ಕರ್ನಾಟಕ ನವ ನಿರ್ಮಾಣ ಸೇನೆಯಿಂದ 2000 ಗುಂಪು ಮನೆಗಳಿಂದ ನಗರಸಭೆಯವರೆಗೆ ಪಾದಯಾತ್ರೆ

Get real time updates directly on you device, subscribe now.

13 ವರ್ಷ 10 ತಿಂಗಳಾದರೂ ಬಡ ಫಲಾನುಭವಿಗಳಿಗೆ ವಸತಿ ಕಲ್ಪಿಸದ ಸರ್ಕಾರದ ವಿರುದ್ಧ ಕರ್ನಾಟಕ ನವ ನಿರ್ಮಾಣ
ಸೇನೆಯಿಂದ ಸಿಂದೋಗಿ ರಸ್ತೆಯಲ್ಲಿರುವ 2000 ಗುಂಪು ಮನೆಗಳಿಂದ ನಗರಸಭೆಯವರೆಗೆ ಪಾದಯಾತ್ರೆ


ಕೊಪ್ಪಳ: ನಗರದ ಸಿಂದೋಗಿ ರಸ್ತೆಯಲ್ಲಿರುವ ಸುಮಾರು 2000 ಗುಂಪು ಮನೆಗಳ ಯೋಜನೆ ಪೂರ್ಣಗೊಂಡು
ಸುಮಾರು 13 ವರ್ಷ 10 ತಿಂಗಳು ಕಳೆದರೂ, ಅರ್ಹ ಬಡ ಫಲಾನುಭವಿಗಳಿಗೆ ಮನೆಗಳಲ್ಲಿ ವಾಸಿಸಲು ಅವಕಾಶ ಕಲ್ಪಿಸದಿರುವ  ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ. ಕರ್ನಾಟಕ ನವ ನಿರ್ಮಾಣ
ಸೇನೆ ವತಿಯಿಂದ   2000 ಗುಂಪು ಮನೆಗಳ ಸ್ಥಳದಿಂದ ಕೊಪ್ಪಳ ನಗರಸಭೆ ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಯಿತು

ಈ ಗುಂಪು ಮನೆಗಳ ಪೈಕಿ ಸುಮಾರು 1490 ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿದೆ. ಉಳಿದ ಮನೆ/ನಿವೇಶನಗಳಿಗೆ ಮರು  ಅರ್ಜಿ ಆಹ್ವಾನಿಸಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಲಾಗಿದೆ. ಆದಾಗ್ಯೂ, ಇದುವರೆಗೆ ಅರ್ಹ
ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದೆ ಹಾಗೂ ಮನೆಗಳಲ್ಲಿ ವಾಸಿಸಲು ಅಗತ್ಯ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ
ತೋರುತ್ತಿದ್ದಾರೆ. 2000 ಗುಂಪು ಮನೆಗಳ ನಿರ್ಮಾಣ ಕಾಮಗಾರಿಗೆ ಒಟ್ಟು ಸುಮಾರು 12.69 ಕೋಟಿ ರೂಪಾಯಿ ಹಣ ಖರ್ಚು
ಮಾಡಲಾಗಿದೆ. ಮನೆಗಳ ನಿರ್ಮಾಣದಲ್ಲಿ ಹಣದ ದುರುಪಯೋಗ ಹಾಗೂ ಕಳಪೆ ಕಾಮಗಾರಿ ನಡೆದಿರುವ ಕುರಿತು
ಸಾರ್ವಜನಿಕರು ಹಾಗೂ ಸಾಮಾಜಿಕ ಕಾರ್ಯಕರ್ತರ ವತಿಯಿಂದ ಮಾನ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಆದರೆ
ಸದರಿ ಲೋಕಾಯುಕ್ತ ದೂರು ಹಣದ ದುರುಪಯೋಗ ಮತ್ತು ಕಾಮಗಾರಿಗೆ ಸಂಬಂಧಿಸಿದ ಆರೋಪಗಳ ಕುರಿತು
ಮಾತ್ರವಾಗಿದ್ದು, ಬಡ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಿ ಅವರು ವಾಸಿಸಲು ಅವಕಾಶ ಕಲ್ಪಿಸಬಾರದು ಎಂಬ
ಯಾವುದೇ ದೂರು ಅಲ್ಲ. ಆದ್ದರಿಂದ ಲೋಕಾಯುಕ್ತ ತನಿಖೆಯ ನೆಪವನ್ನು ಮುಂದಿಟ್ಟುಕೊಂಡು ಇಷ್ಟು ವರ್ಷಗಳ ಕಾಲ ಬಡ
ಫಲಾನುಭವಿಗಳಿಗೆ ವಸತಿ ಕಲ್ಪಿಸುವ ಕ್ರಮವನ್ನು ತಡೆಹಿಡಿಯುವುದು ನ್ಯಾಯ ಸಮ್ಮತವಲ್ಲ.
ತಮ್ಮದೆ ಆದ ಸೂರು ಹೊಂದಬೇಕೆಂಬ ಆಶಯದಿಂದ ಸುಮಾರು 13 ವರ್ಷಗಳ ಹಿಂದೆ ಅನೇಕ ಬಡ ಫಲಾನುಭವಿಗಳು
30,000/- ರೂಪಾಯಿ ವಂತಿಗೆ ಹಣವನ್ನು ಪಾವತಿಸಲು ತಮ್ಮಲ್ಲಿದ್ದ ಬಂಗಾರ, ಬೆಳ್ಳಿ ಹಾಗೂ ಮನೆಯ ಸಾಮಾನುಗಳನ್ನು
ಮಾರಾಟ ಮಾಡಿ ಹಣ ಕಟ್ಟಿದ್ದಾರೆ. ಇಷ್ಟು ವರ್ಷಗಳಾದರೂ ಅವರಿಗೆ ಮನೆಗಳಲ್ಲಿ ವಾಸಿಸಲು ಅವಕಾಶ ಕಲ್ಪಿಸದಿರುವುದು
ಅತ್ಯಂತ ನೋವಿನ ಸಂಗತಿಯಾಗಿದೆ.  ಈ ಕುರಿತು ಹಲವು ಬಾರಿ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾದರೂ ಸಂಬಂಧಪಟ್ಟ ಅಧಿಕಾರಿಗಳು ಬಡ ಫಲಾನುಭವಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಇದುವರೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ. ಆದ್ದರಿಂದ, 2000 ಗುಂಪು ಮನೆಗಳ ಇನ್ನೂಳಿದ (510) ಬಡ ಫಲಾನುಭವಿಗಳಿಗೆ ತಕ್ಷಣ ಹಕ್ಕು ಪತ್ರ ವಿತರಿಸಿ. ಆ
ಮನೆಗಳಿಗೆ ಸೂಕ್ತ ಮೂಲಭೂತ ಸೌಲಭ್ಯ ಕಲ್ಪಿಸಿ ಆ ಮನೆಗಳನ್ನು ಹಸ್ತಾಂತರಿಸಿ, ಅವರು ತಮ್ಮ ಕುಟುಂಬಗಳೊಂದಿಗೆ
ವಾಸಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು   ನಗರಸಭೆ ಪೌರಾಯುಕ್ತರಿಗೆ ಮನವಿ ನೀಡಲಾಯಿತು

 

ಈ ಸಂದರ್ಬದಲ್ಲಿ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರು, ತಾಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ರಾಮು ಗೋಂದಕರ,
ವಿನಾಯಕ ಪಾಸ್ತೆ, ಅಬ್ದುಲ್‌ ಕಲಾಂ‌ ಹಂಸಸಾಗರ, ಇಮಾಮ್‌ ಸಾಬ ಕಡೆಮನಿ, ಮೌಲಾ ಹುಸೇನ್‌ ಮಿಠಾಯಿ,
ಮುಜಾಮಿಲ್, ಅಜ್ಮತುಲ್ಲಾ, ಆನಂದ ಮದಿವಾಳರ, ಮರಿಯಪ್ಪ ಮಂಗಳೂರು, ಪತ್ರಯ್ಯ ಹಿರೇಮಠ, ಶಿವಕುಮಾರ
ಮ್ಯಾಗೇರಿ, ಹುಚ್ಚಪ್ಪ, ಸುರೇಶ ದೊಡ್ಡಮನಿ, ಮೈಲಪ್ಪ ಹರಿಜನ, ಭೀಮಪ್ಪ ದೂಪಂ, ಚಂದಪ್ಪ ಹುಳ್ಳಿ, ಮಹಿಳಾ

ಘಟಕದ ಅಧ್ಯಕ್ಷೆ ರಾಜಮ್ಮ ಓಜಿನಹಳ್ಳಿ, ಶಿವಮ್ಮ ಮಾಳಗಿ, ನರಸಮ್ಮ, ಕನಕಮ್ಮ ಅಳವಂಡಿ, ರಾಜೇಶ್ವರಿ ಅಳವಂಡಿ, ಭಾರತಿ
ಅಳವಂಡಿ, ನಾಗಮ್ಮ ಅಳವಂಡಿ, ಪವಿತ್ರಾ ವನ್ನಾಲ, ಪ್ರತೀಭಾ, ಲಕ್ಷ್ಮೀ ಅಳವಂಡಿ ಸಂಘಟನೆಯ ಕಾರ್ಯಕರ್ತರು ಹಾಗೂ
ಪಲಾನುಭವಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!