ಅ.14 ರಿಂದ  ‘ಬಹದ್ದೂರಬಂಡಿ’ ಉತ್ಸವ ; ಎ.ವಿ ಕಣವಿ

Get real time updates directly on you device, subscribe now.

 

ಕೊಪ್ಪಳ :ಅ .14 ಮತ್ತು 15 ರಂದು ಕೊಪ್ಪಳ ಜಿಲ್ಲೆಯ ಇತಿಹಾಸ ಪುಟದಲ್ಲಿರುವ ಮಹತ್ವದ ‘ಗತವೈಭವ’ ಸಾರುವ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸುತ್ತಲಿನ ಐತಿಹಾಸಿಕ ಚಿರಿತ್ರೆಯ ಸ್ಮರಣೆಗಾಗಿ “ಬಹದ್ದೂರಬಂಡಿ ಉತ್ಸವ”ವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುವುದು ಎಂದು ಉತ್ಸವ ಸಮಿತಿಯ ಸರ್ವಾಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ ಕಣವಿ ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೇನುಗೂಡು ಸಾಸ್ಕೃತಿಕ, ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕವಿ ಗವಿಸಿದ್ಧ ಎನ್ ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಸೇವಾಲಾಲ್ ಭವನ, ಬಹದ್ದೂರಬಂಡಿಯಲ್ಲಿ ಈ ಉತ್ಸವ ಕಾರ್ಯಕ್ರಮವನ್ನು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಾಗುವುದು. ಬಹದ್ದೂರಬಂಡಿ ಗ್ರಾ.ಪಂ ಅಧ್ಯಕ್ಷ ಯಲ್ಲಪ್ಪ ತಳವಾರ, ಮಾಬುಸಾಬ ಕಿಲ್ಲೇದಾರ, ಪಂಪಣ್ಣ ಶಿಲ್ಪಿ, ಗೌರಮ್ಮ ಕುಂಬಾರ, ನೀಲಮ್ಮ ಗಂಧದಮಠ, ವೀರಣ್ಣ ಲೇಬಗೇರಿ ಇವರಿಂದ ಬೆಳಿಗ್ಗೆ 08 ಗಂಟೆಗೆ ಚಾಲನೆ ನೀಡಲಾಗುವುದು. ಗ್ರಾಮದ ಹಿರೇಮಸೂತಿಯಿಂದ ದ್ಯಾಮವ್ವನಗುಡಿ ಹಾಗೂ ರಾಜಭಕ್ಷರ ದರ್ಗಾ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸೇವಾಲಾಲ್ ಭವನಕ್ಕೆ ಅದ್ಧೂರಿಯಾಗಿ ಡೊಳ್ಳು ಕುಣಿತ, ಬಾಜಭಜಂತ್ರಿ, ವಿವಿಧ ಬಗೆಯ ಸಾಂಸ್ಕತಿಕ ಕಲಾ ತಂಡಗಳಿಂದ ಮೆರವಣಿಗೆ ಸಾಗುವುದು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉತ್ಸವವನ್ನು ಉದ್ಘಾಟಿಸಲಿದ್ದು, ದಿವ್ಯ ಸಾನಿಧ್ಯವನ್ನು ಕೊಪ್ಪಳ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ, ಕೊಪ್ಪಳದ ಯೂಸೂಫಿಯಾ ಮಸ್ಜೀದ್ನ ಮುಫ್ತಿ ನಜೀರ್ ಅಹ್ಮದ್ ತಸ್ಕೀನ್ ಖಾದ್ರಿ, ಇಮ್ಯಾನ್ಯುವೆಲ್ ಚರ್ಚ್ನ ಜಯರಾಜ ಪಾಸ್ಟರ್, ಸೇವಾಲಾಲ್ ಸಮಾಜದ ಗುರುಗಳಾದ ಮಂಜುನಾಥ ಜಯಚಂದ್ರಗಿರಿ ವಹಿಸುವರು. ಎ.ವಿ ಕಣವಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಸರ್ವಾಧ್ಯಕ್ಷರ ನುಡಿ ಬಿಡುಗಡೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ಸಂಗಣ್ಣ ಕರಡಿ ಜಂಟಿಯಾಗಿ ಬಿಡುಗಡೆಗೊಳಿಸುವರು. ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಕವಿ, ಸಾಹಿತಿಗಳು ಸೇರಿದಂತೆ ಅತಿಥಿ ಗಣ್ಯರು ಪಾಲ್ಗೊಳ್ಳುವರು. ಮಹೇಬೂಬ್ ಕಿಲ್ಲೇದಾರ ನಾಡಗೀತೆಯನ್ನಾಡುವರು, ಚಾಂದಭಾಷಾ ಕಿಲ್ಲೇದಾರ ಪ್ರಾಸ್ತಾವಿಕ ನುಡಿ, ಪ್ರಕಾಶ ಶಿಲ್ಪಿ, ಜಗದೀಶ ಭಜಂತ್ರಿ ನಿರೂಪಿಸುವರು, ಮುಸ್ತಾಪ ಹುಡೇದ್ ವಂದಿಸುವರು.

 

“ಗೋಷ್ಠಿ — 01”

ಅ. 14 ರಂದು ಮಧ್ಯಾಹ್ನ 02 : 30 ರಿಂದ ಸಜೆ 04 : 00 ಗಂಟೆಯವರಗೆ “ಬಹದ್ದೂರಬಂಡಿ ಕೋಟೆ : ಚಾರಿತ್ರಿಕ ಪರಂಪರೆ” ಕುರಿತು “ವಿಷಯ ಮಂಡನೆ” ಕಾರ್ಯಕ್ರಮ ಜರುಗುವುದು. ಹಿರಿಯ ಸಾಹಿತಿ, ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸುವರು. ಸಹಾಯಕ ಪ್ರಾಧ್ಯಾಪಕ, ಸಂಶೋಧಕ ಡಾ.ಜಾಜಿ ದೇವೇಂದ್ರಪ್ಪ ಅವರಿಂದ ಆಶಯ ನುಡಿ. ಉಪನ್ಯಾಸಕ, ಹಿರಿಯ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಅವರಿಂದ ಬಹದ್ದೂರಬಂಡಿಯ ಐತಿಹಾಸಿಕ ಪರಂಪರೆಯ “ವಿಷಯ ಮಂಡನೆ”ಯನ್ನು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ಕವಿ, ಲೇಖಕ, ಸಾಹಿತಿಗಳು ಭಾಗವಹಿಸಿಲಿದ್ದಾರೆ.

“ಗೋಷ್ಠಿ—02”

ಸಂಜೆ 04 :00 ರಿಂದ 05: 30 ಗಂಟೆಯವರಗೆ “ಬಹದ್ದೂರಬಂಡಿ : ಸಾಂಸ್ಕೃತಿಕ ಪರಂಪರೆ” ಎಂಬ ವಿಚಾರಗೋಷ್ಠಿ ನಡೆಯುವುದು. ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ್ ಅಧ್ಯಕ್ಷತೆ ವಹಿಸಿಲಿದ್ದು, ಆಶಯ ನುಡಿಯನ್ನು ಗಂಗಾವತಿಯ ಖ್ಯಾತ ದಂತ ವೈದ್ಯ, ಸಾಹಿತಿ ಡಾ.ಶಿವಕುಮಾರ ಮಾಲಿಪಾಟೀಲ. “ವಿಷಯ ಮಂಡನೆ”ಯನ್ನು ಸಾಹಿತಿ, ಶಿಕ್ಷಕ ರಮೇಶ ಬನ್ನಿಕೊಪ್ಪ ಅವರು ಮಂಡಿಸಲಿದ್ದಾರೆ. ಜಿಲ್ಲೆಯ ಕವಿ, ಸಾಹಿತಿ, ಚಿಂತಕರು, ಶಿಕ್ಷಕಕ ವರ್ಗದವರು ಪಾಲ್ಗೊಳ್ಳುವರು. ಸಂಜೆ 06 :00 ಗಂಟೆಯಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗುವವು.

“ಗೋಷ್ಠಿ—03”

ಅ.15 10 :30ರಿಂದ ಮಧ್ಯಾಹ್ನ12 : 00ಗಂಟೆಯವರಗೆ ‘ಬಂಜಾರ ಸಮುದಾಯ ಮತ್ತು ಬಹದ್ದೂರಬಂಡಿ’ ಎಂಬ ವಿಷಯಾಧಾರಿತ ಚಿಂತನಾಗೋಷ್ಠಿಯ ಅಧ್ಯಕ್ಷತೆಯನ್ನು ಬಂಜಾರ ಸಮಾಜದ ರಾಜ್ಯ ಉಪಾಧ್ಯಕ್ಷ ಭರತ್ ನಾಯಕ್ ವಹಿಸುವರು. ಉಪನ್ಯಾಸಕ ಶರಣಬಸಪ್ಪ ಬಿಳೆಯಲಿ ಅವರಿಂದ ಆಶಯ ನುಡಿ. “ವಿಷಯ ಮಂಡನೆ”ಯನ್ನು ಸಿದ್ದಲಿಂಗಪ್ಪ ಕೊಟ್ನೆಕಲ್. ವಿವಿಧ ತಾಲೂಕಿನ ಸಾಹಿತಿಗಳು, ಜನಪರ ಚಿಂತಕರು ಭಾಗವಹಿಸಲಿದ್ದಾರೆ.

 

“ಗೋಷ್ಠಿ—04”

ಅ.15ರಂದು ಮಧ್ಯಾಹ್ನ 12 :00ಗಂಟೆಯಿಂದ ಮಧ್ಯಾಹ್ನ 01 : 30ರವರಗೆ ಬಹದ್ದೂರಬಂಡಿ : ‘ಅಭಿವೃದ್ಧಿ ಚಿಂತನೆ’ ಎನ್ನುವ ವಿಭಿನ್ನ ಚಿಂತನಾಗೋಷ್ಠಿಯ ಅಧ್ಯಕ್ಷತೆಯನ್ನು ಕವಿ, ಸಾಹಿತಿಗಳಾದ ಅಕ್ಬರ್ ಕಾಲಿಮಿರ್ಚಿ ವಹಿಸುವರು. ಮಹೇಶ ಬಳ್ಳಾರಿ ಅವರಿಂದ ಆಶಯ ನುಡಿ. ಹಿರಿಯ ಪತ್ರಕರ್ತ ಸೋಮರೆಡ್ಡಿ ಅಳವಂಡಿ ಅವರು “ವಿಷಯ ಮಂಡನೆ” ಮಾಡಲಿದ್ದಾರೆ. ಸಮಾಜ ಸೇವಕರು, ಕವಿ, ಕವಿಯತ್ರಿಗಳು ಸೇರಿದಂತೇ ಅನೇಕ ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತದನಂತರದಲ್ಲಿ ವಿವಿಧ ರಂಗದಲ್ಲಿ ಅವಿರತ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು.

“ಗೋಷ್ಠಿ—05”

ಮಧ್ಯಾಹ್ನ 03 : 30 ರಿಂದ 05 : 30ರವರಗೆ “ಕವಿಗೋಷ್ಠಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು ಐವತ್ತಕ್ಕೂ ಕವಿ, ಕವಯತ್ರಿಗಳು ಕವನ, ಕವಿತೆ, ಗಜಲ್, ಕಿರುಗವನ, ಚುಟುಕು ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ವಾಚಿಸಲಿದ್ದಾರೆ.

“ಸಮಾರೋಪ ಸಮಾರಂಭ”

ಅ.15ರಂದು ಸಂಜೆ 06 :00ರಿಂದ 07 :00ರವರಗೆ ಪ್ರಥಮ ಉತ್ಸವದ ಸಮಾರೋಪ ಸಮಾರಂಭ ನಡೆಯುವುದು. ಅಧ್ಯಕ್ಷತೆಯನ್ನು ಬಳ್ಳಾರಿ ವಿವಿ ಸಿಂಡಿಕೇಟ್ ವಿಶ್ರಾಂತ ಸದಸ್ಯ, ಎಸ್.ಜಿ ಕಾಲೇಜಿನ ಉಪನ್ಯಾಸಕರಾದ ಬಸವರಾಜ ಪೂಜಾರ ವಹಿಸಲಿದ್ದಾರೆ. ಯೋಗಾನಂದ ಲೇಬಗೇರಿ ಅವರು ಬಹದ್ದೂರಬಂಡಿ ಉತ್ಸವದ “ನಿಲುವಳಿ”ಗಳ ಮಂಡನೆಯನ್ನು ಮಾಡಲಿದ್ದಾರೆ. ಮಹಮ್ಮದ್ ರಫಿ ಹಿರೇಮಸೂತಿ ಅವರು ಅನುಮೋದಿಸಲಿದ್ದಾರೆ. ಎ.ವಿ ಕಣಿ ಅವರ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಮಾರೋಪ ಕಾಣಲಿದೆ. ಸುದ್ದಿಗೋಷ್ಠಿಯಲ್ಲಿ ಬಹದ್ದೂರಬಂಡಿ ಗ್ರಾ.ಪಂ ಅಧ್ಯಕ್ಷ ಯಲ್ಲಪ್ಪ ತಳವಾರ, ಚಾಂದಭಾಷಾ ಕಿಲ್ಲೇದಾರ, ವಿರುಪಣ್ಣ ಲೇಬಗೇರಿ, ಮಾಬುಸಾಹೇಬ ಸೇರಿದಂತೆ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!