ಡಂಬ್ರಳ್ಳಿ ಯುವಕನ ಕೊಲೆ: ಎ೧ ಆರೋಪಿಯ ಬಂಧನ

Get real time updates directly on you device, subscribe now.

ಕೊಪ್ಪಳ : ಡಂಬ್ರಳ್ಳಿಯ ಯುವಕನ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಎ೧ ಆರೋಪಿಯನ್ನು ಬಂದಿಸಲಾಗಿದೆ.

ಈ ಹಿಂದೆ ಪ್ರಕರಣದಲ್ಲಿ ಭಾಗೀಯಾಗಿದ್ದ ಎರಡನೇ ಆರೋಪಿಯನ್ನು ಬಂಧಿಸಲಾಗಿತ್ತು. ಈಗ ಮೊದಲ ಆರೋಪಿಯನ್ನು ಬಂಧಿಸುವಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ

ಪ್ರಕರಣದ ವಿವರ ಹೀಗಿದೆ

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಕುಕನೂರು ಠಾಣಾ ವ್ಯಾಪ್ತಿಯ ತಳಬಾಳ ಸೀಮಾದಲ್ಲಿ ದಿನಾಂಕ 29-09-2023 ರಂದು ಸಾಯಂಕಾಲ 05-10 ಗಂಟೆಯಿಂದ 04-10-2023 ರಂದು ಸಾಯಂಕಾಲ 16-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಯಾವುದೋ ಆಯುಧದಿಂದ ಚಂದ್ರಗೌಡ ತಂದೆ ನಿಂಗನಗೌಡ ನಂದನಗೌಡ್ರ ವಯಾ: 30 ವರ್ಷ, ಸಾ: ಡಂಬಳ್ಳಿ ಈತನನ್ನು ಜೋರಾಗಿ ತಲೆಗೆ ಮತ್ತು ಮುಖಕ್ಕೆ ಹೊಡೆದು ಕೊಲೆ ಮಾಡಿ ಮೃತ ದೇಹದ ಬಲಗೈಗೆ ನೀಲಿ ಹಗ್ಗದಿಂದ ಕಲ್ಲನ್ನು ಕಟ್ಟಿ ತಳಬಾಳ ಸಿಮಾದ ಬಸನಗೌಡ ಮೋರಗೇರಿ, ಸಾತಳಬಾಳ ಇದರ ಹೊಲದಲ್ಲಿರುವ ಕಲ್ಲಿನ ಭಾವಿಯಲ್ಲಿರುವ ನೀರಿನಲ್ಲಿ ಹಾಕಿ ಹೋಗಿದ್ದರಿಂದ ಕುಕನೂರು ಪೊಲೀಸ್ ಠಾಣೆಯಲ್ಲಿ ದಿನಾಂಕ : 04- 10-2023 ರಂದು ಫಿರ್ಯಾದಿದಾರರಾದ ಶಂಕರಗೌಡ ತಂದೆ ನಿಂಗನಗೌಡ ನಂದನಗೌಡ್ರ ವಯಾ:32 ವರ್ಷ, ಸಾಡಂಬಳ್ಳಿ ತಾ,ಜಿ.ಕೊಪ್ಪಳ ಇವರು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಕುಕನೂರು ಠಾಣೆಯಲ್ಲಿ ಗುನ್ನೆ ನಂ : 102/2023 ಕಲಂ 302, 201 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಈ ಮೊದಲು ಮೃತನು ದಿನಾಂಕ : 29-09-2023 ರಂದು ಕಾಣೆಯಾದ ಬಗ್ಗೆ ಆಳವಂಡಿ ಪೊಲೀಸ್‌ ಠಾಣೆಯಲ್ಲಿ ಗುನ್ನೆ ನಂ: 78/2013 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು.

ಪ್ರಕರಣವು ತನಿಖೆಯಲ್ಲಿರುವಾಗ ಕಾಣೆಯಾದ ಮನುಷ್ಯನ ಮೃತದೇಹವು ಕುಕನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊರಕಿದ್ದರಿಂದ ಕುಕನೂರು ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗತ್ತು.

ಪ್ರಕರಣದ ಮಾಹಿತಿ ಬಂದ ಕೂಡಲೇ ಶ್ರೀಮತಿ ಯಶೋಧಾ ವಂಟಗೋಡಿ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು,  ಮತ್ತು ಡಿ.ವೈಎಸ್.ಪಿ ಕೊಪ್ಪಳ ರವರು ತಕ್ಷಣಾ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣದ ಶೀಘ್ರ ಪತ್ತೆಗೆ ತನಿಖಾಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿ  ಶರಣಬಸಪ್ಪ ಸುಬೇದಾರ ಪೊಲೀಸ್‌ ಉಪಾಧೀಕ್ಷಕರು ಕೊಪ್ಪಳ, ರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿಗಳಾದ  ಮೌನೇಶ್ವರ ಮಾಲಿಪಾಟೀಲ ಸಿ.ಪಿ.ಐ ಯಲಬುರ್ಗಾ ವೃತ್ತರವರ ತಂಡವು ದಿನಾಂಕ: 11-10-2023 ರಂದು ಪ್ರಕರಣದ 2ನೇ ಆರೋಪಿತನಾದ ಸುವೀರಕುಮಾರ ತಂದೆ ಶ್ರೀಹರಿ ಮಾನುಕೊಂಡ ವಯಾ:34 ವರ್ಷ, ಜಾ:ಕಮ್ಮಾ ಉಕ್ಕಲುತನ ಸಾಗರಿಕಾಡು ತಾತಾಡಿಕೊಂಡಾ ಜಿ.ಗುಂಟೂರು ರಾಜ್ಯ ಆಂದ್ರಪ್ರದೇಶ ಈತನನ್ನು ಪತ್ತೆ ಮಾಡಿ ವಿಚಾರಿಸಲಾಗಿ ಆರೋಪಿ ನಂ 01 ಹಾಗೂ ಕೊಲೆಯಾದ ಚಂದ್ರಗೌಡ ನಡುವೆ ಹಣಕಾಸಿನ ವಿಷಯವಾಗಿ ವೈಮನಸ್ಸು ಬಂದಿದ್ದರಿಂದ ಆರೋಪಿ ನಂ || ಈತನೊಂದಿಗೆ ಸೇರಿ ಚಂದ್ರಗೌಡನ ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾನೆ. ಸದರಿ ಆರೋಪಿತನಿಂದ ಕೃತ್ಯಕ್ಕೆ ಬಳಕೆ ಮಾಡಿದ ಕಾರ್, ಹಾಗೂ ಮೃತನ ಮೋಟಾರ ಸೈಕಲ್‌, ಮೊಬೈಲ್ ಫೋನ್, ಚಪ್ಪಲಿ, ಹಾಗೂ ವಾಚ ಜಪ್ತಿ ಮಾಡಲಾಗಿತ್ತು.  ಆರೋಪಿತನನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದು ನಂತರ ಪ್ರಕರಣವನ್ನು  ಪ್ರಯುಕ್ತ ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತರವರಿಗೆ ವರ್ಗಾಯಿಸಲಾಗಿತ್ತು.

 ಈ ಪ್ರಕರಣದಲ್ಲಿ ಆರೋಪಿತರ ಪೈಕಿ ಆರೋಪಿ ನಂ ।। ಜಟ್ಟಾ ನಾರಾಯಣಸ್ವಾಮಿ ತಂದೆ ಜಡ್ಡಾ ಚಿನ್ನ ನಾಸರಯ್ಯ ವಯಾ: 30 ಉ: ಬ್ಯಾಂಕ್ ನೌಕರ ಸಾ: ಐನಾದಲು ತಾ: ನೂಜೆಂಡ್ತಾ ಜಿ: ಹಲನಾಡು ರಾಜ್ಯ ಆಂದ್ರಪ್ರದೇಶ ಈತನನ್ನು  ಮಹಾಂತೇಶ ಸಜ್ಜನ್‌ ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ ರವರ ತಂಡವು ಇಂದು ವಶಕ್ಕೆ ಪಡೆದು ಬಂಧಿಸಿದ್ದು ಆರೋಪಿತನು ಹಣದ ವ್ಯವಹಾರ ಹಾಗೂ ವೈಯಕ್ತಿಕ ದ್ವೇಷದಿಂದ ಆರೋಪಿ ನಂ 02  ಕೂಡಿಕೊಂಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿತನನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿ 01  ಬಂಧಿಸಲು ತಂಡವನ್ನು ರಚಿಸಿದ್ದು ತಂಡದಲ್ಲಿ  ಅಶೋಕ ಬೇವೂರು ಪಿ.ಎಸ್.ಐ.  ಹೀರಪ್ಪ ಪಿ.ಎಸ್.ಐ ಸಿಬ್ಬಂದಿಯವರಾದ ಮಹೇಶ ಸಜ್ಜನ್, ನಿಂಗಪ್ಪ, ಮಹಾಂತಗೌಡ, ಚಂದಾಲಿಂಗ, ಬಸವರಾಜ, ಮಂಜುನಾಥ, ಮಾರುತಿ ಮತ್ತು ಚಾಲಕರಾದ ಚಂದ್ರಶೇಖರ ಹಾಗೂ ಸಿ.ಡಿ.ಆರ್. ವಿಭಾಗದ ಪ್ರಸಾದ್ ಮತ್ತು ಕೊಟೇಶ ರವರುಗಳು ಪ್ರಕರಣ ವರ್ಗಾವಣೆಯಾಗಿ 04 ದಿನದೊಳಗಾಗಿ ಆರೋಪಿಯನ್ನು ಬಂದಿಸಿದ್ದು, ಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಕೊಪ್ಪಳ ಎಸ್ಪಿ ಯಶೋದಾ ವಂಟಿಗೋಡಿಯವರು

ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: