ಧೂಳು ಮುಕ್ತ ಮಾಡಿ,ಗ್ರಾಮದ ಜನರ ಅರೋಗ್ಯ ಕಾಪಾಡಿ ನಾಗರೀಕ ಹೋರಾಟ ಸಮಿತಿ ಆಗ್ರಹ

Get real time updates directly on you device, subscribe now.

.

ಗಿಣಿಗೇರಾ ಗ್ರಾಮದದಲ್ಲಿ ಧೂಳು ಮುಕ್ತ, ನೈಸರ್ಗಿಕ ಮಾಲಿನ್ಯ, ಶುದ್ಧ ಕುಡಿಯುವ ನೀರು, ಸಾರ್ವಜನಿಕ ಬಸ್ ನಿಲ್ದಾಣ, ಚರಂಡಿ ಶುದ್ಧೀಕರಣ, ದೂಳು ಬರದಂತೆ ನೀರನ್ನು ಸಿಂಪಡಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಗರ್ಭಿಣಿ ಹೆಣ್ಣುಮಕ್ಕಳಿಗೆ ಹೆರಿಗೆ ಆಸ್ಪತ್ರೆ ನಿರ್ಮಿಸಿ ಹಾಗೂ ಮುಖ್ಯ ರಸ್ತೆ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಆಗ್ರಹಿಸಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ಸಮಿತಿಯ ಮುಖಂಡರಾದ ಮಂಗಳೇಶ್ವರ ಮಾತನಾಡುತ್ತ ಇತ್ತೀಚಿಗೆ ದಿನಾಂಕ 04/11/2023 ರಂದು ಸಮಿತಿಯ ಮುಖಂಡರ ನಿಯೋಗದಲ್ಲಿ  ಮಾನ್ಯ ಅಪರಾ ಜಿಲ್ಲಾಧಿಕಾರಿಗಳು, ತಾಲೂಕು ಪಂಚಾಯಿತಿ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು, ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಭೇಟಿಯಾಗಿ ಗಿಣಿಗೇರಿ ಗ್ರಾಮದ ಸಮಸ್ಯೆ ಬಗ್ಗೆ ಸುಧೀರ್ಗೆ ಚರ್ಚೆ ಮಾಡಿ ಮನವಿ ಸಲ್ಲಿಸಲಾಯಿತು.
ಮನವಿ ಮಾಡಿ 15 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಸಮಿತಿ ಸಂಚಾಲಕ ಶರಣು ಗಡ್ಡಿ ಮಾತನಾಡಿ ಗಿಣಿಗೇರಾ ಗ್ರಾಮದ ಸುತ್ತಮುತ್ತಲಿನ  ದೈತ್ಯ ಕಂಪನಿಗಳಿಂದ ಹೊರಸುಸುವ ಕಲುಷಿತ ಹೊಗೆ ದೂಳು ಬರುವುದು ನಿಂತಿಲ್ಲ.
ಇದರಿಂದ ಉಸಿರಾಡಲು ನಿತ್ಯ ಸೇವಿಸುವ ದುರ್ವಾಸನೆಯ ಕಲುಷಿತ ಗಾಳಿ ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ.
ರಾಸಾಯನಿಕ ಕಲುಷಿತ ನೀರು ಅಲ್ಲಲ್ಲಿ ಶೇಖರಣೆಯಾಗಿ ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಇದರಿಂದ ಡೆಂಗಿ ಜ್ವರ, ಕೆಮ್ಮು, ಅಸ್ತಮಾ,ಕ್ಯಾನ್ಸರ್ ಮುಂತಾದ ಮರಣಾಂತಿಕ ಕಾಯಿಲೆಗೆ ಗಿಣಿಗೇರಾ ಮುಗ್ದ ಜನ ತುತ್ತಗುತ್ತಿದ್ದಾರೆ. ಗ್ರಾಮದ ಮುಖ್ಯರಸ್ತೆ ಬದಿಯಲ್ಲಿರುವ ವ್ಯಾಪಾರಸ್ಥರು, ಬಟ್ಟೆ ವ್ಯಾಪಾರ, ಬೇಕರಿ, ಹೋಟೆಲ್, ಹೂವು ಹಣ್ಣಿನ ವ್ಯಾಪಾರ, ತರಕಾರಿ ವ್ಯಾಪಾರ,ಟೀ ಶಾಪುಗಳಲ್ಲಿ ಧೂಳು ನಿಂದ ವ್ಯಾಪಾರವೇ ನಿಂತು ಹೋಗುತ್ತಿದೆ. ಇದರಿಂದ ಬೀದಿ ಬದಿ ವ್ಯಾಪಾರಸ್ಥರ  ಗೋಳು ಕೇಳದಂತಾಗಿದೆ. ಗ್ರಾಮದಲ್ಲಿ
ಇತ್ತೀಚ್ಚಿಗೆ ಡೇಂಗಿ ಜ್ವರದಿಂದ ಒಂದು ಹುಡುಗಿ ಸಾವನ್ನಪ್ಪಿದ ದುರ್ಘಟನೆ  ಪ್ರತ್ರಿಕೆಗಳಲ್ಲಿ ಕೂಡ ವರದಿಯಾಗಿದೆ. ಆದರೆ ಸಮಸ್ಯೆಗೆ ಮೂಲ ಪರಿಹಾರ ಹುಡುಕದೆ ಕೇವಲ ಮಲಾಮು ಹಚ್ಚುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ಹಾಗಾಗಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒತ್ತಾಯವಾಗಿದೆ ಎಂದರು. ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮೌನೇಶ್ ಹಲಿಗೇರಿ, ಸುರೇಶ ಕಲಾಲ್, ಮಾರುತಿ, ನವೀನ್ ಬಾರಕೇರಾ, ಹರೀಶ್, ಬಸವರಾಜ್, ವಿಷ್ಣು, ಯಂಕೋಬ ಪೂಜಾರ್, ವಿಜಯ್ ಪೂಜಾರ್, ಅಂಬಣ್ಣ, ಆನಂದ ಮುರಮನಿ,ಪ್ರಶಾಂತ್ ಹಿರೇಮಠ, ಬಸವರಾಜ್ ಬೆಟಗೇರಿ, ಅನುರಾಧ, ಪರಶುರಾಮ್, ಮುಂತಾದವರು ಭಾಗವಹಿಸಿದ್ದರು.

ಬೇಡಿಕೆಗಳು
*ಗಿಣಿಗೇರಾ ಗ್ರಾಮಕ್ಕೆ ಸುತ್ತಲಿನ, ಕಲ್ಯಾಣಿ, ಮುಕುಂದ, ಅಲ್ಟ್ರಾ ಟೆಕ್ ಸಿಮೆಂಟ್ ಕಂಪನಿಗಳಿಂದ ಬರುವ ದೂಳನ್ನು ನಿಯಂತ್ರಿಸಬೇಕು.
*ಗಿಣಿಗೇರ ಗ್ರಾಮಕ್ಕೆ ದಿನದ 24 ಗಂಟೆ ಅರೋಗ್ಯ ಸೇವೆ ಸಿಗುವಂತೆ ಆಸ್ಪತ್ರೆ ಸೌಲಭ್ಯ ಒದಗಿಸಬೇಕು.
*ಪ್ರಾಥಮಿಕ ಹಂತದಲ್ಲಿ ದೂಳು ಬರದಂತೆ ನೀರನ್ನು ಸಿಂಪಡಿಸಬೇಕು.
*ಸಾರ್ವಜನಿಕ ಬಸ್ ನಿಲ್ದಾಣ, ಚರಂಡಿ, ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಒದಗಿಸಬೇಕು
*ಸ್ಥಳೀಯ ನಿರೋದ್ಯೋಗಿ ಯುವಕರಿಗೆ ಆದ್ಯತೆ ಮೇರೆಗೆ ಕಾರ್ಖಾನೆಯಲ್ಲಿ ಉದ್ಯೋಗ ಒದಗಿಸಬೇಕು.

Get real time updates directly on you device, subscribe now.

Comments are closed.

error: Content is protected !!