮುಷ್ಕರ ನೂರಕ್ಕೆ ನೂರರಷ್ಟು  ಯಶಸ್ವಿಯಾಗಿರುವುದರಿಂದ  ಅತಿಥಿ ಉಪನ್ಯಾಸಕರಿಲ್ಲದೇ  ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಕಳೆಯನ್ನು ಕಳೆದುಕೊಂಡಿವೆ.

* ವಿದ್ಯಾರ್ಥಿಗಳಿಗೆ ಪರೀಕ್ಷೆಯ ಆತಂಕ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ  ಹೆಚ್ಚಿನ ಸಂಖ್ಯೆಯಲ್ಲಿ  ಬಡ ವಿದ್ಯಾರ್ಥಿಗಳೇ ಇರುತ್ತಾರೆ. ಪ್ರಥಮ ಸೆಮಿಸ್ಟರ್ ನ ಪರೀಕ್ಷೆಗಳು ಹತ್ತಿರ  ಬರುತ್ತಿರುವುದರಿಂದ  ಸಹಜವಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕಾರದ  ಮುಷ್ಕರದ ಪರಿಣಾಮವಾಗಿ  ಬೆಳಗ್ಗೆ ಎಂದಿನಂತೆ ವಿದ್ಯಾರ್ಥಿಗಳು ಕಾಲೇಜಿಗೆ  ಬರುವುದು  ಮತ್ತು ಮನೆಗೆ ತೆರಳುವುದು  ಸಾಮಾನ್ಯವಾಗಿಬಿಟ್ಟಿದೆ.          
* ಇದುವರೆಗಿನ ಹೋರಾಟಗಳು             ಈಗಾಗಲೇ ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ  ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೊಪ್ಪಳದಲ್ಲಿ  ಸೇರಿ ಅಶೋಕ  ಸರ್ಕಲ್ ದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಪ್ರತಿಭಟನಾ ರ್‍ಯಾಲಿಯನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಲಾಗಿತ್ತು.  ಅಲ್ಲದೇ ಅತಿಥಿ ಉಪನ್ಯಾಸಕರು  ತಮ್ಮ  ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ  ಸರ್ಕಾರದ ಗಮನ ಸೆಳೆಯಲು ಪತ್ರ ಚಳವಳಿ ಮಾಡಿದ್ದಾರೆ. ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಸಹ ಬೀದಿಗಳಿದು  ಪ್ರತಿಭಟಿಸಿ ಸರ್ಕಾರದ ಗಮನವನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ .

* ಕೂಲಿ ಕೆಲಸ ಮಾಡುವ ಮೂಲಕ ಗಮನ.        : ಅತಿಥಿ ಉಪನ್ಯಾಸಕರ  ಈ ಮುಷ್ಕರದಿಂದ ಜೀವನ ನಿರ್ವಹಣೆಗಾಗಿ  ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ   ಶಿವರಾಜ್ ಅರಸ್  ಎಂಬ ಅತಿಥಿ ಉಪನ್ಯಾಸಕ  ಇಂದು ಬೇರೊಬ್ಬರ ತೋಟದಲ್ಲಿ ಕೂಲಿ ಕೆಲಸ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ   ಪ್ರಯತ್ನ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: