ಕೊಪ್ಪಳ ನಗರಸಭೆ: ಒತ್ತುವರಿ ತೆರವಿಗೆ ಸ್ವಯಂಪ್ರೇರಿತರಾಗಿ ಕ್ರಮ ವಹಿಸಲು ಸೂಚನೆ

Get real time updates directly on you device, subscribe now.

: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ/ನಗರಸಭೆಗೆ ಸಂಬಂಧಪಟ್ಟ ಆಸ್ತಿ/ನಿವೇಶನಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ/ಶೆಡ್ ನಿರ್ಮಾಣ ಮಾಡಿಕೊಂಡಿದ್ದರೆ ಅಂತವುಗಳನ್ನು ಒತ್ತುವರಿದಾರರು ಸ್ವಯಂಪ್ರೇರಿತರಾಗಿ ತೆರವುಗೊಳಿಸದೇ ಇದ್ದಲ್ಲಿ ನಿಯಮಾನುಸಾರ ನಗರಸಭೆಯಿಂದ ತೆರವುಗೊಳಿಸಲು ಕ್ರಮ ವಹಿಸಲಾಗುವುದು.
ಕೊಪ್ಪಳ ನಗರದ ವಾರ್ಡ ನಂಬರ್:೦೩ ಹೂವಿನಾಳ ರಸ್ತೆಯಲ್ಲಿರುವ ಕುವೆಂಪು ನಗರದಲ್ಲಿ ೦೨ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಗೊಳಿಸಲಾಗಿರುತ್ತದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಬೇಕಾಗಿರುವುದರಿಂದ ಸರ್ಕಾರಿ/ನಗರಸಭೆಗೆ ಸಂಬಂಧಪಟ್ಟಂತಹ ನಿವೇಶನಗಳಲ್ಲಿ ಯವುದಾದರೂ ಅನಧಿಕೃತವಾಗಿ ಕಟ್ಟಡ/ಶೆಡ್/ಗುಡಿಸಲು ನಿರ್ಮಿಸಿಕೊಂಡಿದ್ದಲ್ಲಿ ಸ್ವಯಂಪ್ರೇರಿತರಾಗಿ ಪ್ರಕಟಣೆಯ ೦೭ ದಿನಗಳ ಒಳಗಾಗಿ ತೆರವುಗೊಳಿಸತಕ್ಕದ್ದು. ಇಲ್ಲವಾದಲ್ಲಿ ನಗರಸಭೆ ಕಾರ್ಯಾಲಯದಿಂದ ಅಂತಹವುಗಳನ್ನು ತೆರವುಗೊಳಿಸಲು ಕ್ರಮ ಜರುಗಿಸಲಾಗುವುದು.
ಸರ್ಕಾರಿ/ನಗರಸಭೆಗೆ ಸಂಬಂಧಪಟ್ಟ ಆಸ್ತಿ/ನಿವೇಶನವನ್ನು ಒತ್ತುವರಿ ಮಾಡಿಕೊಂಡ ಕುರಿತು ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ನಗರಸಭೆ ಪೌರಾಯುಕ್ತರ ಗಮನಕ್ಕೆ ತರಬೇಕು ಎಂದು ನಗರಸಭೆ ಪೌರಾಯುಕ್ತರು   ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!