ಜಗತ್ತನ್ನು ಬಿಟ್ಟು ಹೋಗುವಾಗ ಏನಾದರೂ ಕೊಟ್ಟು ಹೋಗೋಣ. — ಶರಣಬಸಪ್ಪ ಬಿಳೆಯಲಿ

Get real time updates directly on you device, subscribe now.

ಶರಣರ ಜೀವನ ನಮಗೆ ಜೀವನಪೂರ್ತಿ ಮಾರ್ಗದರ್ಶನವನ್ನು ನೀಡುತ್ತದೆ. ಅವರ ಬದುಕು ಒಂದು ವಿಶ್ವವಿದ್ಯಾಲಯವಿದ್ದಂತೆ ಯಾವ ಸಂದರ್ಭದಲ್ಲಿಯೂ ಯಾವ ಸಮಸ್ಯೆಯಲ್ಲಿಯೂ ನಮಗೆ ಉತ್ತರ ದೊರೆಯಬಹುದಾದ ಒಂದು ಸಂಪನ್ಮೂಲವೆಂದರೆ ಅದು ಶರಣರ ಬದುಕು ಎಂದು ಶರಣ ಚಿಂತಕ ಹಾಗೂ ಉಪನ್ಯಾಸಕ ಶರಣಬಸಪ್ಪ ಬಿಳಿಎಲೆರವರು ತಮ್ಮ ಉಪನ್ಯಾಸದಲ್ಲಿ ಮಾತನಾಡಿದರು .ಕನ್ನಡ ಸಾಹಿತ್ಯ ಪರಿಷತ್ತು ಗಂಗಾವತಿ ನಗರದ ಕೆ ಎಲ್ ಇ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ದತ್ತಿ ಉಪನ್ಯಾಸ ಹಾಗೂ ದತ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿದಾನಿಗಳು ಆದ ಪರಣ್ಣ ಮುನವಳ್ಳಿ ರವರು ಉದ್ಘಾಟಿಸಿದರು. ಹಾಗೂ ಮುಖ್ಯ ಅತಿಥಿಗಳಾಗಿ ಕೆ ಎಲ್ ಇ ಮಹಾವಿದ್ಯಾಲಯದ ಸ್ಥಾನಿಕ ಕಾರ್ಯಾಧ್ಯಕ್ಷರಾದ ಹಾಗೂ ದತ್ತಿ ದಾನಿಗಳಾದ ಗಿರಿಯಪ್ಪ ಹೊಸ್ಕೆರಿ ರವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜಾನಪದ ಸಾಹಿತ್ಯದಲ್ಲಿ ಉಪನ್ಯಾಸವನ್ನು ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಮಹೆಬೂಬ್ ಕಿಲ್ಲೇದಾರವರು ಹಾಗೂ ವಚನ ಸಾಹಿತ್ಯ ದ ಬಗ್ಗೆ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮೇಶ್ ಕಲ್ಮಂಗಿರವರು ಉಪನ್ಯಾಸವನ್ನು ನೀಡಿದರು. ಈ ಸಂದರ್ಭದಲ್ಲಿ ಲಿಂಗೈಕ್ಯ ಅಮರಪ್ಪ ಅಮರಗುಂಡಪ್ಪ ಸ್ಮರಣಾರ್ಥ ಕೊಪ್ಪಳ ಜಿಲ್ಲಾ ಬರಹಗಾರರ ಕಾವ್ಯ ಕೃತಿಗೆ ಈ ಪುರಸ್ಕಾರಕ್ಕೆ “ಸಂತೆಯೊಳಗಣ ಮೌನ “ಈ ಕೃತಿಯ ಕವಿ ಚನ್ನಬಸವ ಆಸ್ಪರಿ ರವರಿಗೆ ಪುರಸ್ಕಾರವನ್ನು ನೀಡಲಾಯಿತು. ಹಾಗೂ ಲಿಂಗೈಕ್ಯ ಶ್ರೀಮತಿ ಜಡೆಮ್ಮ ಅಮರಗುಂಡಪ್ಪ ಅರಳಿ ಸ್ಮರಣಾರ್ಥ ನೀಡುವ ಕಥಾ ಸಂಕಲನ ಪುರಸ್ಕಾರವನ್ನು ಲೇಖಕಿ ಶ್ರೀಮತಿ ಶ್ರೀದೇವಿ ಕೃಷ್ಣಪ್ಪರವರ “ಬೇಲಿಯೋಗೊಳಗಿನ ಬಟ್ಟೆ” ಈ ಕೃತಿಗೆ ಪುರಸ್ಕಾರವನ್ನು ನೀಡಲಾಯಿತು. ಹಾಗೂ ಲಿಂಗೈಕ್ಯ ಅಮರಗುಂಡಪ್ಪ ಅರಳಿ ದತ್ತಿಯನ್ನು ಗಂಗಾವತಿ ನಗರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ 2022 23ನೇ ಸಾಲಿನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿ ಕುಮಾರಿ ಸ್ನೇಹ ವಿ ಕೃಷ್ಣ ಲಯನ್ಸ್ ಪ್ರೌಢಶಾಲೆ ಗಂಗಾವತಿ ಈ ವಿದ್ಯಾರ್ಥಿಗೆ ಪುರಸ್ಕಾರವನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಅಮರಗುಂಡಪ್ಪ ಅರಳಿ ಶ್ರೀ ಮಹಾಂತೇಶ್ ಕೋಟೆ ಶ್ರೀಮತಿ ವಿಜಯ ಶ್ರೀ ಗುಂಜಳ್ಳಿ, ಶ್ರೀ ನಿಜಲಿಂಗಪ್ಪ ಮೆಣಸಿಗಿ ಶ್ರೀ ಸಿದ್ದಲಿಂಗನಗೌಡ ಪಾಟೀಲ್ ಪ್ರಾಚಾರ್ಯರು ಕೆ ಎಲ್ ಇ ಮಹಾವಿದ್ಯಾಲಯರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ್ ಅಂಗಡಿ ರವರು ಹಾಗೂ ಅಧ್ಯಕ್ಷತೆಯನ್ನು ಶರಣೇಗೌಡ ಪೊಲೀಸ್ ಪಾಟೀಲ್ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶಿವಾನಂದ್ ತಿಮ್ಮಾಪುರವರು ಹಾಗೂ ಸ್ವಾಗತವನ್ನು ಆನಂದ್ ರವರು ಹಾಗೂ ವಂದನಾರ್ಪಣೆಯನ್ನು ನಿಂಗಪ್ಪ ಗುಂಡೂರವರು ನಿರ್ವಹಿಸಿದರು.

Get real time updates directly on you device, subscribe now.

Comments are closed.

error: Content is protected !!