ಕನ್ನಡ ಭಾಷೆ ಮತ್ತು ಈ ಹೊತ್ತಿನ ಬಿಕ್ಕಟ್ಟುಗಳು-ರಾಜ್ಯ ಮಟ್ಟದ ವಿಚಾರ ಸಂಕಿರಣ

Get real time updates directly on you device, subscribe now.

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳ ಕನ್ನಡ ವಿಭಾಗ ಮತ್ತು ಕನ್ನಡ ಅಭಿವೃಧ್ಧಿ ಪ್ರಾಧಿಕಾರ ಬೆಂಗಳೂರು ಪ್ರಾಯೋಜಿತದಲ್ಲಿ ದಿನಾಂಕ ೧೪. ೧೨.೨೦೨೩ರಂದು ‘ಕನ್ನಡ ಭಾಷೆ ಮತ್ತು ಈ ಹೊತ್ತಿನ ಬಿಕ್ಕಟ್ಟುಗಳು’ ಎಂಬ ವಿಷಯದ ಕುರಿತು ಒಂದು ದಿನದ ವನ್ನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಕಿರಣವನ್ನು ಕನಕ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಉಧ್ಘಾಟಿಸುವರು. ಕನ್ನಡ ಅಬಿವೃದ್ಧಿ ಪ್ರಾಧಿಕಾರ, ಬೆಂಗಳೂರು ಕಾರ್ಯದರ್ಶಿಗಳಾದ ಡಾ. ಸಂತೋಶ ಹಾನಗಲ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಫಳ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಂತರ ನಡೆಯುವ ಗೋಷ್ಠಿಗಳಲ್ಲಿ ಮೊದಲನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಪ್ರೋ. ಕೆ. ರವೀಂದ್ರನಾಥ ‘ಯುವ ಮನಸ್ಸುಗಳು ಮತ್ತು ಕನ್ನಡ ಸಾಹಿತ್ಯ’ ವಿಷಯದ ಕುರಿತು, ಎರಡನೇ ಗೋಷ್ಠಿಗೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಮಲ್ಲಪ್ಪ ಎನ್ ಬಂಡಿ ‘ಅಂತರ್ಜಾಲ ಯುಗದಲ್ಲಿ ಕನ್ನಡ ಭಾಷೆ ಈ ಹೊತ್ತಿನ ತಲ್ಲಣಗಳು’ ವಿಷಯದ ಕುರಿತು, ಮೂರನೇ ಗೋಷ್ಠಿಯಲ್ಲಿ ಅಂಬ್ಲಿ ದೊಡ್ಡ ಬರಮಪ್ಪ ಪ್ರಥಮ ದರ್ಜೇ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ, ರಾಜಶೇಖರಯ್ಯ ‘ಚಲನಚಿತ್ರಗಳು ಮತ್ತು ಕನ್ನಡ ಭಾಷೆಯ ಬಿಕ್ಕಟ್ಟುಗಳು’ ವಿಷಯದ ಕುರಿತು ಉಪನ್ಯಾಸವನ್ನು ಮಂಡಿಸಲಿದ್ದಾರೆ. ನಂತರ ಸಮರೋಪ ಸಮಾರಂಭ ಜರುಗುವುದು. ಅನೇಕ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧವನ್ನು ಮಂಡಿಸಲಿದ್ದಾರೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಚಾರ್ಯ ಡಾ. ಚನ್ನಬಸವ ಮಹಾವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Get real time updates directly on you device, subscribe now.

Comments are closed.

error: Content is protected !!