ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಹೊಸ ಯೋಜನೆ ಜಾರಿ: ಸಚಿವ ಸಂತೋಷ್ ಲಾಡ್
KUWJ, ರಾಜ್ಯ ವಿತರಕರ ಒಕ್ಕೂಟದಿಂದ ಅಭಿನಂದನೆ
ಬೆಂಗಳೂರು:
ಪತ್ರಿಕಾ ವಿತರಕರು ಶ್ರಮಜೀವಿಗಳಾಗಿದ್ದು, ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಹೊಸದಾಗಿ ಯೋಜನೆ ರೂಪಿಸಿ, ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಿಗೆ 2 ಲಕ್ಷ ವೈದ್ಯಕೀಯ ನೆರವಿಗೆ 1 ಲಕ್ಷ ರೂ ನೆರವಿನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂಧಿಸಿ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಸಂಘಟಿತ ವಲಯದಲ್ಲಿರುವ ಎಲ್ಲರಿಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಮೊದಲ ಹಂತವಾಗಿ ಪತ್ರಿಕಾ ವಿತರಕರಿಗೆ ಯೋಜನೆಯನ್ನು ಜಾರಿಗೆ ನೀಡಲಾಗಿದೆ ಎಂದರು.
ಸದುದ್ದೇಶಕ್ಕಾಗಿ ರೂಪಿಸಿರುವ ಯೋಜನೆ ದುರ್ಬಳಕೆ ಆಗಬಾರದು. ನಿಜವಾದ ಪತ್ರಿಕಾ ವಿತರಕರಿಗೆ ನೆರವಾಗುವಂತೆ ಮಾಡಲು ಸರ್ಕಾರ ನೀತಿ ನಿಯಮಾವಳಿ ರೂಪಿಸಲಿದ್ದು, ಅದಕ್ಕಾಗಿ ನಿಮ್ಮೆಲ್ಲರ ಸಹಕಾರವೂ ಮುಖ್ಯವಾಗಿದೆ ಎಂದರು.
ಯೋಜನೆಯನ್ನು ಜಾರಿಗೆ ನೀಡಲು ಸಿಎಂ ಸಿದ್ದರಾಮಯ್ಯ ಅವರ ಸಹಕಾರ ಕಾರಣ. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಕಾಳಜಿ ವಹಿಸಿದ್ದರು ಎಂದರು.
ವಿಶೇಷವಾಗಿ ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ತಮ್ಮನ್ನು ಆಗಾಗ್ಗೆ ಭೇಟಿ ಮಾಡಿ ವಿತಕರಿಗಾಗಿ ಯೋಜನೆ ಜಾರಿಗೆ ಒತ್ತಡ ತಂದಿದ್ದರು ಎಂದು ತಿಳಿಸಿದ ಕಾರ್ಮಿಕ ಸಚಿವರು, ಇದೇ ಸಂದರ್ಭದಲ್ಲಿ ವಿತರಕರ ಸಮ್ಮುಖದಲ್ಲಿ ಅವರನ್ನು ಅಭಿನಂದಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಪ್ರಧಾನ ಕಾರ್ಯದರ್ಶಿ ಸಂಗಮ್ ಸುರೇಶ್ ಅವರು, ಕಾರ್ಮಿಕ ಇಲಾಖೆ ತಂದ ಈ ಯೋಜನೆಯಿಂದ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ದೊಡ್ಡ ಭರವಸೆ ದೊರೆತಂತಾಗಿದೆ ಎಂದು ಶ್ಲಾಸಿ, ವಿತರಕರ ಪರವಾಗಿ ಕಾರ್ಮಿಕ ಸಚಿವರನ್ನು ಅಭಿನಂದಿಸಿದರು.
ರಾಜ್ಯ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳಾದ ಎಂ.ಟಿ.ಗೋಪಾಲ್,ಎಂ.ಆರ್. ಶ್ರೀನಿವಾಸ್, ಎನ್.ದೇವರಾಜ್, ಶಿವಶಾಂತ್, ನಾರಾಯಣಸ್ವಾಮಿ, ಬಿಯುಡಬ್ಲೂೃಜೆ ಉಪಾಧ್ಯಕ್ಷ ಜುಕ್ರಿಯಾ ಮತ್ತಿತರರು ಹಾಜರಿದ್ದರು.
Comments are closed.