ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿ ತೆರವು ಖಂಡಿಸಿ ಸೆ.23ರಂದು ಗಂಗಾವತಿ ಪ್ರತಿಭಟನೆ

0

Get real time updates directly on you device, subscribe now.

.

ಗಂಗಾವತಿ: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ಥಳಿಯನ್ನು ಪಟ್ಟಭದ್ರರ ಮಾತು ಕೇಳಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದನ್ನು ಖಂಡಿಸಿ ಗಂಗಾವತಿ ತಾಲೂಕು ಕುರುಬರ ಹಾಲುಮತ ಸಮಾಜದ ನೇತೃತ್ವದಲ್ಲಿ ಸೆ.23 ರಂದು ಗಂಗಾವತಿ ನಗರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶ್ರೀಕೃಷ್ಣದೇವರಾಯ ವೃತ್ತದ ವರೆಗೆ ಪ್ರತಿಭಟನಾ ಬೈಕ್ ರ್ಯಾಲಿ ನಡೆಸಿ ಪುನಹ ಅದೇ ಸ್ಥಳದಲ್ಲಿ ಸಿದ್ದರಾಮಯ್ಯ ನವರ ಪುತ್ಥಳಿಯನ್ನು ಪಾಲಿಕೆಯ ಅಧಿಕಾರಿಗಳು ಮರು ಸ್ಥಾಪಿಸಲು ಆದೇಶ ನೀಡುವಂತೆ ಸಿಎಂ‌ ಡಿಕೆ ಶಿವಕುಮಾರ್ ಅವರಿಗೆ ತಹಸೀಲ್ದಾರ್ ಮೂಲಕ ಮನವಿ‌ ಸಲ್ಲಿಸಲಾಗುತ್ತದೆ ಎಂದು ಶ್ರೀ ಕನಕದಾಸ ಕುರುಬ ಸಂಘದ ಅಧ್ಯಕ್ಷ ವಿಠಲಾಪೂರ ಯಮನಪ್ಪ ತಿಳಿಸಿದರು.
ಅವರು ಸಿಬಿಎಸ್ ಗಂಜ್ ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕದಲ್ಲಿ 14 ಬಾರಿ ಬಜೆಟ್ ಮಂಡಿಸಿ ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರು ಜಾತಿಭೇದ ಮಾಡದೆ ನಾಡಿನ ಎಲ್ಲಾ ಜನರ ಏಳಿಗೆಗಾಗಿ ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿದ್ದು,ಗ್ಯಾರಂಟಿ ಯೋಜನೆಗಳ ಮುಖಾಂತರ ಜನಮನದಲ್ಲಿ ಉಳಿದ ಸಿದ್ದರಾಮಯ್ಯನವರ ಅಭಿಮಾನಿಗಳು ಕಲಬುರ್ಗಿಯ ವೃತ್ತ ಒಂದರದಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಪುತ್ಥಳಿ ನಿರ್ಮಿಸಿ ಅನಾವರಣ ಮಾಡಿದ್ದಾರೆ.ಈಗಾಗಲೇ ಕಲಬುರ್ಗಿಯ ಮಹಾನಗರದಲ್ಲಿ ಹಲವು ಮಹನೀಯರ ಪುತ್ಥಳಿ ಇದ್ದು, ಅವುಗಳು ಸಹ ಯಾವುದೇ ಪರವಾನಿಗೆ ಇಲ್ಲದೆ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಕೆಲವು ಪಟ್ಟ ಭದ್ರದ ಮಾತು ಕೇಳಿ ಅಧಿಕಾರಿಗಳು ಸಿದ್ದರಾಮಯ್ಯನವರ ಪುತ್ಥಳಿಯನ್ನು ತೆರವುಗೊಳಿಸಿರುವುದು ಖಂಡನೀಯವಾಗಿದೆ. ಅಹಿಂದ ವರ್ಗ ಸಿದ್ದರಾಮಯ್ಯನವರ ಶಕ್ತಿಯಾಗಿದ್ದು ಇಡೀ ರಾಜ್ಯಾದ್ಯಂತ ಹೋರಾಟ ಮಾಡುವ ಮೊದಲು ಕಲಬುರ್ಗಿ ಮಹಾನಗರ ಪಾಲಿಕೆಯವರು ಕೂಡಲೇ ಹುತ್ತಳಿಯನ್ನು ಮರುಸ್ಥಾಪಿಸುವಂತೆ ಅವರು ಒತ್ತಾಯಿಸಿದರು.
ಸಭೆಯಲ್ಲಿ ಮುಖಂಡರಾದ ಸಣ್ಣಕ್ಕಿ ನೀಲಪ್ಪ,ಮೋರಿ‌ ದುರುಗಪ್ಪ,ವಿರೂಪಾಕ್ಷಪ್ಪ, ಅಶೋಕ ಗೌಡ,ಬಿ.ಶರಣಪ್ಪ,ಬಸವರಾಜ ಉಣ್ಣಿ, ಪರಶುರಾಮ ಇಟಗಿ,ಗಡ್ಡಿ ಹನುಮಂತಪ್ಪ, ಸಿದ್ದಲಿಂಗನಗೌಡ,ಬಿ.ವೆಂಕಟೇಶ್, ಬಕ್ಕಂಡಿ‌ ಬಸವರಾಜ,ಗಿಡ್ಡಿ ಹನುಮಂತಪ್ಪ,ಕೆ.ನಾಗೇಶಪ್ಪ,ಬಿ.ಫಕೀರಯ್ಯ,ಅಡ್ಡಿ ಶಾಮಣ್ಣ,ತಿಪ್ಪಣ್ಣ ಗಿಡ್ಡಿ ಸೇರಿದಂತೆ ಹಾಲುಮತ ಕುರುಬ ಸಮಾಜದ ಮುಖಂಡರು, ಯುವಕರಿದ್ದರು

Get real time updates directly on you device, subscribe now.

Leave A Reply

Your email address will not be published.

error: Content is protected !!