ಸರಕಾರಿ ಪ್ರೌಢಶಾಲೆಯ ಬಾಲಕಿಯರು ಎ.ಟಿ.ಎಲ್ ಲ್ಯಾಬ್‌ನಲ್ಲಿ ತಯಾರಿಸಿದ ಗ್ಲೌಸ್‌ಗಳು ರಾಷ್ಟಮಟ್ಟದಲ್ಲಿ ಪ್ರದರ್ಶನಕ್ಕೆ ಆಯ್ಕೆ
ಬಸಾಪಟ್ಟಣ ಗ್ರಾಮದ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಬಾಲಕಿಯರು ಎ.ಟಿ.ಎಲ್ ಲ್ಯಾಬ್‌ನಲ್ಲಿ ತಯಾರಿಸಿದ ಗ್ಲೌಸ್‌ಗಳು ರಾಷ್ಟಮಟ್ಟದಲ್ಲಿ ಪ್ರದರ್ಶನಕ್ಕೆ ಆಯ್ಕೆ.
ಗಂಗಾವತಿ: ತಾಲೂಕಿನ ಬಸಾಪಟ್ಟಣ ಗ್ರಾಮದ ಬಾಲಕಿಯರ ಸರಕಾರಿ ಪ್ರೌಢಶಾಲೆಯ ೧೦ನೇ ವಿದ್ಯಾರ್ಥಿನಿಯರಾದ ಕುಮಾರಿ ಪ್ರಿಯಾಂಕ ತಂ. ಮಲ್ಲಪ್ಪ ಮತ್ತು ಕುಮಾರಿ ಸಾನಿಯಾ ತಂ. ನಜೀರಸಾಬ ಇವರುಗಳು ಅಟಲ್ ಟಿಂಕರಿAಗ್ ಲ್ಯಾಬ್‌ನ ಮೂಲಕ “ಸ್ಮಾರ್ಟ್ ಗ್ಲೌಸ್ ಫಾರ್ ಪ್ಯಾರಲೈಸಿಸ್ ಪೇಷೆಂಟ್ಸ್” ಎನ್ನುವ ವಿಶೇಷ ಗ್ಲೌಸ್‌ಗಳನ್ನು ಶಾಲೆಯ ವಿಜ್ಞಾನ ಶಿಕ್ಷಕರಾದ ವೆಂಕಣ್ಣ ಪೂಜಾರ ಇವರ ಮಾರ್ಗದರ್ಶನದಲ್ಲಿ ತಯಾರಿಸಿದ್ದು, ಇದು ಅಟಲ್ ಮ್ಯಾರಾಥಾನ್‌ದಲ್ಲಿ ರಾಷ್ಟçಮಟ್ಟದಲ್ಲಿ ಪ್ರಶಸ್ತಿ ಗಳಿಸುವ ಮೂಲಕ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದು, ಇದರ ಪ್ರದರ್ಶನವು ನವದೆಹಲಿಯಲ್ಲಿ ೨೦ನೇ ನವೆಂಬರ್ ಸೋಮವಾರ ಯುನಿಸೆಫ್ ವತಿಯಿಂದ ನಡೆಯಲಿರುವ ಅಂತರಾಷ್ಟಿçÃಯ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಎನ್. ನಾಗಭೂಷಣ ಅವರು ಪ್ರಕಟಣೆಯಲ್ಲಿ ತಿಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ ರಾಮಚಂದ್ರಪ್ಪ ಇವರು ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರನ್ನು ಹಾಗೂ ವಿಜ್ಞಾನ ಶಿಕ್ಷಕರನ್ನು ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದರು. ರಾಷ್ಟçಮಟ್ಟಕ್ಕೆ ರಾಜ್ಯದಿಂದ ಕೇವಲ ಎರಡು ಶಾಲೆಗಳು ಮಾತ್ರ ಆಯ್ಕೆಯಾಗಿದ್ದು, ಅದರಲ್ಲಿ ಬಸಾಪಟ್ಟಣ ಗ್ರಾಮದ ಶಾಲೆಯೂ ಕೂಡಾ ಒಂದಾಗಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸುತ್ತಾ, ದೆಹಲಿಗೆ ತೆರಳಿಲಿರುವ ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕರಿಗೆ ಶುಭ ಹಾರೈಸಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಡಿವಾಳಪ್ಪ ಹಾಗೂ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಹಾಗೂ ವಿಜ್ಞಾನ ಶಿಕ್ಷಕರಿಗೆ ಶುಭ ಹಾರೈಸಿದರು.
Comments are closed.