ಕುವೈತ್ ನಲ್ಲಿ ನಡೆಯಲಿರುವ ಮಾಧ್ಯಮ ಶಿಕ್ಷಕರ ಸಮ್ಮೇಳನಕ್ಕೆ ಡಾ. ಬಿ.ಕೆ. ರವಿ

Get real time updates directly on you device, subscribe now.

ಕುವೈತ್ ನಲ್ಲಿ ಅಕ್ಟೋಬರ್ 28 ರಿಂದ 30ರವರೆಗೆ ಅರಬ್-ಅಮೇರಿಕ ಮಾಧ್ಯಮ ಶಿಕ್ಷಕರ ಸಂಘದ 27ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯಲಿರುವ “ಬದಲಾಗುತ್ತಿರುವ ಮಾಧ್ಯಮದ ಆಯಾಮಗಳು : ಮಾಧ್ಯಮ ಸಂಗಮ ಮತ್ತು ವಿಭಜನೆ” ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ ಪಾಲ್ಗೊಳ್ಳಲಿದ್ದಾರೆ.
ಸಂಘಟಕರ ಆಹ್ವಾನದ ಮೇಲೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಡಾ. ಬಿ.ಕೆ. ರವಿಯವರು “ಮಾಧ್ಯಮ ಸಂಗಮದ ಯುಗದಲ್ಲಿ ಆರೋಗ್ಯ ಸಂವಹನದ ಗ್ರಹಿಕೆ” ಕುರಿತಾದ ಸಂಶೋಧನಾ ಪ್ರಬಂಧ ಮಂಡಿಸುವರು. ಈ ಮಾಧ್ಯಮ ಶಿಕ್ಷಕರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅಮೇರಿಕ ಸೇರಿದಂತೆ ಸುಮಾರು 25 ರಾಷ್ಟ್ರಗಳ ಮಾಧ್ಯಮ ಶಿಕ್ಷಕರು, ವೃತ್ತಿಪರರು ಹಾಗೂ ಮಾಧ್ಯಮ ತಜ್ಞರು ಪಾಲ್ಗೊಳ್ಳುವರು.

Get real time updates directly on you device, subscribe now.

Comments are closed.

error: Content is protected !!