ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಅಳವಡಿಸಿಕೊಳ್ಳದಿದ್ದರೆ ಕಠಿಣ ಕ್ರಮ: ಕ್ಯಾಪ್ಟನ್ ಮಹೇಶ ಮಾಲಗಿತ್ತಿ

Get real time updates directly on you device, subscribe now.

: ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳದೇ ಇರುವ ಕೈಗಾರಿಕೆಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಕೈಗಾರಿಕೆ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ಕೊಪ್ಪಳ ತಾಲೂಕಿನಲ್ಲಿ ವಿವಿಧ ಕೈಗಾರಿಕೆಗಳಿಂದಾಗುತ್ತಿರುವ ವಾಯು ಮಾಲಿನ್ಯ, ಧೂಳಿನಿಂದ ಬೆಳೆಗಳಿಗೆ ಹಾನಿ ಹಾಗೂ ಜನರಿಗೆ ಆರೋಗ್ಯದ ಸಮಸ್ಯೆ ಸಂಬAಧ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಂಗಳವಾರದAದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಸ್ಪಾಂಜ್‌ಐರನ್ ಕೈಗಾರಿಕೆಗಳ ವ್ಯವಸ್ಥಾಪಕರ ಜೊತೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೈಗಾರಿಕೆಗಳು ರಾತ್ರಿ ವೇಳೆಯಲ್ಲಿ ಧೂಳು ಹೊರ ಸೂಸುತ್ತಿರುವುದು ಕಂಡುಬAದಿದ್ದು, ಮಾಲಿನ್ಯ ನಿಯಂತ್ರಣ ಉಪಕರಣಗಳಾದ ಸ್ಥಾಯಿ ವಿದ್ಯುತ್ ಅವಕ್ಷೇಪಕ, ಬ್ಯಾಗ್ ಫಿಲ್ಟರ್‌ಗಳನ್ನು ಸ್ಥಗಿತಗೊಳಿಸಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬAದಿರುತ್ತದೆ.  ಚಿಮಣಿಯ ಪಕ್ಕದಲ್ಲಿ ಅಳವಡಿಸಿರುವ ಮುಚ್ಚಳಿಕೆಯನ್ನು ತೆರೆದು ಬೈಪಾಸ್ ಮಾಡುತ್ತಿರುವುದು  ಹಾಗೂ ಧೂಳು ನಿಯಂತ್ರಿಸಲು ನೀರು ಸಿಂಪಡಣೆ ಮಾಡದೇ ವಾಯು ಮಾಲಿನ್ಯಕ್ಕೆ ಕಾರಣವಾಗಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳದೇ ಕಾರ್ಯಾಚರಣೆ ನಡೆಸಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿಗಳು ಕೈಗಾರಿಕೋದ್ಯಮಿಗಳಿಗೆ
ಸಭೆಯಲ್ಲಿ ಪರಿಸರ ಅಧಿಕಾರಿ ಎಸ್. ಸಿ ಸುರೇಶ, ತಹಶೀಲ್ದಾರ್ ವಿಠ್ಠಲ್ ಚೌಗಲೆ, ಸಹಾಯಕ ಪರಿಸರ ಅಧಿಕಾರಿ ಹನುಮಂತಪ್ಪ ಎಚ್, ಕೈಗಾರಿಕೆಗಳ ಪ್ರತಿನಿಧಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!