ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಅಭ್ಯಾಸ ಮಾಡಿ : ಕೆ .ರಾಘವೇಂದ್ರ ಹಿಟ್ನಾಳ್.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಅಭ್ಯಾಸ ಮಾಡುವಂತೆ ಶಾಸಕ : ಕೆ .ರಾಘವೇಂದ್ರ ಹಿಟ್ನಾಳ್. ನೀಡಿದರು
ಇಂದು ಸ.ಹಿ.ಪ್ರಾ.ಶಾಲೆ ಕುಣಿತಾಂಡಾ ಶಾಲೆಗೆ ಭೇಟಿನೀಡಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ರವರು ಶಾಲಾ ಬಿಸಿ ಊಟ ಸ್ವಚ್ಛತೆ ಕಾಪಾಡುವುದು ರುಚಿಯಾಗಿರುವುದರ ಬಗ್ಗೆ ಅಡುಗೆದಾರರಿಗೆ ಸೂಚಿಸಿದರು..ತದನಂತರ ತರಗತಿ ಕೋಣೆಯೊಳಗೆ ಪ್ರವೇಶಿಸಿ ಮಕ್ಕಳಿಗೆ ಸ್ವತಃ ತಾವೇ ಪ್ರಶ್ನೆಗಳನ್ನು ಕೇಳಿದರು.ಮಕ್ಕಳಿಗೆ ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು.ಪ್ರತಿನಿತ್ಯ ಶಾಲೆಗೆ ಆಗಮಿಸಿ ಶಾಲೆಯ ವಿಷಯಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ನವೋದಯ,ಸೈನಿಕಶಾಲೆ ಮೊರಾರ್ಜಿ ಶಾಲೆಗೆ ಆಯ್ಕೆಯಾಗಬೇಕೆಂದು ತಿಳಿಸಿದರು..ಈ ಸಂದರ್ಭದಲ್ಲಿ ಗ್ರಾಮದ ಎಸ್.ಡಿ ಎಂ.ಸಿ ಅಧ್ಯಕ್ಷರಾದ ಮಂಜುನಾಥ ಹಾಗೂ ಸರ್ವಸದಸ್ಯರು ಗ್ರಾಮಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಮ್ಮ ಕಾಳಪ್ಪ ರಾಠೋಡವರು ಗ್ರಾಮಪಂಚಾಯತಿಯ ಸರ್ವ ಸದಸ್ಯರು ಕುಣಿಕೇರಿತಾಂಡಾ ಗ್ರಾಮವು ತುಂಬಾ ಹಿಂದುಳಿದ ಕೇವಲ ಲಂಬಾಣಿ ಸಮುದಾಯದವರು ವಾಸಿಸುವ ಗ್ರಾಮ.ಮಕ್ಕಳ ಪಾಲಕರು ಕಬ್ಬು ಕಟಾವು ಮಾಡಲು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.ಹೋಗುವಾಗ ತಮ್ಮೊಂದಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ.ಇದರಿಂದ ಮಕ್ಕಳ ಕಲಿಕೆಯು ಕುಂಠಿತವಾಗುತ್ತದೆ.ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮತ್ತು ಉತ್ತಮ ಭವಿಷತ್ತಿಗಾಗಿ ನಮ್ಮ ಗ್ರಾಮಕ್ಕೆ ಶಾಶ್ವತವಾದ ವಸತಿನಿಲಯವನ್ನು ಮಂಜೂರುಮಾಡಿಸುವಂತೆ ಮನವಿ ಸಲ್ಲಿದರು…..ಈ ಸಂದರ್ಭದಲ್ಲಿ ಜಿಲ್ಲಾ ಮಂಚಾಯತಿಯ ಮಾಜಿ ಸದಸ್ಯರಾದ ಗೂಳಪ್ಪ ಹಲಗೇರಿ.ಗಾಳೆಪ್ಪ ಪೂಜಾರ.ಗ್ರಾಮ ಪಂಚಾಯತಿಯ ಸದಸ್ಯರಾದ ನಾಗರಾಜಮಾಳ್ಗಿ.ಲಿಂಗರಾಜೇಂದ್ರ .ಯಮನುರಪ್ಪ.ಟೀಕ್ಯಾನಾಯ್ಕ ಕಾಳಪ್ಪ ರಾಠೋಡ.ಜಿಲ್ಲಾ ಶಿಕ್ಷಕರ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಕಮಲಾಪುರ.ಶಾಲೆಯ ಹಿರಿಯ ಶಿಕ್ಷಕರಾದ ದೇವೇಂದ್ರಪ್ಪ.ಗಂಗಾಧರ ಕೊಡೆಕಲ್.ಶಿಕ್ಷಕಿಯರಾದ ವಿಜಯಲಕ್ಷ್ಮೀ,ಸಾವಕ್ಕ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.
Comments are closed.