ಸಹಕಾರ ರತ್ನ” ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್ ರಿಗೆ ಸನ್ಮಾನ
ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ “ಸಹಕಾರ ರತ್ನ” ಪ್ರಶಸ್ತಿ ಪಡೆದ ಹಿರಿಯ ಸಹಕಾರಿಗಳು ಮಾಜಿ ಶಾಸಕರಾದ ಕೆ.ಬಸವರಾಜ್ ಹಿಟ್ನಾಳ್ ರವರಿಗೆ ಕೊಪ್ಪಳ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಪಾಷ ಕಾಟನ್ ರವರಿಂದ ಅಭಿನಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿನಗರ ಸಭಾ ಸದಸ್ಯರಾದ ಪೀರಾ ಹುಸೇನ್ ಮುಜಾವರ್, ಮಾನ್ವಿ ಪಾಷ, ಮುಖಂಡರಾದ ಜಾಫರ್ ಸಾಬ್ ಸಂಗಟಿ, ರಹೀಮ್ ಮಕಾಂದಾರ, ಗಫಾರ್ ಸಾಬ್ ದಿಡ್ಡಿ,ಅಬೂಬಕರ್ ಅತ್ತಾರ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸಲೀಂ ಅಳವಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments are closed.