ಕೆ ಎಸ್ ಆಸ್ಪತ್ರೆಯ ವತಿಯಿಂದ ಹೃದಯ ಜಾಗೃತಿ ನಡಿಗೆ

Get real time updates directly on you device, subscribe now.

 

ಕೊಪ್ಪಳ ನಗರದಲ್ಲಿ ವಿಶ್ವ ಹೃದಯ ದಿನದ ಪ್ರಯುಕ್ತ ಕೆ ಎಸ್ ಆಸ್ಪತ್ರೆಯ ವತಿಯಿಂದ ” ವಾಕ್ ಥಾನ್ ” ಹೃದಯ ಜಾಗೃತಿ ಜಾತಾವನ್ನ ಹಮ್ಮಿಕೊಳ್ಳಲಾಗಿತ್ತು.

ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಿಂದ ಅಶೋಕ್ ಸರ್ಕಲ್ ಮೂಲಕ ಗಡಿಯಾರ ಕಂಬವನ್ನ ತಲುಪಿ, ಸಂಸ್ಥಾನ ಶ್ರೀ ಗವಿಮಠದ ಮೂಲಕ ಬಸವೇಶ್ವರ ಸರ್ಕಲ್ ತಲುಪಿ ಕೆ ಎಸ್ ಆಸ್ಪತ್ರೆಯಲ್ಲಿ ಹೃದಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು..4 ನಾಲ್ಕು ಕಿಲೋಮೀಟರ್ ನಡಿಗೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಐ ಆರ್ ಬಿ ಮುನಿರಾಬಾದ್ ಕಮಾಂಡೆಂಟ್ ಶ್ರೀ ಮಹಾದೇವ ಪ್ರಸಾದ ಹೃದಯದ ಆರೋಗ್ಯ ಬಹಳ ಮುಖ್ಯವಾದದ್ದು. ನಾವೆಲ್ಲ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಅವಶ್ಯವಾಗಿದೆ ಇಂದಿನ ದಿನಮಾನದ ಜೀವನಶೈಲಿಯಿಂದ ಹೃದಯ ಸಂಬಂಧಿ ರೋಗಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಾವೆಲ್ಲ ಜಾಗೃತರಾಗಿ ಆರೋಗ್ಯವಂತ ಜೀವನವನ್ನು ನಡೆಸುವತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ತಿಳಿಸಿದರು.

ಜಾಗೃತಿಯ ಪ್ರಯುಕ್ತ
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ಅತ್ಯುತ್ತಮ ಘೋಷಣೆ, ಅತ್ಯುತ್ತಮ ಫಲಕ, ಹೃದಯ ಜಾಗೃತಿಯಲ್ಲಿ ಪಾಲ್ಗೊಂಡ ಅತ್ಯಂತ ಹಿರಿಯ ವ್ಯಕ್ತಿ, ಅತ್ಯಂತ ಕಿರಿಯ ವ್ಯಕ್ತಿ, ಅತ್ಯಂತ ಸಂಖ್ಯಾಯಲ್ಲಿ ಪಾಲ್ಗೊಂಡ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ಬಿಎಸ್ ಪಾಟೀಲ್ ಹಿರಿಯ ಹೈಕೋರ್ಟ್ ವಕೀಲರು ಕೊಪ್ಪಳ ಇವರು ಮಾತನಾಡಿ ಇಂದು ವಯಸ್ಸಿಗೆ ಅನುಸಾರವಲ್ಲದೆ ಎಲ್ಲಾ ವಯಸ್ಸಿನವರಿಗೂ ಕೂಡ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗುತ್ತಿದ್ದು, ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯರು, ಕೆ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಶ್ರೀ ಕರಿಯಣ್ಣ ಸಂಗಟಿ ಮಾತನಾಡಿ. ಕೆಎಸ್ ಆಸ್ಪತ್ರೆಯಲ್ಲಿ ಹೃದಯಕ್ಕೆ ಸಂಬಂಧಪಟ್ಟ ಎಲ್ಲಾ ವೈದ್ಯಕೀಯ ಸೌಲಭ್ಯಗಳ ಮೂಲಕ ಕೆ ಎಸ್ ಆಸ್ಪತ್ರೆಯು ನನಗೆ ಮರುಜೀವ ನೀಡಿದೆ ಎಂದು ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ತಮ್ಮ ಆರೋಗ್ಯದ ಬಗ್ಗೆ ಅನುಭವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ ಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಕೆ ಬಸವರಾಜ್, ನಾವು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕೂಡ ಕಡಿಮೆ, ನಮ್ಮ ಆಹಾರ ಪದ್ಧತಿಯಲ್ಲಿ ನಮ್ಮ ಜೀವನಶೈಲಿಯಲ್ಲಿ ನಮ್ಮ ಬದುಕುವ ರೀತಿಯಲ್ಲಿ, ಆಹಾರದ ವಿವಿಧ ಮಜಲುಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಅನಾರೋಗ್ಯ ಆದ ನಂತರ ಆಸ್ಪತ್ರೆಗೆ ಹೋಗುವುದಕ್ಕಿಂತ ಮುಂಚೆ ಆಸ್ಪತ್ರೆಗೆ ಹೋಗದಂತೆ ನಮ್ಮ ಜೀವನಶೈಲಿಯನ್ನ ಒತ್ತಡ ರಹಿತ ಜೀವನವನ್ನು ರೂಡಿಸಿಕೊಳ್ಳಬೇಕಾಗಿದೆ. ಹೃದಯ ರೋಗ ಎನ್ನುವುದು ದೈಹಿಕವಾಗಿ ಸದೃಢವಾದ ವ್ಯಕ್ತಿಗಳು, ಅತ್ಯಂತ ಕಿರಿಯ ವಯಸ್ಸಿನವರು, ಕಡಿಮೆ ವಯಸ್ಸಿನ ಮಹಿಳೆಯರು ಎನ್ನದೆ ಎಲ್ಲರನ್ನೂ ಆವರಿಸುತ್ತಿದೆ ಆದ್ದರಿಂದ ಹೃದಯ ರೋಗದ ಬಗ್ಗೆ ನಾವೆಲ್ಲ ಜಾಗೃತರಾಗಬೇಕೆಂದು. ಇಂದಿನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಕೆ ಎಸ್ ಆಸ್ಪತ್ರೆ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರೂಪೇಶ್ ಡೆಪ್ಯೂಟಿ ಕಮಾಂಡೆಂಟ್,ಶ್ರೀ ರಾಧಾಕೃಷ್ಣ ಡೆಪೋಟಿ ಕಮಾಂಡೆಂಟ್,ಶ್ರೀ ನಾಶೀರ್ ಅಹ್ಮದ್ ಅಸಿಸ್ಟೆಂಟ್ ಕಮಾಂಡೆಂಟ್, ಶ್ರೀ ಮಂಜಪ್ಪ ಅಸಿಸ್ಟೆಂಟ್ ಕಮಾಂಡೆಂಟ್,ಶ್ರೀ ಸಂಜಯ್ ಮತ್ತು ಶ್ರೀ ಶರಣ್ ರಾಠೋಡ್ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್, ಹೃದಯ ರೋಗ ತಜ್ಞರಾದ ಡಾಕ್ಟರ್ ಸಂದೀಪ್, ಆಸ್ಪತ್ರೆ ಎಲ್ಲಾ ವೈದ್ಯರು ಪಾಲ್ಗೊಂಡಿದ್ದರು.

ಕೆ ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ ವಿಶ್ವನಾಥ್, ಶ್ರೀಮತಿ ಪೂರ್ಣಿಮಾ ಶೆಟ್ಟಿ,ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಶಿವನಗೌಡ ಪೊಲೀಸ್ ಪಾಟೀಲ್ ಅವರು, ಕಾರ್ಯಕ್ರಮದ ಆಯೋಜಕರಾಗಿ ಶ್ರೀ ಮೊಮ್ಮದ್ ಶಾಕೀರ್, ಜಯರಾಜ್ ಶೆಟ್ಟಿಗಾರ,ಪ್ರದೀಪ್ ಸೋಮಲಾಪುರ್, ಗಿರೀಶ್, ಕೆ ಎಸ್ ಆಸ್ಪತ್ರೆ ಎಲ್ಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಜಾಗೃತಿಯ ನಡೆಗೆಯಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಶ್ರೀ ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಚಂದ್ರಮುಖಿ ಪ್ಯಾರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಕೆ ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ವಿಶ್ವ ವಿಜೇತ ವಿವೇಕಾನಂದ ಯುವಕ ಮಂಡಳಿಯ ಸದಸ್ಯರು, ಮುಸ್ತಾದ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಜಾಗೃತಿ ನಡಿಗೆಯಲ್ಲಿ ನಾಲ್ಕು ಕಿಲೋಮೀಟರ್ ವರೆಗೂ ಪಾಲ್ಗೊಂಡಿದ್ದರು..

Get real time updates directly on you device, subscribe now.

Comments are closed.

error: Content is protected !!
%d bloggers like this: