ಕಾರ್ಖಾನೆ ಧೂಳು ಬಾಧಿತರ ಆರೋಗ್ಯ ತಪಾಸಣೆ ಮಾಡಿ: ವೇದಿಕೆ ಪ್ರತಿಭಟನೆ

0

Get real time updates directly on you device, subscribe now.

ಕನಕಾಪುರ ಮುಕುಂದ್ ಸುಮಿ ವಿಸ್ತರಣೆಗೆ ಎನ್.ಒ.ಸಿ. ನಿರಾಕರಿಸಿ: ಅಲ್ಲಮಪ್ರಭು

ಕೊಪ್ಪಳ: ತಾಲೂಕಿನ ಹಿರೇಬಗನಾಳ, ಕನಕಾಪುರ, ಬೇವಿನಹಳ್ಳಿ, ಹುಲಿಗಿ, ಅಲ್ಲಾನಗರ, ಕುಣಿಕೇರಿ, ತಾಂಡಾ, ಚಿಕ್ಕಬಗನಾಳ, ಕಾಸನಕಂಡಿ, ಹಾಲವರ್ತಿ, ಗಿಣಿಗೇರಿ ಒಳಗೊಂಡು 22 ಕಾರ್ಖಾನೆ ಬಾಧಿತ ಹಳ್ಳಿಗಳ ಜನರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ 6 ತಿಂಗಳಿಗೊಮ್ಮೆ ಮಾಡಬೇಕು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ (ಏಮ್ಸ್), ಐಎಂಎ ಸಂಸ್ಥೆ ಆರೋಗ್ಯ ಅಧ್ಯಯನವಾಗಲಿ ಎಂದು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆಗ್ರಹಿಸಿದರು.

ತಾಲೂಕಿನ ಕನಕಾಪುರ ಗ್ರಾಮದಲ್ಲಿ ಮುಕುಂದ್ ಸುಮಿ ವಿಸ್ತರಣೆಗೆ ಮುಂದಾಗಿದ್ದು, ಇದೇ 29ರಂದು ಸಾರ್ವಜನಿಕ ಆಲಿಕೆ ನಡೆಸುತ್ತಿದೆ. ಆ ಗ್ರಾಮದ ಜನರ, ಮತ್ತು ಸುತ್ತಲಿನ ಗ್ರಾಮಗಳ ಜನರ ಅರೋಗ್ಯ ಸಮಸ್ಯೆ ಪರಿಗಣಿಸಿ ಅದಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಎನ್.ಒ.ಸಿ. ಕೊಡಬಾರದು. ಗಂಭೀರವಾಗಿರುವ ಅನಾರೋಗ್ಯ ಕುರಿತು ವರದಿ ದಾಖಲಿಸಿದರೆ ಅಲ್ಲಿನ ಜನರ ಜೀವ, ಆರೋಗ್ಯ ಉಳಿಯುತ್ತದೆ ಎಂದರು.

 

 

ಸಂಚಾಲಕ ಮಲ್ಲಿಕಾರ್ಜುನ ಗೋನಾಳ ಮಾತನಾಡಿ ಜಿಲ್ಲಾಧಿಕಾರಿ ನೇತೃತ್ವದ ಸಾರ್ವಜನಿಕ ಆಲಿಕೆ ಸಮಿತಿಯಲ್ಲಿ ಡಿ.ಎಚ್.ಒ ನೀವೂ ಒಬ್ಬರಾಗಿದ್ದೀರಿ. ನೀವು ಜನರ ಕಳಕಳಿಯಿಂದ ವರದಿ ಕೊಡಿ. ಎನ್.ಒ.ಸಿ ಕೊಡುವುದನ್ನು ನಿರಾಕರಿಸಿ ಎಂದರು. ಆಗ ಡಿ.ಎಚ್.ಒ. ಡಾ. ಈಶ್ವರ ಸವಡಿ ಪ್ರತಿಕ್ರಿಯಿಸಿ ನಾನು ಕನಕಾಪುರ ಜನರ ಆರೋಗ್ಯ ಪರಿಣಾಮದ ಕುರಿತು ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕೊಡುತ್ತೇನೆ ಎಂದು ತಿಳಿಸಿದರು.

326ನೇ ದಿನದ ಬಲ್ಡೋಟ ಹಾಗೂ ಮಾಲಿನ್ಯ ವಿರೋಧಿಸಿ ನಡೆದ ಧರಣಿ ವೇದಿಕೆ ಸ್ಥಳದಿಂದ ಅಶೋಕ ವೃತ್ತದ ಮೂಲಕ ಘೋಷಣಾ ಫಲಕ ಹಿಡಿದು, ‘ಆರೋಗ್ಯ ತಪಾಸಣೆ ಮಾಡಿ ಜೀವ ಉಳಿಸಿ’ ಎಂದು ಘೋಷಣೆ ಕೂಗುತ್ತಾ ಹಳೆ ಜಿಲ್ಲಾ ಆಸ್ಪತ್ರೆ ಆವರಣದ ಡಿ.ಎಚ್.ಒ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಂದಕುಮಾರ ಅವರಿಗೆ ಆಗ್ರಹ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಚಾಲಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಮಹಿಳಾ ನಾಯಕಿ ಜ್ಯೋತಿ ಗೊಂಡಬಾಳ, ಸರೋಜಾ ಬಾಕಳೆ, ಮಂಜುನಾಥ ಜಿ.ಗೊಂಡಬಾಳ, ಚಿತ್ರಕಲಾವಿದ ರಾಜು ತೇರದಾಳ, ರವಿ ಕಾಂತನವರ, ರಾಜಶೇಖರ ಏಳುಭಾವಿ, ನಾಗರಾಜ ಎಲಿಗಾರ, ಸಿರಾಜ್ ಸಿದ್ದಾಪುರ, ಸುಭಾನ್ ಸಾಬ್ ನೀರಲಗಿ, ಮಂಜುನಾಥ ಕವಲೂರು, ಮಂಜುನಾಥ ಪಿನ್ನಿ, ವೆಂಕಣ್ಣಾಚಾರ ಕಟ್ಟಿ, ಶಿವಪ್ಪ ಬನಪ್ಪನವರ, ಮಂಗಳೇಶ ರಾಠೋಡ್, ಶಿವಪ್ಪ ಜಲ್ಲಿ ಮುಂತಾದವರು ಪಾಲ್ಗೊಂಡರು.

Get real time updates directly on you device, subscribe now.

Leave A Reply

Your email address will not be published.

error: Content is protected !!