ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ: ಬೀರಪ್ಪ ಅಂಡಗಿ

Get real time updates directly on you device, subscribe now.


ಕೊಪ್ಪಳ:ಕೇಂದ್ರ ಸರಕಾರ ನೀಡುವ ಅತ್ಯಂತ ಶ್ರೇಷ್ಠ ಪ್ರಶಸ್ತಿಯಾದ ಭಾತರ ರತ್ನವನ್ನು ವಿಕಲಚೇತನರ ಬಾಳಿನ ಆಶಾಕಿರಣವಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರವಾಗಿ ನೀಡುವ ಮೂಲಕ ವಿಕಲಚೇತನ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸೋಮವಾರ ವಿಕಲಚೇತನ ನೌಕರರ ಸಂಘ ಹಾಗೂ ಸಿ.ಪಿ.ಎಸ್.ಶಾಲೆಯ ಸಂಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರವನ್ನು ಉದ್ದೇಶಸಿ ಮಾತನಾಡಿ,ಕೇಂದ್ರ ಸರಕಾರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಅನೇಕ ಪ್ರಶಸ್ತಿಗಳನ್ನು ನೀಡುತ್ತದೆ.ಇಂತಹ ಪ್ರಸಸ್ತಿಗಳಲ್ಲಿ ಅತ್ಯಂತ ಶ್ರೇಷ್ಠವಾದ ಭಾರತ ರತ್ನ ಪ್ರಶಿಸ್ತಿಯನ್ನು ಅಂಧರಾಗಿದ್ದು ಕೂಡಾ ಸಾಮಾನ್ಯರಿಗಿಂತ ಹೆಚ್ಚು ಸಾಧನೆಯನ್ನು ಸಂಗೀತ ಕ್ಷೇತ್ರದಲ್ಲಿ ಮಾಡಿದ ವಿಕಲಚೇತನರ ಆಶಾ ಕಿರಣವಾಗಿದ್ದ ಪಂಡಿತ ಪಟ್ಟರಾಜ ಗವಾಯಿಗಳಿಗೆ ನೀಡುವಂತೆ ಹಲವು ವರ್ಷಗಳಿಂದ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲಾ.ರಾಜ್ಯದಲ್ಲಿ ೩೦ಲಕ್ಷ ವಿಕಲಚೇತನರಿಗೆ ಗೌರವ ಸಿಗಬೇಕಾದರೆ ಜೊತೆಯಲ್ಲಿ ವಿಕಲಚೇತನರ ದಿನಾಚರಣೆಗೆ ಮಹತ್ವ ಬರಬೇಕಾದರೆ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿದಾಗ ಮಾತ್ರ ವಿಕಲಚೇತನರ ಸಮುದಾಯಕ್ಕೆ ಗೌರವ ಕೊಟ್ಟಂತೆ ಆಗುತ್ತದೆ.ಈ ನಿಟ್ಟಿನಲ್ಲಿ ಕೇದ್ರ ಸರಕಾರವು ಗಮನ ಹರಿಸಬೇಕು.ಅಲ್ಲದೇ ಜನಪ್ರತಿನಿದಿಗಳು ಕೂಡಾ ಕೇಂದ್ರ ಸಕಾರವನ್ನು ಒತ್ತಾಯ ಮಾಡಬೇಕು.ವಿಕಲಚೇತನರು ತಮ್ಮ ಸಾಮರ್ಥಕ್ಕೆ ಅನುಗುಣವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸರಕಾರದ ಜೊತೆಯಲ್ಲಿ ಸಂಘ-ಸಂಸ್ಥೆಗಳು ಕೂಡಾ ಅವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ.ಅಂದಾಗ ಮಾತ್ರ ಅವರು ಹೆಚ್ಚು ಸಾಧನೆ ಮಾಡಲು ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಟಿ.ಜಿ.ಟಿ.ಶಿಕ್ಷಕರಾದ ಮೊಹಮ್ಮದ ಆಬೀದ ಹುಸೇತ ಅತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ ಮಾತನಾಡುತ್ತಾ,ವಿಕಲಚೇತನರ ಬಗ್ಗೆ ನಾವು ಅನುಕಂಪ ಪಡುವ ಬದಲಾಗಿ ಅವರಿಗೆ ಅವಕಾಶವನ್ನು ಒದಗಿಸಿಕೊಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ.ವಿಕಲಚೇತನರ ಸೇವೆಯು ದೇವರ ಸೇವೆಗೆ ಸಮಾನವಾಗಿದೆ.ವಿಕಲಚೇತನರು ಕೂಡಾ ಅಂಗವಿಕಲತೆಯನ್ನು ಶಾಪವಾಗಿ ಸ್ವೀಕರಿಸದೇ ಅದನ್ನು ವರವಾಗಿ ಸ್ವೀಕರಿಸಿಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ,ಪದವೀದರ ಶಿಕ್ಷಕರಾದ ಮಲ್ಲಿಕಾರ್ಜುನ ಹ್ಯಾಟಿ,ನಾಗಪ್ಪ ನರಿ,ಶ್ರೀದೇವಿ ಕುಲಕರ್ಣಿ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಭಾರತಿ ಆಡೂರು ನಿರೂಪಿಸಿದರು.
ಶಿಕ್ಷಕಿ ಶೀಲಾ ಬಂಡಿ ಸ್ವಾಗತಿಸಿ,ಜಯಶ್ರೀ ದೇಸಾಯಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!