ತಾಲ್ಲೂಕು ಅಧ್ಯಕ್ಷೆಯಾಗಿ ಶಂಶಾದ ಬೇಗ್ಂ ಆಯ್ಕೆ
ತಾಲ್ಲೂಕು ಅಧ್ಯಕ್ಷೆಯಾಗಿ ಶಂಶಾದ ಬೇಗ್ಂ ಆಯ್ಕೆ
- ತಾಲ್ಲೂಕು ಅಧ್ಯಕ್ಷೆಯಾಗಿ ಶಂಶಾದ ಬೇಗ್ಂ ಆಯ್ಕೆ
ಕನಕಗಿರಿ: ತಾಲ್ಲೂಕು ಘಟಕವು ಇಡೀ ರಾಜ್ಯಕ್ಕೆ ಮಾದರಿಯಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜತೆಗೆ ಶಿಕ್ಷಕರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಶ್ರಮವಹಿಸಿದೆ ಬದ್ದತೆ, ಪ್ರಾಮಾಣಿಕತೆ ನೈಜತೆಯಿಂದ ಕಾರ್ಯ ನಿರ್ವಹಿಸಿ ನಾಯಕತ್ವದ ಘನತೆಯನ್ನು ಸಮಾಜಕ್ಕೆ ಶಂಶಾದ್ ಬೇಗಂ ತೋರಿಸಿ ಕೊಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ ಹೇಳಿದರು.
ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಕಚೇರಿಯಲ್ಲಿ ಈಚೆಗೆ ನಡೆದ ತಾಲ್ಲೂಕು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳಿಗೆ ನವೋದಯ, ಮೊರಾರ್ಜಿ ದೇಸಾಯಿ ಸೇರಿ ವಸತಿ ಶಾಲೆಗಳ ಆಯ್ಕೆಗೆ ಅನುಕೂಲವಾಗಲು ಉಚಿತ ತರಬೇತಿ ನೀಡಿದೆ,
ಎಂದರು.
ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ತಾಲ್ಲೂಕು ಘಟಕದ ಅಧ್ಯಕ್ಷೆಯಾಗಿ ಎರಡನೇ ಅವಧಿಗೆ ಶಂಶಾದಬೇಗ್ಂ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಮಂಜುನಾಥ್, ಸಹ ಕಾರ್ಯದರ್ಶಿ ಬಸವರಾಜ ಕಮಲಾಪುರ , ಕಲ್ಯಾಣ ಕರ್ನಾಟಕ ವಿಭಾಗದ ಸಹ ಕಾರ್ಯದರ್ಶಿ ಡಿ.ಜಿ.ಸಂಗಮ್ಮನವರ್ ಮಾತನಾಡಿದರು. ಈ ಸಮಯದಲ್ಲಿ ಸಂಘದ ನಿರ್ದೇಶಕರು ಹಾಗು ಪದಾಧಿಕಾರಿಗಳು ಇದ್ದರು.
ತಾಲ್ಲೂಕು ಘಟಕದ
ಪದಾಧಿಕಾರಿಗಳು: ಶಂಶಾದ್ ಬೇಗಂ (ಅಧ್ಯಕ್ಷೆ), ಶೇಖರಯ್ಯ ಕಲ್ಮಠ (ಗೌರವ ಅಧ್ಯಕ್ಷರು), ಜಗದೀಶ ಟಿ. ಎಸ್.
(ನಿರ್ದೇಶಕ) ಅವರನ್ನು ಆಯ್ಕೆ ಮಾಡಲಾಯಿತು.
Comments are closed.