ಬಹುತ್ವದ ಬುಡ್ಡಿದೀಪ ಬೆಳಗಿಸಿದ ಬಂಡಾಯದ ಗುರು ಎಬಿಎಚ್
– ಕಳಕೇಶ ಡಿ ಗುಡ್ಲಾನೂರ





“ಜನ ಬೆಳೆದು ಜನಾಂಗವಾಗಲು ಉತ್ತಮ ಸಮಾಜಬೇಕು; ಮಗು ಬೆಳದು ಮಾನವನಾಗಲು ಉತ್ಕೃಷ್ಟ ಶಿಕ್ಷಣ ಬೇಕು ” ಎಂಬ ನುಡಿಯನ್ನು ಉಡಿಯೊಳಗಿಟ್ಟುಕೊಂಡು ಸಮ ಸಮಾಜಕ್ಕಾಗಿ ಕನಸುತ್ತಾ, ಅಪಾರ ಜ್ಞಾನ ಅನನ್ಯ ಜೀವನಪ್ರೀತಿ ಶಿಸ್ತು ಸಂಯಮ ಸೌಜನ್ಯದೊಂದಿಗೆ ಹೋರಾಟ ಹಾಗೂ ಬದ್ಧತೆಯನ್ನು ತಮ್ಮ ಜೀವದುಸಿರಾಗಿಸಿಕೊಂಡು ಶಿಷ್ಯ ಸಂಕುಲದಲ್ಲಿ ಸದಾ ಜಾಗೃತಿಯ ಜೀವಬೆಳೆಯನ್ನು ಉತ್ತಿ ಬಿತ್ತಿ ಬೆಳೆಯುತ್ತಿರುವ ಎಬಿಎಚ್ ಗುರುವರ್ಯರು ಬಡಮಕ್ಕಳ ಕಣ್ಣಕಾಂತಿಯಲ್ಲಿ ಬಹುತ್ವದ ಬುಡ್ಡಿದೀಪ ಬೆಳಗಿಸಿದ ಬಂಡಾಯದ ಗುರು !
ಹಲವುತನಕ್ಕೆ ಹಾತೊರೆದ ಹಠವಾದಿ : ಕ.ರಾ. ಬೆಲ್ಲದ ಮಹಾವಿದ್ಯಾಲಯವನ್ನು ಕೇವಲ ಕಾಲೇಜ್ ಆಗದೇ ನಾಡಿನ ಪ್ರತಿಷ್ಠಿತ ಕಲ್ಚರಲ್ ಕೇಂದ್ರವನ್ನಾಗಿಸಬೇಕೆAಬ ಮಹದಾಸೆಯಿಂದ ಹಲವುತನಕ್ಕೆ ಹಾತೊರೆದರು. ಸ್ವಾತಂತ್ರಹೋರಾಟಗಾರರ ಕರುಳ ಕುಡಿಯಾದ ಇವರಿಗೆ ಲಡಾಯಿಗಾರಿಕೆ ರಕ್ತಗತವಾಗಿ ದಕ್ಕಿದಂತಿದೆ. ವೈಚಾರಿಕವಾಗಿ ಯುವಮನಸ್ಸುಗಳನ್ನು ರೂಪಿಸುವ ಹೊತ್ತಲ್ಲಿ ಕೆಲವರ ಕೆಂಗಣ್ಣಿಗೂ ಗುರಿಯಾದರು
ನದಿಗೆದರಿಸಿ ಈಜುವುದಾದರೆ
ಜೀವಂತ ಮತ್ಸö್ಯವೇ ಬೇಕು
ಹೊನಲಿನ ದಿಕ್ಕಿಗೆ ಸಾಗುವುದಾದರೆ
ಕೊಳೆತೊಂದು ಕಸಕಡ್ಡಿಸಾಕು !
ಎಂಬ ಕವಿಸಾಲಿನಂತೆ ಅಧಿಕಾರಸ್ಥ ಕೇಂದ್ರಗಳು ಹುಟ್ಟಿಸುವ ಆತಂಕಿತ ಪರಿಸರದಲ್ಲಿ ತನಗನಿಸಿದ್ದನ್ನು ಅಡಗಿಸದೆ ಹೇಳುವ ಛಾತಿಯನ್ನು ಮೈಗೂಡಿಸಿಕೊಂಡಿದ್ದ ಇವರು ಕಾರ್ಯನಿರ್ಹಹಿಸಿದ ಕರ್ಮಭೂಮಿಯಲ್ಲಿ ಹಲವು ತಾತ್ವಿಕ ಭಿನ್ನಮತಗಳೊಂದಿಗೆ ಸಂಘರ್ಷ ಹಾಗೂ ಸಹಮತಗಳ ಸಮೇತ ಒಟ್ಟಾಗಿ ಬದುಕಿ ವೈವಿಧ್ಯತೆಯಲ್ಲಿ ಏಕತೆಯೊಂದಿಗೆ ಸತ್ವಯುತ ‘ಕಟ್ಟುವಿಕೆ’ಯ ಕಾರ್ಯ ಮಾಡಿದರು. ಹೀಗಾಗಿ ರಾಷ್ಟ್ರೀಯ ವಿಚಾರ ಸಂಕಿರಣ ಸಾಹಿತ್ಯ-ಸಂಶೋಧನಾ ಕಮ್ಮಟಗಳ ಮೂಲಕ ಹಾ.ಮಾ.ನಾಯಕ, ಪಾಟೀಲ್ ಪುಟ್ಟಪ್ಪ, ಪೋಲಂಕಿ ರಾಮಮೂರ್ತಿ ಚಂಪಾ, ಎಂಎA ಕಲಬುರ್ಗಿ, ಚೆನ್ನವೀರ ಕಣವಿ, ಸಾಲುಮರದ ತಿಮ್ಮಕ್ಕ ನಂತಹ ಘಟನಾಘಟಿಗಳಿಗೆ ಮುಖಾಮುಖಿಯಾಗುವ ಭಾಗ್ಯ ಮುಂಡರಗಿ ಮಂದಿಗೆ ಸಾಧಿತವಾಯಿತು. ಆಟೋಟ-ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆಯ ಅಚ್ಚುಕಟ್ಟುತನ ಜೊತೆಗೆ ಕಟ್ಟುನಿಟ್ಟಿನ ಪಾರದರ್ಶಕ ಪದವಿ ಪರೀಕ್ಷೆಗೆ ಬೆಲ್ಲದ ಮಹಾವಿದ್ಯಾಲಯ ನಾಡಿನ ತುಂಬಾ ಹೆಸರುವಾಸಿಯಾಗಿದ್ದು ಎಬಿಎಚ್ರು ಪ್ರಾಚಾರ್ಯರಾಗಿದ್ದ ಕಾಲದಲ್ಲಿ.
ಅಪ್ಪನ ಅಂತರಾಳದಿAದ : ಅಕ್ಷರದ ಗಂಧಗಾಳಿಯಿಲ್ಲದ ಕೃಷಿಕುಟುಂಬದಲ್ಲಿ ಹುಟ್ಟಿಬೆಳೆದ ನನ್ನಪ್ಪ ಸಾರಿಗೆವ್ಯವಸ್ಥೆ ಸರಿಯಿಲ್ಲದ ೮೦ ರ ಕಾಲಘಟ್ಟದಲ್ಲಿ ಕೊರ್ಲಹಳ್ಳಿ ಯಿಂದ ಮುಂಡರಗಿಗೆ ಸೈಕಲ್ಲಿನ ಪೆಡಲು ತುಳಿದ ಬಿ.ಎ. ಪದವಿ ಪಡೆಯಬೇಕೆಂಬ ಆಸೆಗಣ್ಣಿಂದ ಬೆಲ್ಲದ ಕಾಲೇಜಿನ ಕಲಿಕೆಯಲ್ಲಿದ್ದಾಗ ಒಂದು ದಿನ ಕನ್ನಡ ಪ್ರಾಧ್ಯಾಪಕರೊಬ್ಬರು “ಇವತ್ತು ಮಧ್ಯಾಹ್ನ ನಾ ಊರಿಗೆ ಹೋಗ್ಬೇಕು ಹಿಂಗಾಗಿ ನಿಮ್ಗ ಕ್ಲಾಸ್ ತೆಗೆದುಕೊಳ್ಳುವುದಿಲ್ಲ” ಎಂಬುದನ್ನು ತಿಳಿಸಿದಾಗ ನನ್ನಪ್ಪ ಹಾಗೂ ಆತನ ಹಳ್ಳಿ ಗೆಳೆಯರು ಊರಕಡೆ ಮುಖಮಾಡಿದ್ದರು. ಕನ್ನಡ ಪ್ರಾಧ್ಯಾಪಕರು ಧೀಡರ್ ಊರಿಗೆ ಹೋಗುವುದು ಕ್ಯಾನ್ಸಲ್ ಆದ ಕಾರಣಕ್ಕೆ ಮುಂಡರಗಿ ಪಟ್ಟಣದಲ್ಲಿದ್ದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ತಗೆದುಕೊಂಡು ಹಳೆಗನ್ನಡ ಪಾಠಮಾಡಿದ್ದರು, ಆದರೆ ಮತ್ತೊಂದು ಕಡೆ ಈ ಪಾಠದಿಂದ ವಂಚಿತರಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕನ್ನಡ ಪ್ರಾಧ್ಯಾಪಕರಿಗೆ ಹಳೆಗನ್ನಡ ಪಾಠ ನಮಗೆ ತಪ್ಪಿದ್ದು ಪುನಃ ಮತ್ತೊಮ್ಮೆ ಆ ಪಾಠವನ್ನು ಬೋಧಿಸಿ ಎಂದು ಪರಿಪರಿಯಾಗಿ ಬೇಡಿಕೊಂಡರು ಸರಿಯಾಗಿ ಸ್ಪಂದಿಸದಿದ್ದಾಗ ಅನಿವಾರ್ಯವಾಗಿ ಪ್ರಾಚಾರ್ಯ ಎಬಿಎಚ್ ಅವರಿಗೆ ವಿಷಯ ಮುಟ್ಟಿಸುತ್ತಾರೆ, ಆಗ ಕೆಂಡಾಮAಡಲವಾದ ಪ್ರಾಚಾರ್ಯರು ಆ ಕನ್ನಡಪ್ರಾಧ್ಯಾಪಕರನ್ನು ಕರೆದು ತಿಳಿಹೇಳಿ ಮತ್ತೊಮ್ಮೆ ಅದೇ ಹಳೆಗನ್ನಡ ಪಾಠವನ್ನು ಆಗುಮಾಡುವಂತೆ ಆಜ್ಞಾಪಿಸಿದರ ಫಲವಾಗಿ ಆ ವರ್ಷ ಈ ಹಳ್ಳಿಹುಡಗರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕಪಡೆದು ಬೀಗಿದರು, ಇದು ಮಕ್ಕಳ ಮೇಲಿದ್ದ ಅವರ ಕಾಳಜಿಗೆ ಹಿಡಿದ ಕೈಗನ್ನಡಿ.
ಪುಸ್ತಕ ಫಕೀರ “ಮೈಮೇಲೆ ಹರಿದ ಬಟ್ಟೆಯಿದ್ದರೂ, ಕೈಯಲ್ಲೊಂದು ಪುಸ್ತಕವಿರಲಿ” ಎಂಬುದನ್ನು ಅಚಲವಾಗಿ ಅರಿತಿದ್ದ ಎಬಿಎಚ್ ಗುರುಗಳು ಓದುವ ಹಂಬಲವುಳ್ಳ ಅದೆಷ್ಟೋ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ: ಅಕೌಂಟ್ ನಿಂದ ಪುಸ್ತಕ ಎರವಲು ದೊರೆಯುವಂತೆ ಮಾಡಿ ಹುರಿದುಂಬಿಸಿ , ಮರದಕೆಳಗೆ, ಗುಡಿಸಲಲ್ಲಿ, ಬೀದಿದೀಪದಡಿ, ಮ್ಯಾಳಗಿಯ ಮೇಲೆ, ಸಾಹಿತ್ಯ ಸ್ಪರ್ಧಾಜಗತ್ತಿಗೆ ಬಯಲು ಗ್ರಂಥಾಲಯದಲ್ಲಿ ತೆರೆದುಕೊಳ್ಳುವಂತಹ ತಾಲೀಮು ಶುರುಮಾಡಿಸಿದರು.
ಕಳೆದ ದಶಕದಿಂದ ಪ್ರತಿಬಾರಿ ಅವರ ಮನೆಗೆ ಹೋದಾಗಲೆಲ್ಲ ಓದುವ ಕೋಣೆಯಲ್ಲಿ ಮುಪ್ಪಿನ ಕಾಲಕ್ಕೆ ಬೇಕಾಗುವ ಔಷಧಿಗಳ ಜೊತೆಗೆ ಬಿಳಿಬಟ್ಟೆಯಿಂದ ಹಾಸಿದ ಮಂಚದ ಮೇಲೆ ಆ ತಿಂಗಳು ಪ್ರಕಟವಾದ ಪ್ರಗತಿಪರತೆಯ ಬಹುಭಾಷೆಗಳ ಮ್ಯಾಗಝೀನ್ಗಳು, ಹೊಸಪುಸ್ತಕಗಳು ಕಾಣಸಿಗುತ್ತಿದ್ದವು, ತಾಸುಗಟ್ಟಲೆ ಮಾತುಕತೆ-ಕವಿತೆ ಹರಟೆ ನಂತರ ಗೃಹಗ್ರಂಥಾಲಯದಿAದ ಹೊರಲಾರದಷ್ಟು ಹೊತ್ತಿಗೆಗಳನ್ನು ಕೈಗಿಟ್ಟು ಕಳುಹಿಸುತ್ತಿದ್ದರು.
ಮಠದ ಬೋರ್ಡಿಂಗ್ನಲ್ಲಿ ಮೊಟ್ಟೆ ಆದೇಶ : ಕಬ್ಬಡ್ಡಿ ಆಟದಲ್ಲಿ ಕಾಲುಮುರಿದುಕೊಂಡು ಹಾಸಿಗೆ ಹಿಡಿದಿದ್ದ ಸಿಂಗಟಾಲೂರಿನ ವಿದ್ಯಾರ್ಥಿ ದಂಡೆಪ್ಪ ಹರಿಜನನೊಂದಿಗೆ ಕುಶಲೋಪರಿ ವಿಚಾರಿಸಿ ಸಂವಾದಿಸುವ ಸಂದರ್ಭದಲ್ಲಿ ಭದ್ರವಾದ ದೇಹದಲ್ಲಿ ಬಂದೂರವಾದ ಮನಸ್ಸು ನಿರ್ಮಾಣವಾಗಲು ಸಾಧ್ಯ, ಕ್ರೀಡಾಪಟುಗಳು ಎದುರಾಳಿಗಳಿಗೆ ಪೈಪೋಟಿ ನೀಡಲು ಅತ್ಯಗತ್ಯವಾದ ಪೌಷ್ಟಿಕ ಆಹಾರ ಪೊರೈಸಬೇಕೆಂದು ಮಠದ ಬೋರ್ಡಿಂಗ್ನಲ್ಲಿ ಊಟದ ಜೊತೆ ಮೊಟ್ಟೆಯನ್ನೂ ನೀಡುವಂತೆ ತತಕ್ಷಣವೇ ಆದೇಶಿಸಿದರು.
ಬಹುವಚನದ ಜೀವಬಂಧು: ಕೆಂಪು ಧ್ವಜಗಳ ಕಂಪು ಹರಡಲು ನಾಡಿನ ನಾನಾ ಮೊಲೆಗೆ ಕಾಲಿಗೆ ಚಕ್ರಕಟ್ಟಿಕೊಂಡು ಅಲೆಯುವ ಅರಿವಿನ ಅಲೆಮಾರಿಯಂತಿದ್ದ ಎಬಿಎಚ್ ಸರ್ ಬಾಬಾ ಬುಡನ್ ಗಿರಿ ಹೋರಾಟದಲ್ಲಿ ಜೈಲಿನ ಸರಳುಗಳ ಸ್ಪರ್ಶಪಡೆದವರು. “ಉಡಿeಚಿಣ miಟಿಜs ಛಿಚಿಟಿ ಛಿome iಟಿ ಥಿouಟಿg heಚಿಡಿಣs.” ಎಂಬುದನ್ನು ಬಲವಾಗಿ ನಂಬಿದAತಿದ್ದ ಗುರುಗಳು ಅವರ ಮೊಮ್ಮಕ್ಕಳ ವಯಸ್ಸಿನ ನಮ್ಮನ್ನು ಈಗಲೂ ಬಹುವಚನದಲ್ಲಿ ಸಂಬೋಧಿಸುವ ಜೀವಬಂಧು! ಈ ದೊಡ್ಡತನಕ್ಕೆ ಸಾವಿರದ ಸಲಾಂ. “Womeಟಿ ಚಿಡಿe ಣhe ಡಿeಚಿಟ ಚಿಡಿಛಿhiಣeಛಿಣs oಜಿ soಛಿieಣಥಿ” ಎಂಬುದನ್ನು ಗುರುಗಳ ಬಾಳ ಸಂಗಾತಿ ಅನ್ನಪೂರ್ಣಮ್ಮ ಬೆನ್ನಹಿಂದಿನ ಬೆಳಕಾಗಿ ನಿಜವಾಗಿಸಿದರು, ಅವರ ಸಹನಾಶಕ್ತಿ ದೊಡ್ಡದು.
ಕಣ್ಣ ಮುಂದಿನ ಕನ್ನಡಿ : ಕೊರೆವ ಚಳಿಯ ನಡುವೆ ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಮುದಡಿ ಮಲಗಿದ ಮನಷ್ಯನೊಬ್ಬನ ಕಂಡು ನಾನು ಹಾಗೂ ಅಣ್ಣ ಮುತ್ತು ಹಾಳಕೇರಿ ನಿಬ್ಬೆರಗಾಗಿ ನಿಂತೆವು ! ಸರ್ ನೀವು…. ಇಲ್ಲಿ ? ಎಂದಾಗ ಸ್ವಾಭಿಮಾನದ ಕಾರಣಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜಕರ ಸೊಗಲಾಡಿತನವನ್ನು ನಯವಾಗಿ ನಿರಾಕರಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದಾಗ ನಮ್ಮಿಬ್ಬರ ಕಣ್ಣಾಲೆಗಳು ತುಂಬಿಬAದಿದ್ದವು. ಇಂತಹ ನೇರನುಡಿಯ ನಿಷ್ಠುರವಾದಿಯ ಸಾಂಗತ್ಯಲ್ಲಿ ಬದುಕಿಗೊಂದು ಬದ್ಧತೆಯಪಾಠ ಕಲಿತಿದ್ದೇವೆ. “ನ್ಯಾಯನಿಷ್ಠುರಿ ಲೋಕವಿರೋಧಿ ಶರಣನಾರಿಗಂಜುವನಲ”್ಲ ಎಂಬ ವಿಶ್ವಗುರು ಬಸವಣ್ಣನ ವಚನದ ಸಾಲುಗಳಿಗೆ ಜೀವಂತ ನಿದರ್ಶನದಂತಿದ್ದ ಗುರುಗಳು ಬದುಕಿನುದ್ದಕ್ಕೂ ಬದ್ಧತೆಗಾಗಿ ಗುದ್ದಾಡಿದ ಅಂತ:ಕರಣದ ಮಾನವೀಯ ಜೀವ! ಒಟ್ಟಾರೆ, ಸಮಾನ ಹೃದಯಗಳ ನಿರ್ಮಿತಿಯ ಆಶಯವನಿಟ್ಟುಕೊಂಡ ಬಹುತ್ವದ ಬಂಧುವಾದ ಎಬಿಎಚ್ ಗುರುಗಳು ಬದುಕು ಬರೆಹ ಎಷ್ಟು ಬರೆದರು ಮುಗಿಯದ ಮಹಾಕಾವ್ಯ ! ಹೌದಲ್ಲವೇ?
Comments are closed.