ವಿಶೇಷ ದತ್ತು ಕೇಂದ್ರ ಆಶ್ರಯದಲ್ಲಿ ಮಕ್ಕಳ ಪೋಷಣೆ ಆರೈಕೆ -ತಿಪ್ಪಣ್ಣ ಸಿರಸಗಿ
ಮಕ್ಕಳ ಮಾರಾಟ ಘೋರ ಶಿಕ್ಷಾರ್ಹ ಅಪರಾಧ : ತಿಪ್ಪಣ್ಣ ಸಿರಸಗಿ
ಕೊಪ್ಪಳ : ಮಕ್ಕಳ ಮಾರಾಟ ಘೋರ ಶಿಕ್ಷಾರ್ಹ ಅಪರಾಧವಾಗಿದೆ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿಯೇ ಇರುವ ವಿಶೇಷ ದತ್ತು ಕೇಂದ್ರ ಆಶ್ರಯದಲ್ಲಿ ಮಕ್ಕಳ ಪೋಷಣೆ ಆರೈಕೆ ಕಲ್ಪಿಸಲು ಅವಕಾಶವಿರುತ್ತದೆ. ಸಮಗ್ರ ಮಕ್ಕಳ ರಕ್ಷಣೆಯ ಯೋಜನೆಯ ಅಡಿಯಲ್ಲಿ ಪೋಷಕತ್ವ ಯೋಜನೆ ಮತ್ತು ದತ್ತು ಪ್ರಕ್ರಿಯೆ ಯೋಜನೆಗೆ ಮಗುವನ್ನು ನೊಂದಾಯಿತ ದತ್ತು ಪ್ರಕ್ರಿಯೆಯ ನೊಂದಾವಣೆ ಪೋಷಕರಿಗೆ ಮಗುವನ್ನು ದತ್ತು ನೀಡಲಾಗುತ್ತದೆ ಎಂದು ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಿಪ್ಪಣ್ಣ ಸಿರಸಗಿ ಹೇಳಿದರು.
ಅವರು ನವೆಂಬರ ಮಾಹೆ ಅಂತರಾಷ್ಟ್ರೀಯ ದತ್ತು ಮಾರ್ಷಾಚರಣೆಯ ದತ್ತು ಕಾರ್ಯಕ್ರಮದ ಪರಿಕಲ್ಪನೆಯ ಅಡಿಯಲ್ಲಿನ “ಮಮತೆಯ ತೊಟ್ಟಿಲು” ಯೋಜನೆಯ ಕುರಿತು ಜಾಗೃತಿ ನೀಡುವ ನಾಮಫಲಕವನ್ನು ಸಖಿ ಒನ್ ಸ್ಟಾಪ್ ಸೆಂಟರ್ ಜಿಲ್ಲಾ ಆಸ್ಪತ್ರೆಯಲ್ಲಿ ಸಚಿವನ್ ಸ್ಟಾಪ್ ಸೆಂಟರ್ ಉದ್ಘಾಟಿಸಿ ಮಾತನಾಡಿ, ಶಿಶುಗಳ ರಕ್ಷಣೆಗಾಗಿ ಸಮುದಾಯದಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವುದು ಹಾಗೂ ಎಲ್ಲೆಂದರಲ್ಲಿ ಕಸದ ತೊಟ್ಟಿ, ಶೌಚಾಲಯ, ಚರಂಡಿಗಳಲ್ಲಿ ಅಮಾನವೀಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಬಾದಿತ ಅಥವಾ ಸಂಕಷ್ಟದಲ್ಲಿ ಇರುವಂತಹ ಮಹಿಳೆಯು ಸಖಿ ಒನ್ ಸ್ಟಾಪ್ ಸೆಂಟರ್ ನ ಮೂಲಕ ಸಹಕಾರವನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ತಿಳಿಸಿದರು.
ಬೇಡವಾದ ಗರ್ಭಧಾರಣೆ ಇದ್ದಲ್ಲಿ 24 ವಾರಗಳ ಅವಧಿಯ ಗರ್ಭಧಾರಣೆ ಮೀರಿದ ನಂತರ ತಾಯಿ ಗರ್ಭದಲ್ಲಿ ಮಗುವಿನ ಬೆಳವಣಿಗೆ ಹೃದಯ ಬಡಿತ ದೇಹದ ಬೆಳವಣಿಗೆ ಸಂಪೂರ್ಣವಾಗಿ ಮೂಡಿರುತ್ತದೆ. ಆದರೆ ತನಗೆ ಗರ್ಭ ಬೇಡವೆಂದು ವೈದ್ಯರಿಗೆ ತಿಳಿಸಿದಾಗ ವೈದ್ಯರು ಗರ್ಭಪಾತ ಸೂಕ್ತವಲ್ಲವೆಂದು ತಿಳಿ ಹೇಳಿದ್ಯಾಗ್ಯ ಕೂಡ, ಮಹಿಳೆಯು ತನಗೆ ತಾನೇ ಔಷಧ ಅಂಗಡಿಯಿಂದ ಮಾತ್ರೆಗಳನ್ನು ತೆಗೆದುಕೊಂಡು ತೀವ್ರ ರಕ್ತಸ್ರಾವದಂತಹ ಸಮಸ್ಯೆಗೆ ಒಳಗುತ್ತಾರೆ. ಇದು ತಾಯಿ ಜೀವಕ್ಕೆ ಮತ್ತು ಗರ್ಭದ ಮಗುವಿಗೂ ಕಂಟಕ ವಾಗಿರುತ್ತದೆ ಇಂತಹ ಅವಗಡಗಳನ್ನು ತಪ್ಪಿಸುವಲ್ಲಿ ಸುರಕ್ಷಿತವಾದ ಪೋಷಣೆ ಆರೈಕೆಯನ್ನು ಸರ್ಕಾರದಿಂದ ಸಖಿ ಒನ್ ಸ್ಟಾಪ್ ಸೆಂಟರ್ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ “ಒಂದೇ ಸೂರಿನಲ್ಲಿ ಸಮಗ್ರ ಸೌಲಭ್ಯ” ಅಡಿಯಲ್ಲಿ ಆಶ್ರಯ, ಪೋಷಣೆ ಆರೈಕೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗುತ್ತದೆ ನಂತರ ತಾಯಿಗೆ ಮಗು ಬೇಡವೆಂದಾದರೆ ಮಮತೆಯ ತೊಟ್ಟಿಲು ಯೋಜನೆ ಅಡಿಯಲ್ಲಿ ಮಗುವನ್ನು ಇಲಾಖೆಗೆ ಶರಣಾಗತಿ ಮಾಡಬಹುದಾಗಿರುತ್ತದೆ ಹಾಗೂ ಸದರಿ ಭಾದಿತ ಮಹಿಳೆಯ ಕುರಿತು ಗೌಪ್ಯತೆಯನ್ನು ಕಾಪಾಲ ಕಾಪಾಡಲಾಗುತ್ತದೆ ಎಂದು ಸಖಿ ಘಟಕದ ಆಡಳಿತ ಅಧಿಕಾರಿಗಳು ತಿಳಿಸಿರುತ್ತಾರೆ.
ಶಿಶುಗಳ ರಕ್ಷಣೆಗೆ ಮಮತೆಯ ತೊಟ್ಟಿಲು ಯೋಜನೆಯನ್ನು ಪ್ರಾಯೋಗಿಕ ಮಮತೆಯ ತೊಟ್ಟಿಲನ್ನು ಭಾಗ್ಯನಗರದ ಇನ್ನರ್ ವೀಲ್ ಕ್ಲಬ್ ನ ಅದ್ಯಕ್ಷರಾದ ಶಾರದಾ ಆರ್ ಪಾನಘಂಟಿ ಸಖಿ ಒನ್ ಸ್ಟಾಪ್ ಸೆಂಟರ್ ಆವರಣದಲ್ಲಿ ಕೊಡುಗೆಯಾಗಿ ನೀಡಿದರು. ಕೊಪ್ಪಳ ಮತ್ತು ಇಲಾಖೆಯ ಸಹಯೋಗದಲ್ಲಿ ಮಮತೆಯ ತೊಟ್ಟಿಲನ್ನು ಇಡಲಾಗಿರುತ್ತದೆ, ಸಾರ್ವಜನಿಕರು ತಮಗೆ ಬೇಡವಾದ ಮಗುವನ್ನು ಈ ತೊಟ್ಟಿಲಿಗೆ ಹಾಕಬೇಕಾಗಿರುತ್ತದೆಂದು ಮುದ್ದು ಕಂದನ ಹೇಳಿಕೆಯನ್ನು ನಾಮಫಲಕದಲ್ಲಿ ಬರೆಯುವುದರ ಮಮತೆಯ ತೊಟ್ಟಿಲಿನ ನಾಮಫಲಕವನ್ನು ಸಖಿ ಘಟಕದ ಮುಂದೆ ಅನಾವರಣಗೊಳಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ಕನಕಗಿರಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುಪಾಕ್ಷಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ದತ್ತು ಪ್ರಕ್ರಿಯೆಯ ಯೋಜನಾಧಿಕಾರಿ ಪ್ರಶಾಂತ್,
ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸುವರ್ಣ ಪಾನಘಂಟಿ, ಹಾಗೂ ತಂಡದ ಸದಸ್ಯರು, ಮತ್ತು ಸಖಿ ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಯಮುನಾ ಹಾಗೂ ತಂಡ ಸದಸ್ಯರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
Comments are closed.