ಶೀಘ್ರ ನಿಮ್ಮ ಬೇಡಿಕೆ ಈಡೇರಲಿ: ಗೊಂಡಬಾಳ
-ಅತಿಥಿ ಉಪನ್ಯಾಸಕರಿಗೆ ಭರವಸೆಯ ಹಸ್ತ
ಕೊಪ್ಪಳ: ಸುಮಾರು ಎಂಟು ದಿನಗಳಿಂದ ನಡೆಸುತ್ತಿರುವ ನಿಮ್ಮ ಧರಣಿ ಕೊನೆಗಾಣುವ ಸಮಯ ಬೇಗ ಬರಲಿ. ನಿಮ್ಮ ಬೇಡಿಕೆ ಶೀಘ್ರ ಈಡೇರಲಿ ಎಂದು ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಮಂಜುನಾಥ ಗೊಂಡಬಾಳ ಹಾರೈಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮುಂದುವರಿದ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಶುಕ್ರವಾರ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಮಾಡಿದ ಅಳಿಲು ಸೇವೆ ಕೊಂಡಾಡುತ್ತಿರುವುದು ಕೊಂಚ ಮುಜುಗರ ತರುತ್ತಿದೆ. ನಿಮ್ಮ ಜೊತೆ ಸದಾ ನಾವಿರುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ನಿಮಗೆ ಸಿಹಿ ಸುದ್ದಿ ಸಿಗಲಿ ಎಂದು ಶುಭ ಕೋರಿದರು.
ಶಿವಬಸಪ್ಪ ಮಸ್ಕಿ ನಿರೂಪಿಸಿದರು. ಡಾ.ತುಕಾರಾಂ ನಾಯಕ ವಂದಿಸಿದರು. ಈ ವೇಳೆ ಅತಿಥಿ ಉಪನ್ಯಾಸಕರಾದ ಶಿವಮೂರ್ತೆಪ್ಪ, ಗೀತಾ, ಗಿರಿಜಾ, ಬಸವರಾಜ ಕರುಗಲ್, ವಿಜಯಕುಮಾರ್, ಪ್ರಕಾಶ್ ಜಡಿಯವರ್, ನವೀನ್, ಮಹಾಂತೇಶ ನೆಲಾಗಣಿ, ಶೀಬಾ ಬಸವರಾಜ, ಜ್ಞಾನೇಶ್ವರ ಪತ್ತಾರ, ಗೋಣಿಬಸಪ್ಪ, ಡಾ.ವೀರಣ್ಣ ಸಜ್ಜನರ್, ಡಾ.ಸಣ್ಣದೇವೇಂದ್ರಸ್ವಾಮಿ, ರವಿ ಹಿರೇಮಠ, ಪ್ರದೀಪ್, ಮಹೇಶ್, ಈಶಪ್ಪ ಮೇಟಿ, ಬಿಷ್ಠಪ್ಪ, ಪ್ರಕಾಶ್ ಬಳ್ಳಾರಿ, ಎಂ.ಶಿವಣ್ಣ, ಸಾವಿತ್ರಿ, ಅಕ್ಕಮಹಾದೇವಿ ಇತರರು ಇದ್ದರು.
Comments are closed.