ಕುಷ್ಟಗಿಯಲ್ಲಿ ಜನತಾ ದರ್ಶನ -15 ದಿನಗಳೊಳಗೆ ಅರ್ಜಿ ವಿಲೆಗೆ ಕ್ರಮವಹಿಸಿ: ಶಿವರಾಜ ತಂಗಡಗಿ

Get real time updates directly on you device, subscribe now.

ಕುಷ್ಟಗಿಯಲ್ಲಿ ಜನತಾ ದರ್ಶನ

*15 ದಿನಗಳೊಳಗೆ ಅರ್ಜಿ ವಿಲೆಗೆ ಕ್ರಮವಹಿಸಿ: ಶಿವರಾಜ ತಂಗಡಗಿ*
ಮಹತ್ವದ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಅರ್ಜಿಗಳು ಕಾಲಮಿತಿಯೊಳಗೆ ವಿಲೇಯಾಗಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಡಿಸೆಂಬರ್ 01ರಂದು ಕುಷ್ಟಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂ ಹಾಲನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನತಾ ದರ್ಶನ ವೇದಿಕೆಯಡಿ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆವರೆಗೆ 60 ಅರ್ಜಿಗಳು ಸ್ವೀಕೃತವಾಗಿದ್ದು, ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಬೇಕು.
ಅನವಶ್ಯಕವಾಗಿ ಪೆಂಡಿಂಗ್ ಇಡಬಾರದು. ಯಾವುದೇ
ನೆಪ ಹೇಳದೇ ಅರ್ಜಿಗಳನ್ನು ವಿಲೇಗೊಳಿಸಬೇಕು ಎಂದು ಸಚಿವರು 15 ದಿನಗಳ ಗಡುವು ವಿದಿಸಿದರು.
ನಾನಾ ಸಮಸ್ಯೆಗಳನ್ನು ಹೊತ್ತು ಬಹಳಷ್ಟು ಜನರು
ತಹಸೀಲ್ ಕಚೇರಿ ಸೇರಿದಂತೆ ಕೆಲವು ಕಚೇರಿಗಳಿಗೆ ಅಲೆಯುವುದು ನಿತ್ಯದ ದೃಶ್ಯಗಳಾಗಿರುತ್ತದೆ. ಇದು ಬದಲಾಗಬೇಕು. ಸಾಮಾನ್ಯ ಜನರು ಕಚೇರಿಗೆ
ಅಲೆಯ ಕೂಡದು ಎಂದು
ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಜನತಾ ದರ್ಶನದಲ್ಲಿ ಬರುವ ಅರ್ಜಿಗಳು ಪೆಂಡಿಂಗ್ ಉಳಿಸಿದರೆ ಯಾರಿಗೂ ಬಿಡುವುದಿಲ್ಲ. ಶಿಸ್ತಿನ ಕ್ರಮಕ್ಕೆ ಒಳಪಡಿಸುವೆ ಎಂದು ಇದೆ ವೇಳೆ ಎಚ್ಚರಿಕೆ‌ ನೀಡಿದರು.
ಇದೆ ವೇಳೆ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಮಾತನಾಡಿ, ಜನತಾ ದರ್ಶನವು ಸರ್ಕಾರದ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಜನತಾ ದರ್ಶನದಲ್ಲಿ ಮಧ್ಯಾಹ್ನವರೆಗೆ 60 ಅರ್ಜಿಗಳು ಬಂದಿವೆ. ಕುಷ್ಟಗಿ ತಾಲೂಕಿನಲ್ಲಿ ಸಮಸ್ಯೆಗಳು ಹೆಚ್ಚಿದ್ದರು ಸಹ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಹಾಗಂತ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಭಾವಿಸಬಾರದು. ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ
ಸೇವೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಜನರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು. ಕೇಂದ್ರ ಸರ್ಕಾರ ಸಹ ಅಗತ್ಯ ಪ್ರಮಾಣದಲ್ಲಿ ಬರ ಪರಿಹಾರದ ಅನುದಾನ ನೀಡಲಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕರಾದ ಶರಣಗೌಡ ಬಯ್ಯಾಪುರ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಕುಷ್ಟಗಿ ತಹಸೀಲ್ದಾರ ಶ್ರುತಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಪ್ರಾಸ್ತಾವಿಕ ಮಾತನಾಡಿದರು.

Get real time updates directly on you device, subscribe now.

Comments are closed.

error: Content is protected !!