ಗರ್ಭಿಣಿ ,ಮಗುವಿನ ಸಾವು- ಗಂಗಾವತಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅಮಾನತ್ತಿಗೆ ಆಗ್ರಹ ಪ್ರತಿಭಟನೆ

Get real time updates directly on you device, subscribe now.

.

ಗಂಗಾವತಿ: ಕಳೆದ ವಾರ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯವರ ಕುಟುಂಬದವರಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಲಂಚ ಕೇಳಿ, ಕೊಡದೇ ಇದ್ದಾಗ ಗರ್ಭಿಣಿಗೆ ಸರಿಯಾದ ಚಿಕಿತ್ಸೆ ನೀಡದೆ ಗರ್ಭಿಣಿ ಹಾಗೂ ಮಗುವಿನ ಸಾವಿಗೆ ಕಾರಣರಾದ ಡಾ|| ಈಶ್ವರ ಸವಡಿ ಯವರನ್ನು ಕೂಡಲೇ ಅಮಾನತ್ತುಗೊಳಿಸಿ, ಮೃತ ಗರ್ಭೀಣಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಆಗ್ರಹಿಸಿ ನವೆಂಬರ್-೯ನೇ ಗುರುವಾರದಂದು ಕರ್ನಾಟಕ ರೈತ ಸಂಘ ಹಾಗೂ ದಲಿತ ಸಮನ್ವಯ ಸಮಿತಿ ಗಂಗಾವತಿ ತಹಶೀಲ್ ಕಛೇರಿ ಮುಂದೆ ಪ್ರತಿಭಟನೆ ಮೂಲಕ ಒತ್ತಾಯಿಸಿವೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೇಗಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


ಡಾ|| ಈಶ್ವರ ಸವಡಿಯವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿ ಮಾತನಾಡುತ್ತಿದ್ದರು. ಸದ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಂದ ಹಣ ವಸೂಲಿ ಮಾಡುತ್ತಾ ರೋಗಿಗಳ ರಕ್ತ ಹಿರುವುದು ಮುದುವರೆದಿದೆ. ಕಳೆದ ೫ ವ?ಗಳಿಂದ ಇವರ ಹಣದಾಸೆ ಮತ್ತು ಭ್ರ?ಚಾರದಿಂದ ಅನೇಕ ಮಹಿಳೆಯರು ಮತ್ತು ಮಕ್ಕಳು ಇತರೇ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬಿಕಾಳ ಸಾವಿಗೆ ಮತ್ತು ಭ್ರ?ಚಾರಕ್ಕೆ ತಾಲೂಕು ವೈದ್ಯಾಧಿಕಾರಿಗಳಾದ ಈಶ್ವರ ಸವಡಿ ಇವರೆ ಕಾರಣರಾಗಿದ್ದು, ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಮಾನತ್ತುಗೊಳಿಸಬೇಕು ಹಾಗೂ ಮೃತ ಗರ್ಭೀಣಿ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಕರ್ನಾಟಕ ರೈತ ಸಂಘ ಒತ್ತಾಯಿಸುತ್ತದೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಟಿ.ಯು.ಸಿ.ಐ ರಾಜ್ಯಾಧ್ಯಕ್ಷರಾದ ಭಾರಧ್ವಾಜ್, ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ.ಹೆಚ್. ಪೂಜಾರ, ಜಿಲ್ಲಾಧ್ಯಕ್ಷರಾದ ಮಲ್ಲೇಶಗೌಡ, ಡಿ.ಎಸ್.ಎಸ್ ಭೀಮವಾದದ ಸಂಚಾಲಕರಾದ ಪಾಮಣ್ಣ ಅರಳಿಗನೂರು, ದಲಿತ ಸಮನ್ವಯ ಸಮಿತಿಯ ಸಂಚಾಲಕರಾದ ಬಸವರಾಜ ಅಗೇದಾಳ, ಪಾಮಪ್ಪ ಮಲ್ಲಾಪುರ, ಮೃತಳ ಕುಟುಂಬದ ಅನೇಕ ಸದಸ್ಯರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: