ಶ್ರೀ ಶಾರದಾ ಪರ್ವ -2023 ಅದ್ದೂರಿ ಕಾರ್ಯಕ್ರಮ

Get real time updates directly on you device, subscribe now.

 

ಕೊಪ್ಪಳ : ಶ್ರೀ ಶಾರದಾ ಫೌಂಡೇಶನ್ ಟ್ರಸ್ಟ್, ಶ್ರೀ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್, ಶ್ರೀ ಶಾರದಾ ಪಿಯು ಕಾಲೇಜು ನೇತೃತ್ವದಲ್ಲಿದಲ್ಲಿ ತಾಲೂಕಿನ ಕಿಡದಾಳ ಗ್ರಾಮದ ಶ್ರೀ ಶಾರದಾ ಇಂಟರ್ ನ್ಯಾಶನಲ್ ಸ್ಕೂಲ್ನಲ್ಲಿ
ವಾರ್ಷಿಕೋತ್ಸವ ಕಾರ್ಯಕ್ರಮ ಇಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕನ್ನಡ ಚಲನಚಿತ್ರ ನಟ ಶರಣ್ , ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ‌ ಪಂಚಾಯತ್ ಸಿಇಓ  ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ,ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ. ಕಡಿ, ಕೊಪ್ಪಳ DDPU  ಜಗದೀಶ್ ಜೆ ಎಚ್ , ಕೊಪ್ಪ‌ಳ ಡಿಡಿಪಿಐ ಶ್ರೀಶೈಲ್ ಬಿರಾದರ್ , ಬಿಇಓ ಶಂಕರಯ್ಯ ಟಿ ಎಸ್ ಮುಖ್ಯ ಅತಿಥಿಗಳಾಗಿ ಆಗಮಿಸುವವರು.

 ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳುಗಳು ನಡೆಯಲಿದ್ದು, ತಾಯಿಯ ಅಪ್ಪುಗೆ – ನರ್ಸರಿ ಪೂರ್ವ ವಿದ್ಯಾರ್ಥಿಗಳಿಂದ ಪ್ರದರ್ಶನ , ವಿನೋದದ ರೆಕ್ಕೆಗಳು – ನರ್ಸರಿ ವಿದ್ಯಾರ್ಥಿಗಳಿಂದ ಪ್ರದರ್ಶನ
ವಿಶೇಷ ಮೇಳ – LKG ವಿದ್ಯಾರ್ಥಿಗಳಿಂದ ಪ್ರದರ್ಶನ, ಜನಪದ ಕಲಾವೈಭವ – UKG ವಿದ್ಯಾರ್ಥಿಗಳಿಂದ ಪ್ರದರ್ಶನ,
ಶಿಶುವಿಹಾರದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ವಿತರಣೆ ಸಹ ನಡೆಯಲಿದೆ. ರಂಬಲ್ ಇನ್ ದಿ ಜಂಗಲ್- Gr -1 ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಡಾನ್ಸಿಂಗ್ ವಿತ್ ದಿ ಟೂನ್ಸ್- Gr -2 ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ, ಚಿಣ್ಣರ ನೃತ್ಯಗಳು (ಟೈನಿ ಡಾನ್ಸರ್ಸ) – ಚಿಣ್ಣಿರುವೆಗಳ ಚಮತ್ಕಾರ Gr- 3 ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಅದ್ಭುತ ಒಡಿಸ್ಸಿ ನೃತ್ಯ – Gr-4 ಮತ್ತು 5 ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ , ಮ್ಯಾಡ್ ಕ್ಯಾಪ್ ಮೊಂಬೋ – Gr 4 ಮತ್ತು 5 ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಸೇರಿದಂತೆ ವಿಶೇಷ ಬಹುಮಾನ ವಿತರಣೆ, 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುವವು. ಇದೇ ವೇಳೆ
ಮೋಹನ ನೃತ್ಯ – Gr 6 ಮತ್ತು 7 ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ , ರಿವರ್ಸ್ ಮೀಡಿಯಾ Gr 6 ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಹಾರ್ಮೋನಿ ಆಫ್ ಲೈಫ್-Gr 7 ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಸಿಂಕ್ ಆಂಡ್ ಸ್ವಿಂಗ್ ವಿತ್ ಮ್ಯೂಜಿಕ್ – Gr 8 ಮತ್ತು 9 ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ, ಜೈ ಭಜರಂಗಿ- Gr 8 ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ,
ಮರೆಯಾದ ಮಾಣಿಕ್ಯಗಳು Gr 10 ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ,
ಮ್ಯಾಜಿಕ್ ಆಫ್ ಲೈಟ್ಸ್ – Gr 10 ವಿದ್ಯಾರ್ಥಿಗಳಿಂದ ವಿಶೇಷ ಪ್ರದರ್ಶನ ನಡೆಯಲಿದ್ದು ವಿಶೇಷ ಬಹುಮಾನ ವಿತರಣೆ ಕಾರ್ಯಕ್ರಮ, 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ.
ದೈವ ನೃತ್ಯ ರೂಪಕ – ಪಿಯುಸಿ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿದ್ದು,
ಪಿಲಿ ನೃತ್ಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರದರ್ಶನ, ಋತು ಗಾನ – ಪಿಯುಸಿ ವಿದ್ಯಾರ್ಥಿಗಳಿಂದ ಪ್ರದರ್ಶನ, ಹರ ಹರ ಮಹದೇವ್ ಪಿಯುಸಿ ವಿದ್ಯಾರ್ಥಿಗಳಿಂದ ಪ್ರದರ್ಶನ,ಎಲ್‌ಇಡಿ ಸಂವಹನ – ಪಿಯುಸಿ ವಿದ್ಯಾರ್ಥಿಗಳಿಂದ ವಿಶೇಷ ಪ್ರದರ್ಶನ ಜೊತೆಗೆ ವಿಶೇಷ ಬಹುಮಾನ ವಿತರಣೆ, ಪಿಯುಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ

Get real time updates directly on you device, subscribe now.

Comments are closed.

error: Content is protected !!
%d bloggers like this: