ಡಿಸೆಂಬರ್-೦೯ ರ ೨ನೇ ರಾಜ್ಯ ಸಮಾವೇಶದ ಪೋಸ್ಟರ್ ಬಿಡುಗಡೆ

Get real time updates directly on you device, subscribe now.

ಗಂಗಾವತಿ: ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಾರ್ಟಿಯ ೨ನೇ ರಾಜ್ಯ ಸಮ್ಮೇಳನವು ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಡಿಸೆಂಬರ್ ೦೯ ಮತ್ತು ೧೦ ರಂದು ನಡೆಯಲಿದ್ದು, ಸಮ್ಮೇಳನದ ಪೋಸ್ಟರ್‌ನ್ನು ಇಂದು ಗಂಗಾವತಿ ನಗರದ ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು ಎಂದು ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದರು.
ದುಡಿಯುವ ವರ್ಗಗಳ ಪರ ಕೆಲಸ ಮಾಡುವ ಕಮ್ಯುನಿಸ್ಟ್ ಪಾರ್ಟಿಯ ೨ನೇ ರಾಜ್ಯ ಸಮಾವೇಶಕ್ಕೆ ಪಕ್ಷದ ಕಾರ್ಯಕರ್ತರ ಜೊತೆಗೆ ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿದರು.
ಇದೆ ಸಂದರ್ಭದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ, ಬುರಾನುದ್ದೀನ್, ಅಬ್ದುಲ್, ಹುಲಿಗೇಮ್ಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!