ಹಿಂಗಾರು ಹಂಗಾಮಿನಲ್ಲಿ ಜೋಳ, ಗೋಧಿ, ಕಡಲೆ, ಹುರುಳಿ, ಸೂರ್ಯಕಾಂತಿ ಬಿತ್ತಲು ಸಲಹೆ

Get real time updates directly on you device, subscribe now.

ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಾಗಿದ್ದು, ಹಿಂಗಾರು ಜೋಳ, ಗೋಧಿ, ಕಡಲೆ, ಹುರುಳಿ ಸೂರ್ಯಕಾಂತಿ ಬೆಳೆಗಳನ್ನು ಬಿತ್ತಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಅವರು ರೈತರಿಗೆ ಸಲಹೆ ಮಾಡಿದ್ದಾರೆ.
ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈಗ ಉತ್ತಮ ಮಳೆಯಾಗಿದೆ. ಆದ್ದರಿಂದ ಗೋಧಿ ಬಿತ್ತುವಾಗ ಸಾಸಿವೆ ಕಾಳು ಮಿಶ್ರ ಮಾಡಿ ಬಿತ್ತಬೇಕು. ಈಗಾಗಲೇ ಬಿತ್ತನೆಯಾದ ತೊಗರಿ, ಕಡಲೆ ಬೆಳೆಗಳಲ್ಲಿ ಹೂವಾಡುವ ಸಮಯದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಆವಿಷ್ಕಾರ ಮಾಡಿದ ಪಲ್ಸ್ ಮ್ಯಾಜಿಕ್ ಹಾಗೂ ಚಿಕ್‌ಪೀ(ಕಡಲೆ) ಮ್ಯಾಜಿಕ್ ಜೊತೆಗೆ 19:19:19 ನೀರಿನಲ್ಲಿ ಕರಗುವ ಗೊಬ್ಬರವನ್ನು 5 ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಿಸುತ್ತಿದ್ದರೆ, ತೇವಾಂಶ ಕೊರತೆ ನೀಗಿ ಉತ್ತಮ ಕಾಳುಕಟ್ಟಿ ಇಳುವರಿ ಹೆಚ್ಚಿಸಬಹುದು. ಸೊರಗು ರೋಗ ಹತೋಟಿಗೆ ವಿಜ್ಞಾನಿಗಳ ಸಲಹೆಯಂತೆ ಸೂಕ್ತ ರಾಸಾಯನಿಕಗಳನ್ನು ಬಳಸಬೇಕು. ಜೀವಾಮೃತ, ಗೋಕೃಪಾಮೃತ, ವೇಸ್ಟ್ ಡಿ ಕಾಂಪೋಸರ ನಂತಹ ದ್ರವರೂಪದ ಜೈವಿಕ ಗೊಬ್ಬರಗಳ ಬಳಕೆ ಅತೀ ಸೂಕ್ತ, ಇದರಿಂದ ತೇವಾಂಶ ನಿವಾರಣೆ ಜೊತೆಗೆ ಬೆಳೆಗಳು ಸಮೃದ್ಧವಾಗಿ ಬೆಳೆಯುವುದಲ್ಲದೇ ರೋಗನಿರೋಧಕ ಶಕ್ತಿ ಉಂಟಾಗುತ್ತದೆ. ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ ಗಳನ್ನು ಸಿಂಪರಣೆ ಮಾಡಲು ಮತ್ತು ಬೀಜೋಪಚಾರ ಉಪಯೋಗಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಇನ್ನು ಮುಂದೆ ಬಿತ್ತನೆ ಮಾಡುವ ಯಾವುದೇ ಬೆಳೆಯನ್ನು ಕಡ್ಡಾಯವಾಗಿ ಬೀಜೋಪಚಾರ ಮಾಡಿಯೇ ಬಿತ್ತಬೇಕು. ಧಾರವಾಡ ಕೃಷಿ ವಿಶ್ವವಿದ್ಯಾಲಯ ಬಯೋಕೇಂದ್ರದಲ್ಲಿ ಡಿಕಾಂಪೋಸರ್‌ನ್ನು 2 ಕೆ.ಜಿ. ಪ್ರತಿ ಟನ್ ಗೊಬ್ಬರಕ್ಕೆ ಬಳಸಬಹುದು. ಇದರಿಂದಾಗಿ ಗೊಬ್ಬರ ಬೇಗನೆ ಕಳೆಯುತ್ತದೆ. ಪರ್ಯಾಯ ಬೆಳೆ, ಮಿಶ್ರ ಬೆಳೆಗಳು ರೈತರಿಗೆ ನಷ್ಟ ತಪ್ಪಿಸಬಹುದು ಎಂದು ಸಲಹೆ ಮಾಡಿದ್ದಾರೆ.
ಸತತ ಬರ ಹಾಗೂ ಮಳೆ ಕೊರತೆಯಿಂದ ಬಹುತೇಕ ಮುಂಗಾರಿನ ಬೆಳೆಗಳು ಸೊರಗಿವೆ. ಸದ್ಯ 2-3 ದಿನದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಹಿಂಗಾರು ಬೆಳೆಗಳಿಗೆ ಜೀವ ಬಂದAತಾಗಿದ್ದರೂ ಕೆಲವು ಕಡೆ ಮಳೆಯಿಂದಾಗಿ ಬೆಳೆ ಹಾನಿಯೂ ಸಂಭವಿಸಿದೆ. ಆದ್ದರಿಂದ ರೈತರು ಜಾಗೃತೆ ವಹಿಸಬೇಕು. ಕೃಷಿ ಬೆಳೆಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತು ಬರದಲ್ಲಿ ಬೆಳೆಗಳ ನಿರ್ವಹಣೆ ಕುರಿತು ಕೃಷಿ ಅಧಿಕಾರಿಗಳ, ಕೃಷಿ ತಜ್ಞರ ಸಲಹೆ ಪಡೆಯಬೇಕು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದಿಂದ ಅನೇಕ ಕೃಷಿ ಸಂಬAಧಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ರೈತರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಅವರು ಇದೆ ವೇಳೆ ಸಲಹೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!