ಜ್ವಲಂತ ಸಮಸ್ಯೆ ಮುಂದಿಟ್ಟು ಪಾದಯಾತ್ರೆ: ಜನಾರ್ದನ ರೆಡ್ಡಿ
ಗಂಗಾವತಿ (ಕೊಪ್ಪಳ ಜಿ.): ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು ಎಂಬುದು ಮಾತ್ರ ಬಿಜೆಪಿ ಆಗ್ರಹವಾಗಿರಲಿಲ್ಲ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಪಾದಯಾತ್ರೆ ನಡೆಯುತ್ತಿದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.
ಆರನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಸಚಿವ ನಾಗೇಂದ್ರ ವಾಲ್ಮೀಕಿ ಸಮುದಾಯದ ಯುವಕನ ದೂಳಿಗೂ ಸಮ ಇಲ್ಲ. ಅವರ ವಿರುದ್ಧ ಸಾಮಾನ್ಯ ಕಾರ್ಯಕರ್ತ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೂ ನಾಗೇಂದ್ರ ಸೋಲು ಖಚಿತ ಎಂದರು.
ನವಲಿ ಜಲಾಶಯದ ಬಗ್ಗೆ ಹಲವು ಬಾರಿ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇವೆ. ಹನ್ನೊಂದು ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದು ಇಷ್ಟು ಸಮಯ ಆದರೂ ಏನೂ ಕ್ರಮ ಕೈಗೊಳ್ಳಲಿಲ್ಲ. ತುಂಗಾಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಒಡೆದು ಹೋಗಿ ನೀರು ವ್ಯರ್ಥವಾಯಿತು. ಆಗ ಗೇಟ್ ದುರಸ್ತಿ ಜೊತೆಗೆ ಕಾಲುವೆಗಳನ್ನೂ ದುರಸ್ತಿ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಆದರೆ ಕಾಲುವೆ ದುರಸ್ತಿ ಮಾಡಲಿಲ್ಲ ಎಂದು ದೂರಿದರು.
ಈ ಭಾಗದ ನಾಯಕ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು, ಬೆಳಗ್ಗೆದ್ದರೆ ನಾಗೇಂದ್ರ, ತಾಖತ್ ಎಂದೆಲ್ಲ ಮಾತನಾಡುತ್ತಾರೆ. ತಂಗಡಗಿ ಸಹ ಚುನಾವಣೆ ಸ್ಪರ್ಧೆಗೆ ಸವಾಲು ಹಾಕುತ್ತಾರೆ. ಆದರೆ ಬಿಜೆಪಿಯೇ ಗೆಲುವು ಸಾಧಿಸುವುದು ಎಂಬ ಸತ್ಯ ಅವರಿಗೆ ತಿಳಿದಿಲ್ಲ. ನಾಳೆಯೇ ಚುನಾವಣೆ ಆದರೆ ಬಸವರಾಜ್ ದಡೆಸೂಗೂರು ಅವರೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಹಣದಲ್ಲೇ ಶಾಸಕನಾದ ತಂಗಡಗಿ ಇಂದು ಕಾಂಗ್ರೆಸ್‍ಗೆ ಹೋಗಿ ಸೊಕ್ಕಿನಿಂದ

ಮಾತನಾಡುತ್ತಾರೆÉ. ಅಪಪ್ರಚಾರವನ್ನು ಯಾರೂ ನಂಬಬೇಡಿ. ಸಹಸ್ರಾರು ಸಂಖ್ಯೆಯಲ್ಲಿ ಈ ಪಾದಯಾತ್ರೆಯಲ್ಲಿ ವಿಜಯೇಂದ್ರ ಅವರಿಗೆ ಬೆಂಬಲ ನೀಡಿದ್ದೀರಿ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.
Comments are closed.