ಯುವತಿ ನಾಪತ್ತೆ: ಪತ್ತೆಗೆ ಸಹಕರಿಸಲು ಮನವಿ

Get real time updates directly on you device, subscribe now.

: ಗಂಗಾವತಿ ತಾಲ್ಲೂಕಿನ ಹೆರೂರ್ ಗ್ರಾಮದ ವಾರ್ಡ್ ನಂ.04ರ ನಿವಾಸಿಯಾದ ಕೀರ್ತಿ ರಾಮಣ್ಣ ಎಂಬ ಯುವತಿ ದಿನಾಂಕ: 21-08-2021 ರ ಬೆಳಗಿನ ಜಾವ 03 ಗಂಟೆಯಿAದ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.: 259/2021 ಕಲಂ: 363 ಐಪಿಸಿ ಅಪಹರಣ ಪ್ರಕರಣ ದಾಖಲಾಗಿದೆ.
ಯುವತಿಯ ಚಹರೆ:
ಯುವತಿಯು ಕಾಣೆಯಾದಾಗ 17 ವರ್ಷ, 02 ತಿಂಗಳ ವಯೋಮಾನದವಳಾಗಿದ್ದು, 5 ಅಡಿ ಎತ್ತರ, ದುಂಡು ಮುಖ, ಕಪ್ಪು ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಕೆಂಪು ದಡಿಯ ಸೀರೆ ಮತ್ತು ಕಪ್ಪು ಬಣ್ಣದ ರವಿಕೆ ಧರಿಸಿದ್ದಳು. ಕನ್ನಡ ಭಾಷೆ ಮಾತನಾಡುತ್ತಾಳೆ.
ಮೇಲ್ಕಂಡ ಚಹರೆಯ ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ: 08539-230222, ಪೊಲೀಸ್ ಉಪಾಧೀಕ್ಷಕರು ಗಂಗಾವತಿ: 08533-230853, 230854, 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಠಾಣೆಯ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!