ಹುಬ್ಬಳ್ಳಿಯ ಭೂಮರೆಡ್ಡಿ ಇಂಜನಿಯರಿಂಗ್ ಕಾಲೇಜು ಗೊತ್ತು ! ಇದನ್ನು ಆರಂಭಿಸಿದ ಭೂಮರೆಡ್ಡಿ ಬಸಪ್ಪನವರು ಯಾರು ಗೊತ್ತೇ?

Get real time updates directly on you device, subscribe now.

ನಮಗೆಲ್ಲ ಹುಬ್ಬಳ್ಳಿಯ ಭೂಮರೆಡ್ಡಿ ಇಂಜನಿಯರಿಂಗ್ ಕಾಲೇಜು ಗೊತ್ತು.ಆದರೆ ಇದನ್ನು ಆ ಕಾಲದಲ್ಲಿ ನೆರವು ನೀಡಿ ಆರಂಭಿಸಿದ ಭೂಮರೆಡ್ಡಿ ಬಸಪ್ಪನವರು ಅವರು ಯಾರು ಗೊತ್ತೇ? #ಸಾಹಸಿ_ಉದ್ಯಮಿ_ಭೂಮರಡ್ಡಿ_ಬಸವಪ್ಪನವರು

#ಕಾಯಕವೇ_ಕೈಲಾಸ ಎಂದು ನಂಬಿ ಅದೇರೀತಿ ನಡೆದುಕೊಂಡು ದೇಶದ ಜನರಿಂದ OIL KING ಎಂದು ಕರೆಸಿಕೊಂಡವರು ಬಸವಪ್ಪ ಭೂಮರೆಡ್ಡಿಯವರು. ಶೂನ್ಯದಿಂದ ಸಾಹುಕಾರಿಕೆಯ ಉತ್ತಂಗಕ್ಕೆ ಎರಿದವರು..

ಜನ್ಮ ಕೂಪ್ಪಳ ಜಿಲ್ಲೆಯ ಯಲ್ಬುರ್ಗದ ಬನ್ನಿಕೂಪ್ಪ ಗ್ರಾಮದಲ್ಲಿ 1885, ರಲ್ಲಿ. ಬನ್ನಿಕೊಪ್ಪದಲ್ಲಿ ಬಸಲಾಪುರದ ವೀರನಗೌಡ್ರು ನಡೆಸುತ್ತಿದ್ದ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಗಣಿತ ಬಸವಪ್ಪನವರ ಮೇಚ್ಚಿನ ವಿಷಯ. ಮನೆಯ ಬಡತನ ಕಾಣದಿಂದ ಕೇವಲ ಆರನೇಯ ತರಗತಿವರೆಗೆ ಮಾತ್ರ ಶಿಕ್ಷಣ ಸಾಧ್ಯವಾಯಿತು.

ನಂತರ ಕೂಪ್ಪಳದಲ್ಲಿ ಅಡುಗೆ ಎಣ್ಣೆ ಮಾರುವ ಅಂಗಡಿಗಳಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ನಂತರ ಬನ್ನಿಕೂಪ್ಪದಲ್ಲಿಸ್ವಂತ ಚಿಕ್ಕ ಕಿರಾಣಿ ಅಂಗಡಿ ತೆರೆದರು. ಹತ್ತಿ ಬೆಳೆಯ ಸುಗ್ಗಿಯಲ್ಲಿಬಮನೆ ಮನೆ ತೆರಳಿ ಹತ್ತಿ ಖರಿದಿಸಿದರು. ನಂತರ ಊರುರು ಅಲೆದು ಬಳ್ಳೊಳ್ಳಿ , ಜೀರಿಗೆ ಮಾರಾಟ ಮಾಡಿದರು. ಅಲ್ಲಿಂದ ಗದಗಿನ ದಲಾಲಿ ಅಂಗಡಿಯಲ್ಲಿ ಖಜಾಂಚಿಯ ಕೆಲಸ ಪ್ರಾರಂಬಿಸಿದರು. ಕೆಲಸದಲ್ಲಿ ನಿಷ್ಠೆ ತೂರಿದ್ದಕ್ಕೆ ವ್ಯಾಪಾರದಲ್ಲಿ ಎರಡು ಆಣೆ ಪಾಲು ಕೂಟ್ಟರು.

ಹುಮ್ಮಸಿನಿಂದ ದುಡಿದು ವ್ಯಾಪಾರದ ಆಳ ಅಗಲ ಅರಿತರು. ಹೀಗೆ ಕೆಲಸ ಮಾಡುತ್ತಾ ಮತ್ತೂಂದಿಷ್ಟು ಜನರೂಂದಿಗೆ ವ್ಯಾಪಾರದ ಪಾಲುದಾರರಾದರು. ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಬಸ್ ಸಂಚಾರ ಸೇವೆ ಒದಗಿಸಿದ್ದೆ ಭೂಮರಡ್ಡಿ ಬಸವಪ್ಪನವರು. ಇದಕ್ಕೆ ಒಬ್ಬರಿಗೆ ಬಂಡವಾಳ ಹಾಕಲು ಸಾದ್ಯವಾಗದೆ ಇದ್ದಾಗ ಮೂವರು ಜನರನ್ನು ಸಾರಿಗೆ ವ್ಯಾಪಾರದ ಪಾಲುದಾರನ್ನಾಗಿಸಿಕೂಂಡು ಬಸ್ ಸಂಚಾರ ಆರಂಬಿಸಿದರು. ಬಸ್ ಸಂಚಾರದ ಮಾರ್ಗ ಬಾಗಲಕೋಟೆ ಮತ್ತು ಇಳಕಲ್ ಮದ್ಯ 1917 ರಲ್ಲಿ ಪರವಾನಿಗೆ ಪಡೆದರು. ಆದರೆ ಬಸ್ ನ ವೀಪರಿತ ಸಪ್ಪಳಕ್ಕೆ ಜನ ಹೆದರಿ ಓಡಲು ಪ್ರಾರಂಭಿಸಿದರು. ಕಾರಣ ಆಗ ಬಸ್ ಗಾಲಿ ಗಾಳಿಯಿಂದ ತುಂಬಿರದೇ solid ಇದ್ದವು. ಜನರಿಂದ ಸ್ಪಂದನೆ ದೂರೆಯದ ಕಾರಣ ಉದ್ಯಮದಲ್ಲಿ ನಷ್ಟ ಕಂಡರು. ಸರಕಾರ ಬಸ್ಸಿನ ಲಾಯಸ್ಸನ್ಸ ರದ್ದು ಮಾಡಿದರಿಂದ 1919ರಲ್ಲಿ ಸಂಚಾರ ನಿಲ್ಲಿಸಿದರು. ಆಗ ಇವರಲ್ಲಿ ಎರಡು ಬಸ್ಸುಗಳಿದ್ದವು.

ನಂತರ ಬಸವಪ್ಪ ನವರು ಹೈದರಾಬಾದ್ ನಿಜಾಮನ ರಾಜ್ಯ ದಲ್ಲಿ ಹಣ ಭರಣ ಮಾಡಿ 5ವರ್ಷ ಬಸ್ ಸಂಚಾರಕ್ಕೆ ನಿಜಾಮನೊಂದಿಗೆ monopoly ಒಪ್ಪಂದ ಮಾಡಿಕೂಂಡರು. 1920ರಲ್ಲಿ ಬಿ ವಿ ಭೂಮರೆಡ್ಡಿ ಗ್ಯಾರೆಂಟೆಡ ಮೋಟರ ಸರ್ವಿಸ್ ಹೆಸರಿನಲ್ಲಿ ಸ್ವಂತ ಕಂಪನಿ ಆರಂಬಿಸಿದರು. ಸಿಬ್ಬಂದಿಗಳನ್ನು ಮನೆಯ ಮಕ್ಕಳಂತೆ ನೋಡಿಕೂಂಡರು. ಆಗಲೇ ಅವರಿಗೆ ದಿನಕ್ಕೆ 50/60ರೂಪಾಯಿ ಸಂಬಳ ನೀಡುತ್ತಿದ್ದರು. ಸಾರಿಗೆ ಉದ್ಯಮ ಚನ್ನಾಗಿ ನಡೆಯುವಾಗ ಸಹಿಸದ ಕೆಲವರು ನಿಜಾಮನಿಗೆ ತಕಾರಾರು ಕೂಟ್ಟರು. ನಿಜಾಮ ಸಾರಿಗೆ ಅನುಮತಿ ರದ್ದುಪಡಿಸಿದ. ಬಸವಪ್ಪ ನವರು ಮತ್ತೆ ನಜರಾಣಾ ಕೂಟ್ಟು 15ವರ್ಷದ monopoly ಗೆ ಬರೆಯಿಸಿಕೂಂಡರು. ಬಸ್ಸುಗಳ ಸಂಖ್ಯೆ 2 ರಿಂದ 40ಕ್ಕೆ ಏರಿತು.

1936ರಲ್ಲಿ ನಿಜಾಮ ಮತ್ತು ಬಸವಪ್ಪ ನವರ ಒಪ್ಪಂದ ಮುಗಿಯಿತು. ನಿಜಾಮನೂಂದಿಗೆ ಒಪ್ಪಂದ ಮುಗಿದಾಗ ಬಂದ ಹಣವನ್ನು ಅಡುಗೆ ಎಣ್ಣೆ ತಯಾರಿಕೆಯಲ್ಲಿ ತೂಡಗಿಸಿದರು. 1928 ಕಲ್ಬುರ್ಗಿಯಲ್ಲಿ oil mill ಸ್ಥಾಪಿಸಿದರು. 1930 ರಲ್ಲಿ ಬಳ್ಳಾರಿಯಲ್ಲಿ oil mill ಸ್ಥಾಪನೆ. 1931ರಲ್ಲಿ ಯಾದಗಿರಿಯಲ್ಲಿ oil mill,1935ರಲ್ಲಿ ತೆಲಂಗಾಣದ ಜಯಿರಾಬಾದ ಮತ್ತು ಮಹಾರಾಷ್ಟ್ರ ನಾಂದೇಡದಲ್ಲಿ oil mill ಸ್ಥಾಪಿಸಿದರು. ಎಲ್ಲ oil mill ಗಳಿಂದ ಉತ್ಪಾದನೆ ಯಾಗುವ ಎಣ್ಣೆಯನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ನಿತ್ಯ ಬ್ರಾಡ್ಗೇಜ್ ಮೂಲಕ ರೈಲ್ವೆ ಟ್ಯಾಂಕನಲ್ಲಿ ಸಾಗಿಸುತ್ತದ್ದರು. 1936ರಲ್ಲಿ ಪುಣಾದಲ್ಲಿ ಕಿರುಕಳ ಎಣ್ಣೆ ಅಂಗಡಿ ತೆಗೆದರು. 1938 ರಲ್ಲಿ ಗಜೇಂದ್ರಗಡದಲ್ಲಿ oil mill ಪ್ರಾರಂಭಿಸಿದರು.1940 ರಲ್ಲಿಸೌರಾಷ್ಟ್ರ ಅಮ್ಮರೇಲಿಯಲ್ಲಿ .

1939 ರಲ್ಲಿ ಮುಂಬೈಯಲ್ಲಿ ಬಿ.ವಿ.ಭೂಮರಡ್ಡಿ & ಕಂಪನಿ ಹೆಸರಿನ ದಲಾಲಿ ಅಂಗಡಿ ತೆರೆದರು. ಮುಂಬೈನ ವಜೀರ oil mill ಖರಿದಿಸಿ karnataka oil mill ಅಂತ ಹೆಸರು ಬದಲಾಯಿಸಿದರು. 1943ರಲ್ಲಿ ಮುಂಬೈ ಪಾಕಲಾಂಡ ನಲ್ಕಿ oil mill ಪ್ರಾರಂಬಿಸಿದರು. 1945 ರಲ್ಲಿ ಕೃಷ್ಣ oil mill ಪ್ರಾರಂಬಿಸಿದರು. ಹೀಗೆ ಕರ್ನಾಟಕ, ಆಂದ್ರಪ್ರದೇಶದ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಗಳಲ್ಲಿ ಎಣ್ಣೆ ಕಾರ್ಖಾನೆ ಪ್ರಾರಂಬಿಸಿ ದೇಶವ್ಯಾಪಿ ಕೀರ್ತಿ ಗಳಿಸಿ oil king ಎಂದೆ ಪರಿಚಿತರಾದರು. ಹತ್ತಾರು ಕಾರಖಾನೆಗೆ ಬೇಕಾಗುವ ಯಂತ್ರ ಖರೀದಿಸುವ ಬದಲು ಗದುಗಿನ ಇಮಾಮಸಾಬ ಡಂಬಳ ಅವರ ಜೂತೆ ಚರ್ಚಿಸಿ ಮುಂಬೈನ ಡಂಕನ ರೋಡಿನಲ್ಲಿ ಪ್ರೀಮಿಯರ್ ಇಂಜಿನೀಯರಿಂಗ್ ಕಂಪನಿ ಆರಂಭಿಸಿದರು.

ಭೂಮರಡ್ಡಿ ಬಸವಪ್ಪನವರು ಜರ್ಮನಿಯ ತಂತ್ರಜ್ಞಾನ ಅರಿಯಲು ಜರ್ಮನ್ ಪ್ರವಾಸವನ್ನು 1936 ಕೈಗೂಂಡರು. ಕನ್ನಡ, ಹಿಂದಿˌ ಮರಾಠಿ, ಗುಜರಾತಿ ಬಾಷೆಗಳು ಬಲ್ಲ ಬಸವಪ್ಪನವರಿಗೆ ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷ್ ಬರುತಿತ್ತು.

ಬಸವಪ್ಪ ನವರು ಮುಂಬೈನಲ್ಲಿ ಬಾಬುರಾವ್ ಎಂಬುವರ ಖಾನಾವಳಿಯಲ್ಲಿ ಊಟಮಾಡುವಾಗ ಕೆಮ್ಮು ಬಂದಿತು. ಆಗ ಬಾಬುರಾವ್ ಇನ್ನೂಮ್ನೆ ನಮ್ಮ ಕ್ಯಾಂಟಿನಗೆ ಊಟಕ್ಕೆ ಬರಬೇಡಿ ಎಂದ ಗರ್ವಿಷ್ಠ. ಹಠಕ್ಕೆ ಬಿದ್ದು ಬಸವಪ್ಪ ನವರು ಗೌರಿಶಂಕರ ಎಂಬ ಖಾನಾವಳಿ 1930 ರಲ್ಲಿ ಪ್ರಾರಭಿಸಿ ಕನ್ನಡಿಗರಿಗೆ ಮುಂಬೈನಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಮಾಡಿದರು..

1930 ರಲ್ಲಿ ಬಸವಪ್ಪನವರು ಕರ್ನಾಟಕ ಕೇಮಿಕಲ್ ವರ್ಕ್ಸ್ ಎನ್ನುವ ಔಷಧೀಯ ಕಂಪನಿ ಆರಂಭಿಸಿದರು. ನಂತರ ಅದನ್ನು ಡಾ. ತುಮ್ಮನಕಟ್ಟಿ ಅವರಿಗೆ ಬಿಟ್ಟು ಕೂಟ್ಟರು. ನಂತರ 1942-43 ರಲ್ಲಿ ಮುಂಬೈಯಲ್ಲಿ ನ್ಯೂ ಕರ್ನಾಟಕ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಪ್ರೆಸ್ ಹೆಸರಿನ ಮದ್ರಣಾಲಯ ಪ್ರಾರಂಬಿಸಿದರು. 1952ರಲ್ಲಿ ಗದಗಿನಲ್ಲಿ ಕಾಟನ್ ಪ್ರೇಸಿಂಗ್ ಮತ್ತು ಜಿನ್ನಿಂಗ್ ಮಿಲ್ ಪ್ರಾರಂಭಿಸಿದರು. 1956 ರಲ್ಲಿ ಗದಗಿನಲ್ಲಿ ರವಾ ಮಿಲ್ ಪ್ರಾರಂಬಿಸಿದರು. 1959ರಲ್ಲಿ ಪೂಣಾ ಮತ್ತು ಮುಂಬಯಿ ಮದ್ಯ ಠಾಣಾದಲ್ಲಿ ಬಿ.ವಿ.ಭೂಮರಡ್ಡಿ ಕ್ವಾರಿ ಆರಂಬಿಸಿದರು.

ಇಷ್ಟೆಲ್ಲಾ ದೈತ್ಯ ಉದ್ಯಮ ಕಟ್ಟಿದ ಇವರಿಗೆ ಪ್ರಾಮಾಣಿಕ ನೌಕರರ ಸಮಸ್ಯ ಕಾಡಿತು. ಸರಕಾರ ಆದಾಯ ತೆರಿಗೆ ನೆಪದಲ್ಲಿ 20 ಲಕ್ಷ ಮುಂಗಡ ತೆರಿಗೆ ಕಟ್ಟಲು ಹೇಳಿತು. ಹಾಗಾಗಿ ಲೋಕದ ಸಹವಾಸವೇ ಸಾಕು ಎಂದು ಅಲ್ಲಲ್ಲಿ ದುಡಿಯುತ್ತಿರುವ ತಮ್ಮ ಸಂಬಂದಿಕರಿಗೆ ತಮ್ಮೆಲ್ಲ ಆಸ್ತಿ ಬರೆದು ಕೂಟ್ಟರು ಇನ್ನುಳಿದ್ದದನ್ನು ಮಾರಿ ದಾನ ಮಾಡಿದರು‌. ಅವರು ಮಾಡಿದ ದಾನ ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಶಾಸ್ವತ ಹೆಸರು ಮಾಡಿದೆ. ಇವರು ಆಗಿನ ಕಾಲದಲ್ಲಿ 20 ಲಕ್ಷಕ್ಕೂ ಅಧಿಕ ನಗದು ದಾನ ಮಾಡಿದ ಮಹಾಧಾನಿ.

ಇದರ ಪ್ರತಿಯಾಗಿ ಕೆ.ಎಲ್.ಇ ಸಂಸ್ಥೆಯ ಹುಬ್ಬಳ್ಳಿಯ B.V.B engineering ಮಹಾವಿದ್ಯಾಲಯ (ಇದು ಆರಂಭದಲ್ಲಿ ಗದಗದಿಂದ ಪ್ರಾರಂಬವಾಗಿ ನಂತರ ಹುಬ್ಬಳ್ಳಿಗೆ ಸ್ಥಳಾಂತರವಾಯ್ತುˌ)ಸ್ಥಾಪನೆಗೆ 1ಲಕ್ಷ ರೂಪಾಯಿ ಮತ್ತು ಅದಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಒದಗಿಸಿಕೂಟ್ಟರು. ಇದು ದೇಶದ ಅತ್ಯುನ್ನತ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಒಂದಾಗಿದೆ. ಅದಕ್ಕೆ ಅವರದೇ ಹೆಸರುಟ್ಟು k l e ಯವರು ಗೌರವಿಸಿದ್ದಾರೆ. ಕಲಬುರಗಿಯ ಹೈದ್ರಾಬಾದ್ ಶಿಕ್ಷಣ ಸಂಸ್ಥೆ ಕೂಡ ಬೀದರನಲ್ಲಿ ಇವರ ಹೆಸರಲ್ಲಿ ಒಂದು ಮಹಾ ವಿದ್ಯಾಲಯ ಸ್ಥಾಪಿಸಿದೆ.

ಮುಂಬಯಿ ಕರ್ನಾಟಕ ಸಂಘ ಕಟ್ಟಲು ಆರ್.ಡಿ. ಕಾಮತರಿಗೆ 1940 ರಲ್ಲಿ 25 ಸಾವಿರ ನಗದು ನೀಡಿದ್ದರು. ಹೀಗೆ ಅವರು ನೀಡಿದ ದೇಣಿಗೆಯ ಪಟ್ಟಿ ಆಕಾಶದೆತ್ತರಕ್ಕೆ ಬೆಳೆಯುವುದು. ಇವರಿಗೆ ಮಕ್ಕಳು ಆಗದೇ ಇದ್ದಾಗ ಇನ್ನೂಂದು ಮದುವೆಯಾಗಲು ತಿಳಿಹೇಳಿದ ಹಿರಿಯರಿಗೆ ಶಾಲೆಯ ಮುಂದೆ ಆಡುವ ಮಕ್ಕಳನ್ನೆಲ್ಕಾ ತೋರಿಸಿ ಅವೆಲ್ಲ ನನ್ನ ಮಕ್ಕಳೆ ಎಂದು ಅಭಿಮಾನದಿಂದ ನುಡಿದ ತತ್ವಜ್ಞಾನಿ ಭೂಮರಡ್ಡಿ ಬಸವಪ್ಪನವರು.

ಮಾಹಿತಿ
ಸಾಮಾಜಿಕ ಜಾಲತಾಣ. _ Basavaraj M Patil

Get real time updates directly on you device, subscribe now.

Comments are closed.

error: Content is protected !!
%d bloggers like this: