ಸಹಕಾರ ಸಂಸ್ಥೆಗಳು ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಬಲಗೊಳ್ಳಲು ಶೇಖರಗೌಡ ಮಾಲಿಪಾಟೀಲ ಕರೆ

Get real time updates directly on you device, subscribe now.

ಕೊಪ್ಪಳ :  ನೆಹರೂರವರು ಸಹಕಾರ ಕ್ಷೇತ್ರದಲ್ಲಿ ಅಪಾರವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿದ್ದರು. ಅವರು ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅನೇಕ ಸಹಕಾರ ಚಳುವಳಿಯ ಸಾಧನೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಗಳನ್ನು ಕೈಗೊಂಡು ಸಹಕಾರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆಂದು ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ, ಶೇಖರಗೌಡ ಮಾಲಿಪಾಟೀಲ ಹೇಳಿದರು.

 

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಹಾಗೂ ಸಹಕಾರ ಇಲಾಖೆ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ೭೦ ನೇ ಅಖಿಲ ಭಾರತ ಸಹಕಾರ ಸಪ್ತಾಹ-೨೦೨೩ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ, ಶೇಖರಗೌಡ ಮಾಲಿಪಾಟೀಲ ರವರು ಉದ್ಘಾಟಿಸಿ, ಮಾತನಾಡುತ್ತಾ ಸ್ಪರ್ಧಾತ್ಮಕ ಆರ್ಥಿಕ ಸನ್ನಿವೇಶದಲ್ಲಿ ಸಹಕಾರ ಸಂಸ್ಥೆಗಳು ಹಲವಾರು ರೀತಿಯ ಸವಾಲುಗಳನ್ನು ಎದುರುಸುತ್ತಿದ್ದು, ಈ ಕುರಿತು ಅವುಗಳಿಗೆ ಪರಿಹಾರ ಮಾರ್ಗ ಕಂಡುಕೊಳ್ಳುವ ಪ್ರಯತ್ನ ಸಹಕಾರಿಗಳು ಮಾಡಬೇಕಾಗಿದೆ  ಪಂ|| ಜವಹರ್‌ಲಾಲ ನೆಹರೂ ಅವರ ಹುಟ್ಟು ಹಬ್ಬದ ದಿನವಾದ ಇಂದು ಅವರು ಸಹಕಾರ ಕ್ಷೇತ್ರದ ಬೆಳವಣಿಗೆಗೆ ನೀಡಿದ ಪ್ರೋತ್ಸಾಹಕ್ಕಾಗಿ ಅವರಿಗೆ ಕೃತಜ್ಞತೆ ಅರ್ಪಿಸುವ ಸಂಕೇತವಾಗಿ ಸಹಕಾರ ಸಪ್ತಾಹವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ ಎಂದು ಹೇಳಿದರು

 

 

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸಜ್ಜನರ ಪ್ರಕಾಶ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ ಸಹಕಾರ ಸಪ್ತಾಹವನ್ನು ನವ್ಹೆಂಬರ್ ೧೪ ರಿಂದ ೨೦ ರವರೆಗೆ ರಾಷ್ಟ್ರಾಧ್ಯಂತ ಆಚರಿಸುತ್ತಿದ್ದು, ಸಾರ್ವಜನಿಕರಲ್ಲಿ ಸಹಕಾರ ಜಾಗೃತಿಯನ್ನು ಉಂಟುಮಾಡಿ ಸಹಕಾರ ಕ್ಷೇತ್ರದತ್ತ ಯುವಕರನ್ನು ಬರಮಾಡಿಕೊಂಡು ಸಹಕಾರ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲು ನಾವು ನಿವೆಲ್ಲರೂ ಶ್ರಮಿಸೋಣವೆಂದರು.
ಜಿಲ್ಲಾ ಸಹಕಾರ ಯೂನಿಯನ್ನಿನ ನಿರ್ದೇಶಕರಾದ, ತೋಟಪ್ಪ ಹೆಚ್. ಕಾಮನೂರು ರವರು ಸಹಕಾರ ಸಪ್ತಾಹ ಆಚರಣೆಯ ಮೂಲ ಉದ್ದೇಶ ಕುರಿತು ಮಾತನಾಡುತ್ತಾ ಸಹಕಾರ ಕ್ಷೇತ್ರದಲ್ಲಿ ಕೊಪ್ಪಳ ಜಿಲ್ಲೆಯೂ ಸಮಾಜದ ಅಭಿವೃದ್ಧಿಯಲ್ಲಿ ಸಹಕಾರ ಸಂಸ್ಥೆಗಳು ಗಣನೀಯ ಪಾತ್ರ ನಿರ್ವಹಿಸುತ್ತಿದ್ದು, ಯುವಕರು ಹೆಚ್ಚು ಹೆಚ್ಚು ಈ ಕ್ಷೇತ್ರದತ್ತ ಗಮನಹರಿಸಿ ಈ ಕೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕಲಬುರಗಿ ಕೆ.ಐ.ಸಿ.ಎಂ.ನ ಉಪನ್ಯಾಸಕರಾದ ರಾಜೇಶ ಯಾವಗಲ್ ರವರು ಮಾತನಾಡುತ್ತಾ ರಾಷ್ಟ್ರೀಯ ಸಹಕಾರಿ ಯೂನಿಯನ್ ಮತ್ತು ಮಹಾಮಂಡಳ ಇವರ ಮಾರ್ಗದರ್ಶನದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ೫ ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಎಂಬ ಧ್ಯೇಯದಲ್ಲಿ ಇಂದಿನ ವಿಷಯ: ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಇದ್ದು ನಾವು ನಿವೆಲ್ಲರೂ ಸಹಕಾರ ಸಂಘಗಳನ್ನು ಬದಲಾದ ಸನ್ನಿವೇಶದಲ್ಲಿ ಪ್ರಮುಖ ಆಧ್ಯತೆಯ ಪ್ರವೃತ್ತಿಗಳನ್ನು ತಾಂತ್ರಿಕ ಉನ್ನತೀಕರಣಗಳಿಸಿ ಸಹಕಾರ ಆಂದೋಲನ ಬೆಳವಣಿಗೆಗೆ ಉತ್ತಮ ಬುನಾದಿಯನ್ನು ಹಾಕುವುದರ ಮುಖಾಂತರ ಸಾಮಾನ್ಯ ಜನರಿಗೆ ಈ ಕ್ಷೇತ್ರದ ಅರಿವು ಮೂಡಿಸೋಣ ವೆಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಶಕುಂತಲಾ ಹೆಚ್. ಹುಡೇಜಾಲಿ, ಜಯದೇವ್ ಹಿಂದುಳಿದ ವರ್ಗದವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎನ್.ಸಿ. ಗೌಡರ್, ಕೊಪ್ಪಳ ತಾಲೂಕಾ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾದ ಹಾಲಯ್ಯಸ್ವಾಮಿ, ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಅಕ್ಷಯ್ ಕುಮಾರ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ವ್ಯವಸ್ಥಾಪಕರಾದ ರಾಜಶೇಖರ ಎಂ. ಹೊಸಮನಿ ಕಾರ್ಯಕ್ರಮವನ್ನು ನಿರೂಪಿಸಿದರು. ಅತಿಥಿಗಳನ್ನು ಗವಿಸಿದ್ದಯ್ಯ ಹಿರೇಮಠ ರವರು ಸ್ವಾಗತಿಸಿದರು. ಕೊನೆಯಲ್ಲಿ ಗವಿಸಿದ್ದೇಶ ಹೆಚ್. ಹುಡೇಜಾಲಿ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: