ಸಂಗಿತದಿಂದ ಮಾನಸಿಕ ನೆಮ್ಮದಿ ಸಾಧ್ಯ-ಬಸಪ್ಪ ನಾಗೋಲಿ

Get real time updates directly on you device, subscribe now.

ಗಂಗಾವತಿ: ಸಂಗಿತದಿಂದ ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ ಎಂದು ಸರಕಾರಿ ಜೂನಿಯರ ಕಾಲೇಜ್ ಪ್ರಾಚಾರ್ಯರಾದ ಹೇಳಿದರು.
ಅವರು ನಗರದ ಖಾಸಗಿ ಹೋಟಲ್‌ನಲ್ಲಿ ಜನನಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಹಿರೇಜಂತಕಲ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ೧೩ನೇ ಪುಣ್ಯಸ್ಮರಣೋತ್ಸವ ಮತ್ತು ಸಂಗಿತ ಕಾರ್ಯಕ್ರಮದಲ್ಲಿ ಮಾತನಾಡಿ ಜನನಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಹಿರೇಜಂತಕಲ್ ಅಧ್ಯಕ್ಷೆಯಾದ ಕುಮಾರಿ ರಂಜನಿ ಆರತಿರವರ ಸಂಗಿತ ಕ್ಷೇತ್ರದಲ್ಲಿನ ಕಾರ್ಯ ಶ್ಲಾಘನೀಯವಾಗಿದೆ. ಕಿರಿ ವಯಸ್ಸಿನಲ್ಲಿ ಸಂಗಿತ ಕ್ಷೇತ್ರದಲ್ಲಿ ಸಾಧನೆ ಮೆಟ್ಟಿಲು ಏರುತ್ತಿದ್ದಾಳೆ. ಸರ್ವರೂ ಅವಳಿಗೆ ಕೈಜೋಡಿಸಿ ಪ್ರತಿಭೆಗೆ ಸಹಕರಿಸೋಣ ಎಂದರು.
ಪ್ರಗತಿಪರ ಚಿಂತಕ ಲಿಂಗಣ್ಣ ಜಂಗಮರಹಳ್ಳಿ ಮಾತನಾಡಿ, ಇವತ್ತಿನ ದಿನ ಬುದ್ದ ಬಸವ, ಅಂಬೇಡ್ಕರ ತತ್ವವನ್ನು ಮೈಗೂಡಿಸಿಕೊಂಡಿರುವ ಕಲಾವಿದೆ ರಂಜನಿ ಆರತಿ, ಸಂಗಿತ ಸಾಧನೆ ಮಾಡುತ್ತಿರುವುದು ಹೆಮ್ಮಯ ವಿಷಯವಾಗಿದೆ. ಇವತ್ತು ಸಂಗಿತ, ಚಲನಚಿತ್ರ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಕಲಿ ಹಾವಳಿ ಹೆಚ್ಚಾಗಿದೆ. ನಟ, ನಟಿಯರ ಮೇಲೆ ಬ್ಲಾಕ್‌ಮೇಲ್ ತಂತ್ರ ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ ಆತಂಕ ವ್ಯಕ್ತಪಡಿಸಿದರು.
ಖ್ಯಾತ ಹಿಂದುಸ್ಥಾನಿ, ಸುಗಮ ಸಂಗಿತ ಕಲಾವಿದರಾದ, ಡಾ. ತಿಮ್ಮಣ್ಣ ಭೀಮರಾಯ ಅಧ್ಯಾಪಕರು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರು ಮಾತನಾಡಿ, ಜನನಿ ಸಂಸ್ಥೆಯ ಕೆಲಸ ಕಾರ್ಯಗಳು ಹೀಗೆ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿ ಸಂಸ್ಥೆಯ ಕೆಲಸಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನಸಾಮಾನ್ಯರ ಕಷ್ಟಕಾರ್ಪಣ್ಯಗಳನ್ನು ಮರೆಸುವ ಸಂಗೀತ ಕೂಡಾ ನಮ್ಮ ಮನಸ್ಸಿನ ನೆಮ್ಮದಿಗೆ ಇದು ಒಂದು ಔಷಧಿ. ಸಂಗೀತವನ್ನು ಆಲಿಸಿ, ಸಂಗೀತವನ್ನು ಗೌರವಿಸಿ ಎಂದು ಕರೆಕೊಟ್ಟರು.
ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಡಾ. ಸೋಮಕ್ಕ, ರಮೇಶ ಸುಗ್ಗೇನಹಳ್ಳಿ, ಹುಸೇನಪ್ಪ ಹಂಚಿನಾಳ ವಕೀಲರು, ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧ್ಯಕ್ಷ ಸಿ.ಕೆ ಮರಿಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಜನಕವಿ ಗ್ರಂಥಪಾಲಕ ರಮೇಶ ಗಬ್ಬೂರ, ಶಿವಲಿಂಗಯ್ಯ ಶಾಸ್ತ್ರಿಗಳು, ರತ್ನಮ್ಮ ಆರತಿ, ತಬಲಾ ವಾದಕ ರಿಜ್ವಾನ ಮುದ್ದಾಬಳ್ಳಿ, ಕಲಾವಿದೆ ಶರಣಮ್ಮ ಕಾರಟಗಿ, ಜನನಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಹಿರೇಜಂತಕಲ್ ಅಧ್ಯಕ್ಷೆಯಾದ ಕುಮಾರಿ ರಂಜನಿ ಆರತಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಹುಲ್ಲೇಶ ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ಹಿಂದುಸ್ಥಾನಿ, ಸುಗಮ ಸಂಗಿತ ಕಲಾವಿದ ಡಾ. ತಿಮ್ಮಣ್ಣ ಭೀಮರಾಯ, ಕಲಾವಿದೆ ಶರಣಮ್ಮ ಕಾರಟಗಿ, ಅಧ್ಯಕ್ಷೆ ಕುಮಾರಿ ರಂಜನಿ ಆರತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Get real time updates directly on you device, subscribe now.

Comments are closed.

error: Content is protected !!