ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರ ನೀಡಿ – ಕಾವೇರಿ ರಾಗಿ
ಕೊಪ್ಪಳ – 22 ನಗರದ 4ನೇ ವಾರ್ಡಿನ ಸರಕಾರಿ ಉರ್ದು ಶಾಲೆಯಲ್ಲಿ ಇಂದು ನಡೆದ ಮಕ್ಕಳ ದಿನಾಚರಣೆಯಲ್ಲಿ ಬಾಗವಹಿಸಲಿ ಮಾತನಾಡಿದ ಮಹಿಳಾ ತಾಲೂಕು ಎಸ್ ಸಿ ಘಟಕ ಅಧ್ಯಕ್ಷೆ ಕಾವೇರಿ ರಾಗಿವರು ಮಕ್ಕಳ ಉಜ್ವಲ ಭವಿಷ್ಯ ರೂಪಿಸಿವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವಾಗಿದೆ ಇಂದಿನ ಮಕ್ಕಳೆ ನಮ್ಮ ರಾಷ್ಟ್ರದ ಉತ್ತಮ ನಾಗರಿಕನ್ನಾಗಲೂ ಮಾಡಲು ಶಿಕ್ಷಕರ ಪಾತ್ರ ಮಹತ್ವದಾಗಿದೆ. ರಾಷ್ಟ್ರದ ಪ್ರಥಮ ಪ್ರದಾನಿ ಜವಾಹರಲಾಲ್ ನೆಹರು ರವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರನೆಯನ್ನಾಗಿ ಆಚರಣೆ ಮಾಡಲು ಆದೇಶ ನೀಡಿದರು ಈ ದಿನದ ವಿಶೇಷ ಮಕ್ಕಳ ಆರೈಕೆ ಹಾಗೂ ಶಿಕ್ಷಣದ ಜಾಗೃತಿ ಮೂಡಿಸುವ ದಿನವಾಗಿದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಭವಿಷ್ಯದ ನಿಷ್ಟಾವಂತ ನಾಗರಿಕರನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಕ್ಬರ ಪಾಷ ಪಲ್ಟನ್ ಬಸಯ್ಯ ಹಿರೇಮಠ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕರ್ಯದರ್ಶಿ ಪದ್ಮಾವತಿ ಕಂಬಳಿ, ಅಜಿಮುದ್ದಿನ್ ಅತ್ತಾರ ಸ.ಹಿ.ಪ್ರಾ.ಶಾಲೆ ಮುಖ್ಯೋಪಾದ್ಯಯರು, ಪೂರ್ಣಿಮಾ ವೆಂಕಟೇಶ ಚಿತ್ರಗಾರ ಶಿಕ್ಷಕ ವಿಕಲಚೇತರನ ರಾಜ್ಯಾಧ್ಯಕ್ಷ ಬೀರಪ್ಪ ಹಂಡಗಿ ಶಿಕ್ಷಕ ಪತ್ತಿನ ಸಹಾಕರ ಸಂಘದ ಅಧ್ಯಕ್ಷ ವೀರೇಶ ಅರಳಿಕಟ್ಟಿ ಯುವ ಮುಖಂಡರು ಮುನ್ನೀರ್ ಸಿದ್ದಿಖಿ ಸಲೀಂ ಖಾದ್ರಿ ಶಾಲೆಯ ಶಿಕ್ಷಕರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
Comments are closed.