ಜನರಿಗೆ ಸಿಗದ ಶಾಸಕ ಜನಾರ್ದನರೆಡ್ಡಿ ಸಂಗವೇಶ್ ಸುಗ್ರೀವ ಕಿಡಿ

Get real time updates directly on you device, subscribe now.

 

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರವನ್ನು ದೇಶ ತಿರುಗಿ ನೋಡುವಂತೆ ಮಾಡುತ್ತೇನೆಂದು ಚುನಾವಣೆಯಲ್ಲಿ ಆಶ್ವಾಸನೆ ನೀಡಿದ ಶಾಸಕರಾದ ಜನಾರ್ದನರೆಡ್ಡಿಯವರು ಜನ ಸಮಾನ್ಯರ ಕಷ್ಟ ಕೇಳಲು ಜನರ ಕೈಗೆ ಸಿಗದ ಓಡಾಡುತ್ತಿರುವುದು ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡರಾದ ಸಂಗಮೇಶ್ ಸುಗ್ರೀವ ಕಿಡಿಕಾರಿದರು. ಅವರು ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಚುನಾವಣೆಯಲ್ಲಿ ಆಯ್ಕೆ ಮಾಡಿದಲ್ಲಿ ಗಾಮೆಂಟ್ ಫ್ಯಾಕ್ಟರಿ, ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು, ಡಬಲ್ ಬೆಡ್ ರೂಮ್ ಮನೆ, ಪ್ರತಿ ಹೋಬಳಿಗೆ ಸಮಸ್ಯೆ ಅರಿಯಲು ಸಹಾಯಕರು, ಬಡ್ಡಿರಹಿತ ಸಾಲ ಸೌಕರ್ಯ, ಕ್ಷೇತ್ರದ ಪ್ರತಿ ಭೂಮಿ ನೀರಾವರಿ ಮಾಡುವೆ, ಅಂಜನಾದ್ರಿ ಐದು ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವುದಾಗಿ ಹೇಳಿದ್ದು, ಯಾವೊಂದು ಕಾರ್ಯಕ್ಕೆ ಇದುವರೆಗೂ ಭೂಮಿ ಪೂಜೆ ನೆರವೇರಿದಿರುವುದು ವಿಷಾಧನೀಯ ಎಂದು ಹೇಳಿದರು.

ರಾಜ್ಯ ಅಥವಾ ಕೇಂದ್ರ ಸರಕಾರ ಯಾವುದೇ ಅನುದಾನ ನೀಡದೆ ಇದ್ದ ಪಕ್ಷದಲ್ಲಿ ನನ್ನ ವೈಯಕ್ತಿಕ ಹಣದಿಂದ ಕ್ಷೇತ್ರ ಅಭಿವೃದ್ದಿ ಮಾಡುವೆ, ಇಡೀ ದೇಶದ ಎಲ್ಲಾ ರಾಜ್ಯಗಳ ಸಿಎಂ ಗಳನ್ನು ಕಂಡು ಅವರಿಂದ ಅನುದಾನ ಪಡೆದು ಅಂಜನಾದ್ರಿ ಯಾತ್ರಿ ನಿವಾಸ ಕಟ್ಟುವೆ, ದೊಡ್ಡ ದೊಡ್ಡ ಕಾರ್ಖಾನೆಯ ಮಾಲಿಕರನ್ನು ಸಂಪರ್ಕಿಸಿ ರಸ್ತೆ, ಚರಂಡಿ ಹಾಗು ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯ ಒದಗಿಸುವುದಾಗಿ ಜನಾರ್ದನರೆಡ್ಡಿಯವರು ಆಶ್ವಾಸನೆ ನೀಡಿದ್ದರು. ಆಸ್ಪತ್ರೆ ಮೇಲ್ದರ್ಜೆ ಸೇರಿದಂತೆ ಕ್ರೀಡಾಂಗಣ ೮ ಲೈನ್ ರಸ್ತೆ ಇತರೆ ಕಾಮಗಾರಿ ಶೀಘ್ರ ನಿರ್ವಹಸಿದ್ದಾಗಿ ತಿಳಿಸಿದ್ದು ಭರವಸೆಯಾಗಿಯೇ ಉಳಿದಿದೆ ಇನ್ನೂ ಕಾಂಗ್ರೆಸ್ ಪಕ್ಷ ಅವೈಜ್ಞಾನಿಕ ಗ್ಯಾರಂಟಿಗಳ ಮೂಲಕ ರಸ್ತೆಗೆ ಹಿಡಿ ಮಣ್ಣು ಹಾಕದೆ ಗುಂಡಿ ಬೀಳುವಂತಾಗಿದೆ, ಅಭಿವೃದ್ದಿಗೆ ಒತ್ತು ನೀಡದೆ ಕಾಂಗ್ರೆಸ್ ಸಿಎಂ ಹುದ್ದೆಗಾಗಿ ಕಾದಾಟ ನಡೆಸಿದೆ ಎಂದು ಸುಗ್ರೀವ ಟಾಂಗ್ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುತ್ತು ತಾಳಕನಕಾಪುರ, ವೆಂಕಟೇಶ್ ಮುಕ್ಕುಂಪಿ ಇದ್ದರು.

Get real time updates directly on you device, subscribe now.

Comments are closed.

error: Content is protected !!