ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ತರಬೇತಿ ಕಾರ್ಯಗಾರ

Get real time updates directly on you device, subscribe now.

: ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಅರಿಹಂತ ಸಂಸ್ಥೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರಿಗೆ ಮೂರು ದಿನದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ದಿನಾಂಕ: ೧೧/೧೦/೨೦೨೩ ರಂದು ಬೆಳಿಗ್ಗೆ 11.೦೦ ಗಂಟೆಗೆ ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಲಯನ್ಸ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಲಯನ್ ಮಲ್ಲಿಕಾರ್ಜುನ ಬಳ್ಳೊಳ್ಳಿ ಇವರು ಕಾರ್ಯಗಾರವನ್ನು ಉದ್ಘಾಟಿಸಿದರು.

ಕಾರ್ಯಗಾರದಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ಬೆಂಗಳೂರಿನ Indian Institute of Science ಸಂಸ್ಥೆಯ ಸಂಶೋಧಕರಾಗಿ ಮತ್ತು ಪಿ.ಎಚ್.ಡಿ ಸ್ಕಾಲರ್ ಮಾಡುತ್ತಿರುವ ಶ್ರೀ ಕೌಶಲ್ ತಿವಾರಿ ಬೆಂಗಳೂರು ಆಗಮಿಸಿ, ಶಿಕ್ಷಕರಿಗೆ STEAM (Science, Technology, Engineering, Arts, Maths) ನೈಪುಣ್ಯತೆ ಬಗ್ಗೆ ತರಬೇತಿ ನೀಡುವುದರ ಜೊತೆಗೆ ತರಬೇತಿ ಪಡೆದ ಶಿಕ್ಷಕರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಹಾಗೆಯೇ ನಮ್ಮ ಶಾಲೆಯ 8, 9, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಚಂದ್ರಯಾನ-3ರ ಉಡಾವಣೆಯ ಮಾಹಿತಿ ನೀಡಿದರು.
ದಿನಾಂಕ 13-10-2023 ರಂದು ಕಾರ್ಯಗಾರದ ಮುಕ್ತಾಯ ಸಮಾರಂಭವನ್ನು ಏರ್ಪಡಿಸಲಾಯಿತು. ಈ ಸಮಾರಂಭದಲ್ಲಿ ಶಿಕ್ಷಕರಿಗೆ ತರಬೇತಿ ನೀಡಿದ ಶ್ರೀ ಕೌಶಲ್ ತಿವಾರಿ ಮತ್ತು ಅರಿಹಂತ ಸಂಸ್ಥೆಯ ಅಧ್ಯಕ್ಷರಾದ ಲಯನ್ ಲಲಿತ್ ಜೈನ್ ಇವರಿಗೆ ನಮ್ಮ ಶಾಲೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಮಾರಂಭದಲ್ಲಿ ನಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಲಯನ್ ಬಸವರಾಜ ಬಳ್ಳೊಳ್ಳಿ, ಕಾರ್ಯದರ್ಶಿ ಲಯನ್ ಗವಿಸಿದ್ದಪ್ಪ ಮುದಗಲ್, ಲಯನ್ಸ್ ಕ್ಲಬ್‌ನ ಅಧ್ಯಕ್ಷರು ಲಯನ್ ಚಂದ್ರಕಾಂತ ತಾಲೆಡಾ, ಕಾರ್ಯದರ್ಶಿ ಲಯನ್ ಮನೋಹರ ದಾದ್ಮಿ, ಲಯನ್ ಶ್ರೀನಿವಾಸ ಗುಪ್ತಾ, ಲಯನ್ ಪರಮೇಶ್ವರಪ್ಪ ಕೊಪ್ಪಳ, ಲಯನ್ ವೆಂಕಟೇಶ ಶ್ಯಾನಬಾಗ್, ಲಯನ್ ಅರವಿಂದ ಅಗಡಿ, ಲಯನ್ ಪ್ರಭು ಹೆಬ್ಬಾಳ, ಲಯನ್ ಶರಣು ಅಗಡಿ, ಲಯನ್ ಶಿವಕುಮಾರ ತಂಬ್ರಳ್ಳಿ, ಲಯನ್ಸ್ ಕ್ಲಬ್ಬಿನ ಸರ್ವಸದಸ್ಯರು ಭಾಗವಹಿಸಿದ್ದರು. ಪ್ರಾಚಾರ್ಯರಾದ ಶ್ರೀಮತಿ ವೈ ಪದ್ಮಜಾ ಇವರು ಮುಕ್ತಾಯ ಸಮಾರಂಭವನ್ನು ಕುರಿತು ಮಾತನಾಡಿ, ಈ ಸಭೆಯಲ್ಲಿ ಭಾಗಿಯಾದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗಿಯಾಗಿ ಕಾರ್ಯಗಾರವನ್ನು ಯಶಸ್ವಿಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: