Get real time updates directly on you device, subscribe now.
ಜಿಲ್ಲಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಅಕ್ಟೋಬರ್ 28ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ಸಂಸದರಾದ ಕರಡಿ ಸಂಗಣ್ಣ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವಾಗ ಮಹರ್ಷಿ ವಾಲ್ಮೀಕಿ ಅವರನ್ನು ನಾವು ಸ್ಮರಿಸಲೇಬೇಕು. ಮಹರ್ಷಿ ವಾಲ್ಮೀಕಿಯವರ ಸ್ಮರಣೆ ಅಂದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೆನಪಿಸುವ ದಿನ ಎಂದೇ ನಾವೆಲ್ಲರು ಭಾವಿಸಬೇಕು ಎಂದು ಅವರು ತಿಳಿಸಿದರು.
ಮಹರ್ಷಿ ವಾಲ್ಮೀಕಿಯು ಕನ್ನಡದ ಮೊದಲ ಕವಿ ಆಗಿದ್ದಾರೆ. ಆದಿಕವಿ ಎಂದೇ ಅವರು ಸುಪ್ರಸಿದ್ಧರಾಗಿದ್ದಾರೆ. ಜಗಜ್ಯೋತಿ ಬಸವೇಶ್ವರರು, ಡಾ.ಬಿ.ಆರ್.ಅಂಬೇಡ್ಕರ ಅವರಂತಹ ಅನೇಕ ಮಹನಿಯರು ಸಮಸಮಾಜದ ಕನಸು ಕಂಡು ಅದರ ಸಾಕಾರಕ್ಕೆ ಶ್ರಮಿಸಿದರು. 12ನೇ ಶತಮಾನದಲ್ಲಿ ಶರಣರು ನಡೆಸಿದ ಸಮಾಜೋದ್ಧಾರ ಕ್ರಾಂತಿಗೆ ಮತ್ತು ಆನಂತರ ಅಂಬೇಡ್ಕರ ಅವರು ನಡೆಸಿದ ಪ್ರಜಾಪ್ರಭುತ್ವದ ಹೋರಾಟಕ್ಕೆ ಮಹರ್ಷಿ ವಾಲ್ಮೀಕಿಯವರ ವಿಚಾರಧಾರೆಗಳು ಪೂರಕವಾಗಿವೆ. ಸಮಸಮಾಜದ ಕನಸು ಮತ್ತು ಹೋರಾಟಕ್ಕೆ ಹಾಗೂ ಸಂವಿಧಾನ ರಚನೆಗೆ ವಾಲ್ಮೀಕಿಯವರ ಆಲೋಚನೆಗಳು ಬೀಜರೂಪದಂತೆ ಕೆಲಸ ಮಾಡಿದ್ದು ಸ್ಮರಣೀಯವಾಗಿದೆ. ಈ ಕಾರಣದಿಂದಾಗಿ ಸರ್ವೋತ್ತಮ ಚಿಂತಕರಾಗಿದ್ದ ವಾಲ್ಮೀಕಿಯವರನ್ನು ಮಹಾನ್ ಮಾನವತಾವಾದಿ, ಸಮಾಜ ಸುಧಾರಕರು, ಶಿಕ್ಷಣ ತಜ್ಞ, ರಾಜನೀತಿ ತಜ್ಞ, ತತ್ವಜ್ಞಾನಿ ಎಂದು ಕರೆದಿದ್ದಾರೆ ಎಂದರು.
ಸಾಹಿತ್ಯೀಕವಾಗಿ ರಾಮಾಯಣವು ಜಾಗತಿಕ ಪ್ರಸಿದ್ಧ ಕೃತಿಯಾಗಿದೆ. ಸಾಹಿತ್ಯದಲ್ಲಿ ನಾವು ಅಮೋಘ ಸಾಧನೆ ಮಾಡಲು ವಾಲ್ಮೀಕಿಯವರ ಕೃತಿ ರಾಮಾಯಣವು ನಮಗೆ ಮಾರ್ಗದರ್ಶಿ ಮತ್ತು ಸದಾಕಾಲ ಸ್ಫೂರ್ತಿದಾಯಕವಾಗಿದೆ. ವಾಲ್ಮೀಕಿಯವರ ಕಲ್ಪನೆಗಳು ಈಗಲೂ ನಮಗೆ ಮಾದರಿಯಾಗಿವೆ. ಅವರ ಅನಾಥಾಶ್ರಮದ ಕಲ್ಪನೆ ವಿಶಿಷ್ಟವಾಗಿದೆ. ಅಂದಿನ ಕಾಲದ ರಾಜಮಹಾರಾಜರಿಗೆ ಸಹ ವಾಲ್ಮೀಕಿಯವರು ಆದರ್ಶಪ್ರಾಯರಾಗಿದ್ದರು. ಇಂದಿನ ಸಿವಿಲ್ ಎಂಜಿನಿಯರಿAಗ್ ಕಲ್ಪನೆ ಮೊಳೆತದ್ದೇ ವಾಲ್ಮೀಕಿ ಮಹರ್ಷಿ ಅವರ ಕಾಲಾವಧಿಯಲ್ಲಿ ಎಂಬುದನ್ನು ಅರಿಯಬೇಕು. ಇಂದಿನ ಡಿಜಿಟಲ್ ಇಂಡಿಯಾ ಯೋಜನೆಯ ಸಾಕಾರಕ್ಕೆ ಸಹ ಅಂದಿನ ಪುಷ್ಪಕ ವಿಮಾನ ಕಲ್ಪನೆಯೇ ಮೂಲ ತಳಹದಿಯಾಗಿದೆ. ಹೀಗಾಗಿ ವಾಲ್ಮೀಕಿ ಮಹರ್ಷಿಯು ನಮಗೆ ದಾರ್ಶನಿಕರಾಗಿ ಸದಾಕಾಲ ಸ್ಮರಣೀಯರಾಗಿರುತ್ತಾರೆ. ಹೀಗಾಗಿ ಅವರ ತತ್ವಗಳು ಮತ್ತು ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಬಾಳಬೇಕು ಎಂದರು.
ನಮ್ಮ ಸಮಾಜಕ್ಕೆ ವಾಲ್ಮೀಕಿ ಸಮುದಾಯದ ಬಂಧುಗಳ ಕೊಡುಗೆ ಅಪಾರವಾಗಿದೆ. ಪ್ರಥಮವಾಗಿ ನೇತ್ರದಾನ ಮಾಡಿದ ಕೀರ್ತಿ ವಾಲ್ಮೀಕಿ ನಾಯಕ ಸಮುದಾಯದ ಬೇಡರ ಕಣ್ಣಪ್ಪ ಅವರಿಗೆ ಸಲ್ಲುತ್ತದೆ. ತನ್ನ ಗುರುವಿಗೆ ಗುರು ಕಾಣಿಕೆಯಾಗಿ ತನ್ನ ಹೆಬ್ಬೆರಳನ್ನು ನೀಡಿದ ಶ್ರೇಯಸ್ಸು ವಾಲ್ಮೀಕಿ ನಾಯಕ ಸಮಾಜದ ಏಕಲವ್ಯ ಅವರಿಗೆ ಸಲ್ಲುತ್ತದೆ. ಶೌರ್ಯಕ್ಕೆ ಹೆಸರಾಗಿದ್ದ ವಾಲ್ಮೀಕಿ ಸಮುದಾಯದ ಸಿಂಧೂರ ಲಕ್ಷö್ಮಣ ಅವರು ಸ್ವಾತಂತ್ರö್ಯ ಚಳುವಳಿಯಲ್ಲಿ ಹೋರಾಡಿದ್ದನ್ನು ಸ್ಮರಿಸಬೇಕು. ವಾಲ್ಮೀಕಿ ಸಮುದಾಯದ ಹಲಗಲಿಯ ಬೇಡ ನಾಯಕರು ಸಹ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿ ವಾಲ್ಮೀಕಿ ಸಮುದಾಯದವರು ವೀರ ಶೂರತನಕ್ಕೆ ಹೆಸರಾದವರು ಎಂಬುದನ್ನು ಸಾಬೀತುಪಡಿಸಿದ್ಧಾರೆ. ವಿಜಯನಗರ ಸಾಮ್ರಾಜ್ಯಕ್ಕೆ ಬುನಾದಿ ಹಾಕುವಲ್ಲಿ ಸಹ ವಾಲ್ಮೀಕಿ ನಾಯಕರ ಪಾತ್ರ ಮಹತ್ವದ್ದಾಗಿದೆ. ಕೊಪ್ಪಳದ ವೀರಪ್ಪ ನಾಯಕ ಅವರ ಕೊಡುಗೆಯನ್ನು ಸಹ ನಾವು ಸ್ಮರಿಸಬೇಕು ಎಂದರು.
ರಾಜಕಾರಣಿಗಳೆಂದರೆ ಅವರಿಗೆ ಯಾವುದೇ ಮಾರ್ಗವಿಲ್ಲ ಅನ್ನುವಂತ ಭಾವನೆ ಈ ಸಮಾಜದಲ್ಲಿದೆ. ಹೀಗಾಗಿ ರಾಜಕಾರಣಿಗಳು ಸಹ ರಾಮನಾಗಿ ನಡೆಯಬೇಕು. ಈ ಸಮಾಜಕ್ಕೆ ನಾವು ಏನು ಮಾಡಬೇಕು ಎಂಬುದನ್ನು ಅರಿತು ರಾಜಕಾರಣಿಗಳು ನಡೆಯಬೇಕಿದೆ. ರಾಜಕಾರಣಿಗಳಿಗೆ ಸಹ ವಾಲ್ಕೀಯವರು ಆದರ್ಶಪ್ರಾಯರಾಗಿದ್ಧಾರೆ ಎಂದರು.
ತೆಂಗಿನಕಾಯಿ ನೋಡಲು ಒರಟಾಗಿರುತ್ತದೆ ಆದರೆ ಅದರೊಳಗಿನ ಕೊಬ್ಬರಿ ಸಿಹಿಯಾಗಿರುತ್ತದೆ. ಅದರಂತೆ ನಾಯಕ ಸಮಾಜದವರು ಸಜ್ಜನರು ಎಂದು ವಾಲ್ಮೀಕಿ ನಾಯಕ ಸಮಾಜ ಬಾಂಧವರ ಗುಣಗಳ ಬಗ್ಗೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು. ವಾಲ್ಮಿಕಿ ನಾಯಕ ಬಂಧುಗಳು ಇನ್ನೀತರರೊಂದಿಗೆ ಸೇರಿ ನಡೆಯಬೇಕು. ಸಾವಯವ ಕೃಷಿ, ಆಧುನಿಕ ಕೃಷಿಯಂತಹ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಆರ್ಥಿಕವಾಗಿ ಇನ್ನಷ್ಟು ಸಬಲರಾಗಬೇಕು. ಆರ್ಥಿಕ ವ್ಯವಸ್ಥೆಯು ಕುಸಿಯಲಿಕ್ಕೆ ಕಾರಣವಾಗುವ ಕುಡಿತ, ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ಮಾಡಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡಿವೆ. ವಾಲ್ಕೀಕಿ ಸಮುದಾಯದವರು ಸಹ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಶಿಕ್ಷಣದ ಬೇರುಗಳು ತೆಳುವಾಗಿರುತ್ತವೆ ಆದರೆ ಅದರ ಹಣ್ಣುಗಳ ಮಾತ್ರ ಸಿಹಿಯಾಗಿರುತ್ತವೆ ಎನ್ನುವಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಸಮಾಜದ ಪರಿಪೂರ್ಣತೆ ಬದಲಾವಣೆ ಸಾಧ್ಯವಾಗುತ್ತದೆ ಎಂದು ಸಲಹೆ ಮಾಡಿದರು. ಮಹರ್ಷಿ ವಾಲ್ಮೀಕಿಯವರ ಆದರ್ಶತನ ಅಂದರೆ ಅದು ನನಗೋಸ್ಕರ ಅಲ್ಲ, ಸಮಾಜಕೋಸ್ಕರ ಎಂಬುದಾಗಿದೆ. ಮುಖ್ಯವಾಗಿ ತ್ಯಾಗವೇ ಇವರ ಮುಖ್ಯ ವಿಚಾರಧಾರೆಯಾಗಿದೆ. ಇದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಂಸದರು ಸಲಹೆ ಮಾಡಿದರು.
ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಮಾತನಾಡಿ, ರಾಮನ ಸೃಷ್ಟಿಕರ್ತನಾದ ವಾಲ್ಮೀಕಿಯು 24 ಸಾವಿರ ಶ್ಲೋಕಗಳನ್ನು ಹಾಗೂ 7 ಕಾಂಡಗಳನ್ನು ನಿರ್ಮಿಸಿ ನಮಗೆ ಕಾಣಿಕೆಯಾಗಿ ನೀಡಿ ಇಡೀ ಜಗತ್ತಿನ ಕವಿಗಳಲ್ಲಿಯೇ ಆದಿ ಕವಿ ಅನ್ನಿಸಿದ್ದಾರೆ. ಮಹರ್ಷಿ ವಾಲ್ಮೀಕಿಯವರು ಸದಾಕಾಲ ನಮಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ವಾಲ್ಕೀಕಿ ಸಮುದಾಯದ ಮಹಿಳೆಯರು ಮುನ್ನೆಲೆಗೆ ಬರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದಂತೆ ನಾವು ಮೊದಲು ಶಿಕ್ಷಣ ಪಡೆಯಬೇಕು. ಬಳಿಕ ಸಂಘಟಿಕರಾಗಬೇಕು. ಆ ನಂತರ ಹೋರಾಟ ನಡೆಸಬೇಕು ಎಂದು ಸಲಹೆ ಮಾಡಿದರು. ಮನೆಯನ್ನು ಬಿಟ್ಟು ನಾವು ಹೊರಗಡೆ ಬಂದಾಗ ಮಾತ್ರ ನಮಗೆ ಅವಕಾಶಗಳು ಸಿಗಲು ಸಾಧ್ಯವಿದೆ. ಇದನ್ನು ಮಹಿಳೆಯರು ಅರಿತು ಮುಂದೆ ಬರಬೇಕು ಎಂದರು. ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿ ವಸತಿ ನಿಲಯಗಳ ನಿರ್ಮಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಶಾಸಕರಲ್ಲಿ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಶ್ರೀರಾಮನ ಚರಿತ್ರೆಯನ್ನು ರಾಮಾಯಣ ಕಾವ್ಯದ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟ ಶ್ರೇಯಸ್ಸು ಆದಿಕವಿ ಮಹರ್ಷಿ ವಾಲ್ಮೀಕಿಯವರಿಗೆ ಸಲ್ಲುತ್ತದೆ. ಈ ಕಾವ್ಯದ ಮೂಲಕ ಶ್ರೀರಾಮನ ಜೀವನ ಚರಿತ್ರೆಯನ್ನು ತಿಳಿಯಲು ನಮಗೆ ಸಾಧ್ಯವಾಗಿದೆ ಎಂದರು. ಮಾನವೀಯ ಮೌಲ್ಯಗಳನ್ನು ನಾವು ಬೆಳೆಸಿಕೊಳ್ಳುವಂತಹ ಪರಿಕಲ್ಪನೆಯು ನಮಗೆ ವಾಲ್ಮೀಕಿಯವರಿಂದ ಬಂದಿರುವುದು ಅವೀಸ್ಮರಣೀಯವಾಗಿದೆ ಎಂದರು.
ಈ ಸಮುದಾಯದವರು ಅಕ್ಷರ ಸಂಸ್ಕೃತಿಯಿAದ ಇನ್ನು ಸಹ ಮುಂದೆ ಬರಬೇಕು. ಆರ್ಥಿಕವಾಗಿ ಶೈಕ್ಷಣಿಕವಾಗಿ ಸಬಲರಾಗಬೇಕು ಎಂದರು. ಸ್ವಾತಂತ್ರö್ಯ ದೊರೆತು ಬಹು ವರ್ಷಗಳಾದರು ಇನ್ನೂ ಕೆಲವು ಸಮುದಾಯಗಳು ಪೂರ್ಣಪ್ರಮಾಣದಲ್ಲಿ ಮುಂದೆ ಬಂದಿರುವುದಿಲ್ಲ. ಅಂತಹ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರಗಳು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ ಎಂದು ತಿಳಿಸಿದರು.
ಪ್ರಾಧ್ಯಾಪಕ, ಚಿಂತಕ ಡಾ.ಎ.ಬಿ.ರಾಮಚಂದ್ರಪ್ಪ ದಾವಣಗೆರೆ ವಿಶೇಷ ಉಪನ್ಯಾಸ ನೀಡಿದರು.
ನೇರ ಪ್ರಸಾರ: ಕೊಪ್ಪಳದ ಅಕ್ಷರ ಟಿವಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ವಿರೂಪಾಕ್ಷಪ್ಪ ಮೋರನಾಳ, ಗುರುರಾಜ ಹಲಗೇರಿ, ಪಟ್ಟಣ ಪಂಚಾಯತಿ ಸದಸ್ಯೆ ಮಂಜುಳಾ ಶಾವಿ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ತಹಶೀಲ್ದಾರರಾದ ವಿಠ್ಠಲ್ ಚೌಗಲೆ, ತಾಪಂ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ರಾಜು ತಳವಾರ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಹೇಮಂತರಾಜ್, ಸಮಾಜದ ಮುಖಂಡರಾದ ರತ್ನಾಕರ ತಳವಾರ, ಸುರೇಶ ಡೊಣ್ಣಿ, ಶರಣಪ್ಪ ನಾಯಕ, ಇಂದಿರಾ ಭಾವಿಕಟ್ಟಿ, ಗೀತಾ ಮುತ್ತಾಳ, ನಿವೃತ್ತ ಅಧಿಕಾರಿ ಪಾಲಾಕ್ಷಪ್ಪ ಸೇರಿದಂತೆ ಇತರರು ಇದ್ದರು. ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಸ್ವಾಗತಿಸಿದರು. ಶಿಕ್ಷಕ ಪ್ರಾಣೇಶ ಪೂಜಾರ ನಿರೂಪಿಸಿದರು.

Comments are closed.