ಗಂಗಾವತಿಯಲ್ಲಿ ಶಾಂತಿಯನ್ನು ಕಾಪಾಡಲು ತುರ್ತು ಕ್ರಮಕ್ಕಾಗಿ ಭಾರತ ಕಮ್ಯುನಿಸ್ಟ್ ಪಕ್ಷ- (ಮಾರ್ಕ್ಸ್ ವಾದಿ) ಅಗ್ರಹ
ಈ ಮೂಲಕ ಭಾರತ ಕಮ್ಯುನಿಸ್ಟ್ ಪಕ್ಷ- ಮಾರ್ಕ್ಸ್ ವಾದಿ- ತಾಲೂಕ ಸಮಿತಿ ಕೊಪ್ಪಳ. ತಮ್ಮ ಗಮನಕ್ಕೆ ತರ ಬಯಸುವುದೇನೆಂದರೆ. ಇತ್ತೀಚೆಗೆ ಗಂಗಾವತಿ ನಗರದಲ್ಲಿ ಮುಸ್ಲಿಂ ಸಮುದಾಯದ ಅಂಧ ವ್ಯಕ್ತಿ ಒಬ್ಬರನ್ನು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವಂತೆ ದುಷ್ಕರ್ಮಿಗಳ ಗುಂಪೊಂದು ಬಲವಂತ ಮಾಡಿ ಆತನ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಸಿಪಿಎಂ ಪಕ್ಷ ಕೊಪ್ಪಳ ತಾಲೂಕು ಸಮಿತಿಯು ತೀವ್ರವಾಗಿ ಖಂಡಿಸಿದೆ
ಹಲ್ಲೆಗೊಳಗಾದವರು ಸುಮಾರು 65 ವರ್ಷ ದ ಹುಸೇನ್ ಸಾಬ್ ಎಂಬುವ ರಾಗಿದ್ದು ಅಲ್ಲೇ ಕೋರರು ಅವನನ್ನು ನೆಲದ ಮೇಲೆ ಬೀಳಿಸಿ ಅವನ ಗಡ್ಡಕ್ಕೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಈ ಪ್ರದೇಶದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು ಕೋಮು ಗಲಭೆಗಳು ಮರುಕಳಿಸುವ ಅಪಾಯ ವ್ಯಾಪಕವಾಗುತ್ತಿದೆ. ಆದ್ದರಿಂದ ಹಲ್ಲೆಗೊಳಗಾದ ಹುಸೇನ್ ಸಾಬ್ ರವರಿಗೆ ಅಗತ್ಯ ರಕ್ಷಣೆಯನ್ನು ಹಾಗೂ ಸೂಕ್ತ ಚಿಕಿತ್ಸೆಯನ್ನು ಒದಗಿಸಬೇಕು. ಕೋಮುಗಲಭೆಗಳಿಗೆ ಕಾರಣವಾಗುತ್ತಿರುವ ಇಂತಹ ಪುಂಡರನ್ನು ಜಿಲ್ಲಾಡಳಿತ ಕೂಡಲೇ ಪತ್ತೆ ಹಚ್ಚಿ ಬಂಧಿಸಿ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಗಂಗಾವತಿ ನಗರದಲ್ಲಿ ಹೆಚ್ಚುತ್ತಿರುವ ಗಲಭೆಗಳನ್ನು ತಡೆದು ನಗರದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ನೆಲೆಸುವಂತೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕು, ಮಾನವೀಯತೆಯ ದೃಷ್ಟಿಯಿಂದ ಹಲ್ಲೆಗೊಳಗಾದ ವೃದ್ಧ ಹುಸೇನ್ ಸಾಬ್ ರವರಿಗೆ 5. ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಕಾರ್ಯದರ್ಶಿ ಸುಂಕಪ್ಪ ಗದಗ್ ಸಿಪಿಐ ಎಂ ತಾಲೂಕ ಸಮಿತಿ ಕೊಪ್ಪಳ ಮನವಿ ಮಾಡಿದ್ದಾರೆ
Comments are closed.