ಕೂಡಲೇ ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಶಿಸ್ತುಕ್ರಮ: ಬಿಇಒ ಕಚೇರಿ
ಕಳೆದ 14 ತಿಂಗಳಿAದ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಗಂಗಾವತಿ ತಾಲ್ಲೂಕಿನ ಬಂಕಾಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ಟಿ.ಎನ್. ನರಸಿಂಹರಾಜು ಅವರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.
ಟಿ.ಎನ್. ನರಸಿಂಹರಾಜು ಅವರು ದಿನಾಂಕ: 05-09-2022 ರಿಂದ ವೇತನ ರಹಿತ ರಜೆ ಎಂದು ಕೋರಿ ಮುಖ್ಯ ಶಿಕ್ಷಕರ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ಕೆ.ಸಿ.ಎಸ್.ಆರ್. ನಿಯಮ 117 ರ ಪ್ರಕಾರ ಖಾಸಗಿ ಆಧಾರದ ಮೇಲೆ ಅಸಾಧಾರಣ ರಜೆ ಪಡೆಯಲು ಗರಿಷ್ಠ ಮೂರು ತಿಂಗಳು ಮಾತ್ರ ಅವಕಾಶವಿರುತ್ತದೆ. ಅದರಂತೆ ಮರಳಿ ಕರ್ತವ್ಯಕ್ಕೆ ಹಾಜರಾಗಲು ಸಾಕಷ್ಟು ಸಲ ಅಂದರೆ, ದಿನಾಂಕ: 30-11-2022 ರಂದು ಶಾಲಾ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿ ಜ್ಞಾಪನ ನೀಡಿದ್ದು, ನಂತರ ದಿನಾಂಕ: 20-12-2022 ರಂದು ನೆನಪೋಲೆ-1 ಹಾಗೂ ದಿನಾಂಕ:19-01-2023 ರಂದು ನೆನಪೋಲೆ-2 ನ್ನು ಮತ್ತು ದಿ: 21-02-2023 ರಂದು ಅಂತಿಮ ನೋಟಿಸನ್ನು ನೀಡಿ ಶಾಲಾ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರೂ ಸಹ ಇಲ್ಲಿವರೆಗೂ ಹಾಜರಾಗಿರುವುದಿಲ್ಲ. ಇದರಿಂದ ಮಕ್ಕಳ ಪಾಠಬೋಧನೆಗೆ ಹಾಗೂ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗಲು ಕಾರಣಾರಾಗಿ ಕರ್ತವ್ಯ ಲೋಪ ಎಸಗಿರುತ್ತಾರೆ.
ಆದ ಕಾರಣ ಶಿಕ್ಷಕರು ಕೂಡಲೇ ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ಅವರ ಗೈರು ಹಾಜರಿಯನ್ನು ಅನಧಿಕೃತ ಗೈರು ಎಂದು ಪರಿಗಣಿಸಿ ಏಕ ಪಕ್ಷೀಯವಾಗಿ ಕ.ನಾ.ಸೇ.ನಿಯಮಾವಳಿ 1957 ರ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Comments are closed.