ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ : ಜಿಲ್ಲಾ ಮಟ್ಟದ ಸದಸ್ಯರ ನೇಮಕಕ್ಕೆ ಪ್ರಸ್ತಾವನೆ ಆಹ್ವಾನ

Get real time updates directly on you device, subscribe now.

 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನ ಸಮಿತಿಗೆ ಜಿಲ್ಲಾ ಮಟ್ಟದ ಸದಸ್ಯರನ್ನ ನೇಮಕ ಮಾಡಬೇಕಗಾಗಿದ್ದು, ಅರ್ಹರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಪಂಚಾಯತ್ ರಾಜ್/ಪುರಸಭೆಯಿಂದ ಚುನಾಯಿತರಾದ ಅಲ್ಪಸಂಖ್ಯಾತರ ಸಮುದಾಯದ ಮೂವರು ಹಾಗೂ ಜಿಲ್ಲೆಯಲ್ಲಿ ಇರುವಂತಹ ಪ್ರತಿಷ್ಠಿತ ಅಲ್ಪಸಂಖ್ಯಾತರ ಸಂಸ್ಥೆಗಳ ಮೂವರು ಜನಪ್ರತಿನಿಧಿಗಳನ್ಜು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಬೇಕಾಗಿರುತ್ತದೆ. ಆದ್ದರಿಂದ ಸಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿಗಳ ಸಮುದಾಯಕ್ಕೆ ಸೇರಿರುವ ಆಸಕ್ತಿಯುಳ್ಳ ಪಂಚಾಯತ್ ರಾಜ್/ಪುರಸಭೆಯಿಂದ ಚುನಾಯಿತರಾದ ಸದಸ್ಯರುಗಳು ಪ್ರತಿನಿಧಿಯಾಗಿರುವ ಬಗ್ಗೆ ನೋಂದಣಿ ಪ್ರಮಾಣ ಪತ್ರ, ಸಮುದಾಯಕ್ಕೆ ಸೇವೆ ಸಲ್ಲಿಸಿರುವ ಬಗ್ಗೆ ಅಗತ್ಯ ದಾಖಲೆಗಳು, ವೈಯಕ್ತಿಕ ವಿವರಗಳನ್ನು ಸಲ್ಲಿಸಬೇಕು. ಮತ್ತು ಪ್ರತಿಷ್ಠಿತ ಅಲ್ಪಸಂಖ್ಯಾತರ ಸಂಸ್ಥೆ/ಸAಘಗಳಿಗೆ ಸಂಬAಧಿಸಿದAತೆ ಪ್ರತಿಷ್ಠಿತ ಅಲ್ಪಸಂಖ್ಯಾತ ಸಂಸ್ಥೆ/ಸAಘಗಳ ಪ್ರತಿನಿಧಿಯಾಗಿರುವ ಬಗ್ಗೆ ದಾಖಲೆ, ಸಮುದಾಯಕ್ಕೆ ಸೇವೆ ಸಲ್ಲಿಸಿರುವ ಬಗ್ಗೆ ಅಗತ್ಯ ದಾಖಲೆಗಳು, ವೈಯಕ್ತಿಕ ವಿವರಗಳನ್ನು ಜಿಲ್ಲಾ ಅಲ್ಪ ಸಂಖ್ಯಾತರ ಕಚೇರಿಗೆ  ನವಂಬರ್ 06 ರೊಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: