Sign in
Sign in
Recover your password.
A password will be e-mailed to you.
: ಹಂಪಿಯ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರನ್ನು ನವೆಂಬರ್ 2ರಂದು ಗಿಣಿಗೇರಾ ಹತ್ತಿರದ ಎಂಎಸ್‌ಪಿಎಲ್ ಏರೋಡ್ರಮ್ ಆವರಣದಲ್ಲಿ ಭೇಟಿ ಮಾಡಿದ ಸಂಸದರಾದ ಕರಡಿ ಸಂಗಣ್ಣ ಅವರು, ಉಡಾನ್ ಯೋಜನೆಗಾಗಿ ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಭೂಮಿ ಖರೀದಿಸುವ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಈಗಾಗಲೆ ಕೊಪ್ಪಳ ತಾಲೂಕಿನ ಕುಷ್ಟಗಿ ರಸ್ತೆಗೆ ಹೊಂದಿಕೊAಡAತೆ ತಾಳಕನಕಾಪೂರ, ಬುಡಶೆಟ್ನಾಳ, ಕಲಕೇರಿ ಹಾಗೂ ಹಟ್ಟಿ ಗ್ರಾಮಗಳ ಒಟ್ಟು ವಿಸ್ತೀರ್ಣ 669-10 ಎಕರೆ ಜಮೀನನ್ನು ಸರ್ವೇ ಮಾಡಿ ನಕ್ಷೆ ತಯಾರಿಸಿ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಇವರ ತಾಂತ್ರಿಕ ತಂಡ ಅಧ್ಯಯನ ಮಾಡಿ ತನ್ನ ಒಪ್ಪಿಗೆಯನ್ನು ಸೂಚಿಸಿರುತ್ತದೆ. ತದನಂತರ ಕೊಪ್ಪಳದ ಜಿಲ್ಲಾಡಳಿತ ಮಾನ್ಯ ಸರಕಾರದ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯವರಿಗೆ£ ಪ್ರಸ್ಥಾವನೆಯನ್ನು ಸಲ್ಲಿಸಿ ಆಡಳಿತಾತ್ಮಕ ಅನುಮೋದನೆಯನ್ನು ಕೋರಿರುತ್ತಾರೆ. ಸದರಿ ಪ್ರಸ್ಥಾವನೆಯನ್ನು ಸಂಬAಧಿಸಿದ ಇಲಾಖೆಯವರು ತಕ್ಷಣವೇ ಪರಿಶೀಲನೆ ಮಾಡಿ ಆಡಳಿತಾತ್ಮಕ ಅನುಮೋದನೆ ನೀಡುವದು ಅವಶ್ಯವಿದೆ. ಈ ಮಧ್ಯದಲ್ಲಿ ಹಿಂದಿನ ಸರ್ಕಾರ ಉದ್ದೇಶಿತ ವಿಮಾನ ನಿಲ್ದಾಣ ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರೂ.40 ಕೋಟಿಗಳ ಅನುದಾನವನ್ನು ಕೆ.ಕೆ.ಆರ್.ಡಿ.ಬಿ ಯೋಜನೆಯಲ್ಲಿ ಮೀಸಲಾಗಿರಿಸಿದ್ದರು. ಪ್ರಯುಕ್ತ ತಾವು ಈ ಕುರಿತು ಸಂಬAಧಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ದೇಶಿಸಬೇಕು ಮತ್ತು ಭೂ-ಸ್ವಾಧೀನಕ್ಕಾಗಿ ಅವಶ್ಯವಿರುವ ಅನುದಾನವನ್ನು ಸಹ ಮಂಜೂರು ಮಾಡಬೇಕೆಂದು ವಿನಂತಿಸಿ ಸಂಸದರು ತಮ್ಮ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಉಪಸ್ಥಿತರಿದ್ದರು.
Get real time updates directly on you device, subscribe now.
Comments are closed.