ಕೊಪ್ಪಳ ಜಿಲ್ಲೆಯ ಮುನ್ನೋಟ ಅವಶ್ಯಕ-ಗವಿಶ್ರೀಗಳು

Get real time updates directly on you device, subscribe now.


ಕೊಪ್ಪಳ : ಜಿಲ್ಲೆಯಾಗಿ ೨೫ ವರ್ಷಗಳು ಕಳೆದಿವೆ. ಎರಡೂವರೆ ದಶಕಗಳಲ್ಲಿ ಜಿಲ್ಲೆ ಸಾಧನೆಯ ಬಗ್ಗೆ ಹಾಗೂ ಜಿಲ್ಲೆಯ ಮುಂದಿನ ದಿನಗಳು ಹೇಗಿರಬೇಕು ಎನ್ನುವುದರ ಮುನ್ನೋಟ ಅವಶ್ಯಕವಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ, ಸಾಮಾಜಿಕ ಅಭಿವೃದ್ದಿಯ ಕುರಿತು ಯೋಜನೆ ರೂಪಿಸಬೇಕಿದೆ ಎಂದು ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು.
ಕನ್ನಡನೆಟ್.ಕಾಂ ನಾಲ್ಕುದಿಕ್ಕು ಹೊರತಂದಿರುವ ಕೊಪ್ಪಳ  ೨೫ ಮುನ್ನೋಟ ವಿಶೇಷಾಂಕವನ್ನು ಮಠಕ್ಕೆ ಬಂದಿದ್ದ ಪುಟ್ಟ ಕಂದನಿಂದ ಲೋಕಾರ್ಪಣೆ ಮಾಡಿಸಿ ಮಾತನಾಡಿದ ಅವರು ಜಿಲ್ಲೆ ಸಾಕಷ್ಟು ಅಭಿವೃದ್ದಿ ಸಾಧಿಸಿದೆ, ಇನ್ನೂ ಸಾಕಷ್ಟು ಅಭಿವೃದ್ದಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ, ತಾಲೂಕಿನ, ನಗರಗಳ ಅಭಿವೃದ್ದಿ ಕುರಿತ ನೀಲನಕ್ಷೆ ತಯಾರಾಗಬೇಕು ಇದು ಸರ್ವಾಂಗೀಣ ಅಭಿವೃದ್ದಿಗೆ ನಾಂದಿಯಾಗುತ್ತದೆ ಎಂದು ಹೇಳಿದರು. ವಿಶೇಷಾಂಕದ ಮಿತಿಯಲ್ಲಿ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಜಿಲ್ಲೆಯ ಅಭಿವೃದ್ದಿಯ ಸಾಧ್ಯತೆ, ಸವಾಲುಗಳ ಕುರಿತು , ಜಿಲ್ಲೆಯ ಅಭಿವೃದ್ದಿಯ ಕುರಿತ ಅವಲೋಕನ, ಮಹಿಳೆಯರ ಪಾತ್ರ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಲಾಗಿದ್ದು. ೩೭೧ಜೆ ಅನುಷ್ಠಾನದ ನಂತರ ಸವಾಲುಗಳು ಕುರಿತು ಚರ್ಚಿಸಲಾಗಿದೆ ಎಂದು ಸಂಪಾದಕ ಸಿರಾಜ್ ಬಿಸರಳ್ಳಿ ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ರಾಜಾಬಕ್ಷಿ ಎಚ್.ವಿ., ಕಲೀಲ್ ಹುಡೇವ್, ಅಖಿಲ್ ಹುಡೇವು, ಗುರುರಾಜ್ ಹಲಗೇರಿ, ಸತೀಶ ಅಂಗಡಿ, ಸಂಜಯ ಕೊತಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!