ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಬಹಾದ್ದೂರಬಂಡಿ ಗ್ರಾಮದ ನಿವೃತ್ತ ಯೋಧರಾಗಿದ್ದ ಪರಶುರಾಮ ಕುಂಬಾರ ಇವರು ಉಸಿರಾಟದ ತೊಂದರೆಯಿಂದ ನಿಧನರಾಗಿದ್ದು ಇಡೀ ಬಹದ್ದೂರ ಬಂಡಿ ಗ್ರಾಮಕ್ಕೆ ಬಹಳ ದುಃಖದ ಸಂಗತಿ. ಇದರಿಂದ ಇಡೀ ಬಹದ್ದೂರ ಬಂಡಿ ಗ್ರಾಮ ದುಖದ ಮಡುವಿನಲ್ಲಿದೆ.
ಹೀಗಾಗಿ, ಇವತ್ತು ನಡೆಯಬೇಕಾಗಿದ್ದ ‘ಬಹದ್ದೂರ ಬಂಡಿ ಉತ್ಸವ’ದ ಎರಡನೆಯ ದಿನದ ಕಾರ್ಯಕ್ರಮಗಳನ್ನು ಗ್ರಾಮದ ಎಲ್ಲ ಹಿರಿಯರ, ಸ್ನೇಹಿತರ, ಆಯೋಜಕರ ನಿರ್ಣಯದಂತೆ ರದ್ದುಪಡಿಸಲಾಗಿದೆ
ದೇಶಕ್ಕಾಗಿ ಹೋರಾಡಿದ್ದ, ಸಾರ್ಥಕ ಬದುಕಿನ ನಮ್ಮ ಗ್ರಾಮದ ಹೆಮ್ಮೆಯ ಯೋಧರಾಗಿದ್ದ ಪರಶುರಾಮ ಕುಂಬಾರರ ಹಠಾತ್ ಅಗಲಿಕೆ ಇಡೀ ಗ್ರಾಮಕ್ಕೆ ನೋವುಂಟು ಮಾಡಿದೆ. ಅವರ ನಿಧನಕ್ಕೆ ಕಂಬನಿ ಮಿಡಿಯುತ್ತೇವೆ ಮತ್ತು ‘ಉತ್ಸವ’ದ ಎರಡನೇ ದಿನದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ದಯವಿಟ್ಟು ಎಲ್ಲರೂ ಸಹಕರಿಸಬೇಕು ಎಂದು ಸಂಘಟಕರಾದ ಮಹೆಬೂಬ ಕಿಲ್ಲೇದಾರ ತಿಳಿಸಿದ್ದಾರೆ
Comments are closed.