ಈಶಾನ್ಯ ಶಿಕ್ಷಕರ ಚುನಾವಣೆ ಅಭ್ಯರ್ಥಿ ಶರಣಪ್ಪ ಮಟ್ಟೂರು ಪರವಾಗಿ ಪ್ರಚಾರ

0

Get real time updates directly on you device, subscribe now.

 ಕೊಪ್ಪಳ : ನಗರದ ಕಾಳಿದಾಸ ಪ್ರೌಢಶಾಲೆಯ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಸದರಿ ಸಭೆಯ ಅಧ್ಯಕ್ಷತೆಯನ್ನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮಲ್ಲಿಕಾರ್ಜುನ ನಾಗಪ್ಪ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವರಾಜ್ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ಶರಣಪ್ಪ ಮಟ್ಟೂರು ಇವರು ಹಿಂದಿನ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಶಿಕ್ಷಕರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹೋರಾಟದ ಮುಖಾಂತರ ನೆರವು ಒದಗಿಸಿದ್ದು ಈ ಅವಧಿಯಲ್ಲಿ ಅವರನ್ನು ಗೆಲ್ಲಿಸಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಬ್ಬ ಉತ್ತಮ ಹೋರಾಟಗಾರ ಹಾಗೂ ಉತ್ತಮ ಕಾನೂನು ತಜ್ಞನನ್ನ ತಮ್ಮ ಸೇವೆಗೆ ಸದಾ ಸಿದ್ಧರಾದ ಶರಣಪ್ಪ ಮಟ್ಟೂರು ಇವರಿಗೆ ಪ್ರಥಮ ಪ್ರಶಸತ್ಯದ ಮತವನ್ನು ನೀಡಿ ಬಹುಮತದಿಂದ ಆಯ್ಕೆ ಮಾಡಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು.

      ಈ ಸಭೆಯಲ್ಲಿ ಲೋಕಸಭಾ ಸದಸ್ಯರು ರಾಜಶೇಖರ್ ಹಿಟ್ನಾಳ್, ರಾಘವೇಂದ್ರ ಹಿಟ್ನಾಳ್ ಶಾಸಕರು, ಅಮರೇಗೌಡ ಭಯ್ಯಾಪುರ ಮಾಜಿ ಸಚಿವರು, ಸಂಗಣ್ಣ ಕರಡಿ ಮಾಜಿ ಲೋಕಸಭಾ ಸದಸ್ಯರು, ಕೆ ಬಸವರಾಜ್ ಹಿಟ್ನಾಳ್ ಮಾಜಿ ಶಾಸಕರು, S ಬಿ ನಾಗರಳ್ಳಿ ಮಾಜಿ ಜಿಪಂ ಅಧ್ಯಕ್ಷರು, ಶ್ರೀಮತಿ ಜ್ಯೋತಿ ಗೊಂಡಾಬಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಶ್ರೀಮತಿ ಪದ್ಮಾವತಿ ಕಂಬಳಿ, ನಾಗರಾಜ್ ನಂದಾಪುರ ಗಂಗಾವತಿ ಬ್ಲಾಕ್ ಅಧ್ಯಕ್ಷರು, ಕೃಷ್ಣ ಎಮ್ ಇಟ್ಟಂಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗುಳಪ್ಪ ಹಲಗೇರಿ ಶಿಕ್ಷಕ ಮತದಾರರು ಭಾಗವಹಿಸಿದ್ದರು

Get real time updates directly on you device, subscribe now.

Leave A Reply

Your email address will not be published.

error: Content is protected !!