ಸಂಶೋಧಕ ದಿ. ಬಿ.ಸಿ. ಪಾಟೀಲರ ಸಮಗ್ರ ಕೃತಿಗಳ ‘ಭರಮ ಸಿರಿ’ ಬಿಡುಗಡೆ
ಕೊಪ್ಪಳ, ಸೆ. 04: ಶಿಕ್ಷಣ, ಇತಿಹಾಸ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಹಿರಿಯ ಸಂಶೋಧಕ ದಿ. ಬಿ.ಸಿ. ಪಾಟೀಲರ ಎಲ್ಲಾ ಕೃತಿಗಳನ್ನೊಳಗೊಂಡ ‘ಭರಮ ಸಿರಿ: ಬಿ.ಸಿ. ಪಾಟೀಲರ ಸಮಗ್ರ ಕೃತಿಗಳು’ ಎಂಬ ಸಮಗ್ರ ಸಂಪುಟವನ್ನು ಹೊರತರಲಾಗುತ್ತಿದೆ ಇದರ ಉದ್ಘಾಟನೆ ಹಾಗೂ ಪುಸ್ತಕ ಗ್ರಂಥ ಬಿಡುಗಡೆ ಸಮಾರಂಭ ದಿ,6 ರ ರವಿವಾರ ಬೆಳಿಗ್ಗೆ ಜರುಗಲಿದೆ ಎಂದು ಪುರಾತತ್ವ ಇಲಾಖೆಯ ನಿವೃತ್ತ ಉಪ ಅಧೀಕ್ಷಕ ಸಿ ಬಿ ಪಾಟೀಲ್ ತಿಳಿಸಿದರು,
ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಮಾಧ್ಯಮದೊಂದಿಗೆ ಮಾತನಾಡಿ 2024ರಲ್ಲಿ ಸ್ಥಾಪಿತವಾದ ‘ಬಿ.ಸಿ. ಪಾಟೀಲ ಟ್ರಸ್ಟ್’ ಮತ್ತು ‘ಸುದರ್ಶನ ಪಾಟೀಲ ಫೌಂಡೇಷನ್’ ಸಂಯುಕ್ತವಾಗಿ ಈ ಗ್ರಂಥವನ್ನು ಪ್ರಕಟಿಸುತ್ತಿದ್ದು, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದ ನುಡಿಗಳನ್ನು ನೀಡಿದ್ದಾರೆ ಅಲ್ಲದೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಕೂಡ ಅವರು ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ವಿವರಿಸಿದರು,
ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ, ಡಿ,ವಿ ಪರಮಶಿವಮೂರ್ತಿ ಉದ್ಘಾಟಿಸಿ ಬಿಡುಗಡೆಗೊಳಿಸಲಿದ್ದಾರೆ, ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ಡಾ, ದೇವರಕೊಂಡ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ, ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು,
ಮುಂದುವರೆದು ಮಾತನಾಡಿ ಬಿಸಿ ಪಾಟೀಲರು 1976ರಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ಅವರು, ನಿವೃತ್ತಿಯ ನಂತರ ತಮ್ಮನ್ನು ಪೂರ್ಣಪ್ರಮಾಣದಲ್ಲಿ ಇತಿಹಾಸ ಹಾಗೂ ಸಾಹಿತ್ಯ ಸಂಶೋಧನೆಗೆ ಸಮರ್ಪಿಸಿಕೊಂಡಿದ್ದರು. ‘ಕೊಪ್ಪಳ: ಸಾಂಸ್ಕೃತಿಕ ಪರಂಪರೆ’, ‘ಮಾದಿನೂರು ನೆನಪು’, ‘ಸಿಂದೋಗಿ ಚರಿತೆ’, ‘ಕೊಪ್ಪಳದ ಹೆಚ್ಚಿನ ಶಾಸನಗಳು’, ‘ಮಹಾದೇವ ದೇವಾಲಯ’ ಮುಂತಾದ ಪ್ರಮುಖ ಇತಿಹಾಸ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ. ಇದಲ್ಲದೆ ‘ಮೊಗ್ಗುಗಳು’ ಮತ್ತು ‘ಬೆಳಕು’ ಕವನ ಸಂಕಲನಗಳು ಹಾಗೂ ‘ಕಾಯಕಯೋಗಿ ಬಸವಣ್ಣ’, ‘ವರಕವಿ’, ‘ಶ್ರೀ.ಮ.ನಿ.ಪ್ರ. ಶ್ರೀಗವಿಸಿದ್ದೇಶ್ವರರು’ ನಾಟಕಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಅವರ ಸಾಹಿತ್ಯಿಕ ಕೊಡುಗೆಯನ್ನು ಗುರುತಿಸಿ ಕೊಪ್ಪಳ ನಗರಸಭೆಯು ಹಳೇ ಜಿಲ್ಲಾಸ್ಪತ್ರೆಯ ಮುಂದಿನ ರಸ್ತೆಗೆ ‘ಸಾಹಿತಿ ಸಂಶೋಧಕ ಬಿ.ಸಿ. ಪಾಟೀಲ ರಸ್ತೆ’ ಎಂದು ಈಗಾಗಲೇ ನಾಮಕರಣ ಮಾಡಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ಕುರಿತಾಗಿ ಎಂ.ಫಿಲ್ ಸಂಶೋಧನಾ ಪ್ರಬಂಧ ಮಂಡನೆಯಾಗಿದ್ದು, 2015ರಲ್ಲಿ ಅವರ ಸಂಸ್ಮರಣ ಗ್ರಂಥ ‘ಚೈತನ್ಯಶೀಲ ಸಂಶೋಧಕ’ ಪ್ರಕಟವಾಗಿತ್ತು.
94 ವರ್ಷಗಳ ಸಾರ್ಥಕ ಜೀವನ ನಡೆಸಿ 2011ರಲ್ಲಿ ಶಿವೈಕ್ಯರಾದ ಬಿ.ಸಿ. ಪಾಟೀಲರ ಜ್ಞಾನದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಅವರ ಸ್ಮೃತಿಗೆ ‘ಜ್ಞಾನಜ್ಯೋತಿ’ ಎಂದು ಗೌರವಿಸಲಾಗಿದೆ. ಅವರ ಧರ್ಮಪತ್ನಿ ದಿ. ಸುಮಂಗಲಾದೇವಿ ಪಾಟೀಲರ ಸ್ಮೃತಿಗೆ ‘ಅನ್ನಜ್ಯೋತಿ’ ಹಾಗೂ ಅಕಾಲಿಕವಾಗಿ ಅಗಲಿದ ಅವರ ಪುತ್ರ ಉದ್ಯಮಿ ದಿ. ಸುದರ್ಶನಗೌಡ ಪಾಟೀಲರ ಸ್ಮೃತಿಗೆ ‘ಯುವಜ್ಯೋತಿ’ ಎಂದು ನಾಮಕರಣ ಮಾಡಲಾಗಿದೆ.
ಸಂಶೋಧಕರು ಮತ್ತು ಇತಿಹಾಸಾಸಕ್ತರಿಗೆ ಲಭ್ಯವಾಗದಿದ್ದ ಪಾಟೀಲರ ಎಲ್ಲ ಅಪರೂಪದ ಕೃತಿಗಳನ್ನು ಯಾವುದೇ ಬದಲಾವಣೆ ಮಾಡದೆ, ಮೂಲ ಸ್ವರೂಪದಲ್ಲೇ ಮರುಮುದ್ರಣಗೊಳಿಸಿ ಒಂದೇ ಸಂಪುಟವಾಗಿ ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ ದಿ, 6 ರ ರವಿವಾರದಂದು ಜರುಗುವ ಕಾರ್ಯಕ್ರಮಕ್ಕೆ ಸರ್ವರೋ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕರ್ಮ ಯಶಸ್ವಿಗೊಳಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ಹಾಗೂ ಹೆಚ್ಚಿನ ಮಾಹಿತಿಗಾಗಿ ತಮಗೆ ಸಂಪರ್ಕಿಸುವಂತೆ ನಿವೃತ್ತ ಉಪಪುರಾತತ್ವ ಅಧೀಕ್ಷಕ ಸಿ.ಬಿ. ಪಾಟೀಲ (ದೂರವಾಣಿ: 9900831212) ಸಂಪರ್ಕಿಸಬಹುದು ಎಂದು ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಎಸ್ ಬಿ ಪಾಟೀಲ್, ಅವಿನಾಶ್ ಪಾಟೀಲ್, ಬಸವರಾಜ್ ಬಳ್ಳೊಳ್ಳಿ, ಬಸವರಾಜ್ ಡಂಬಳ, ಅನೇಕರು ಪಾಲ್ಗೊಂಡಿದ್ದರು,
Comments are closed.