ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಶಾಂತಿಯ ಸಂದೇಶವನ್ನು ನೀಡಿದ್ದಾರೆ – ರಾಘವೇಂದ್ರ ಹಿಟ್ನಾಳ
.
ಕೊಪ್ಪಳ:ಸೆ.28.ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಶಾಂತಿಯ ಸಂದೇಶವನ್ನು ನೀಡಿದ್ದಾರೆ ಎಂದು ಶಾಸಕ ಕೆ.ರಾಘವೇಂದ್ರ ಬಿ.ಹಿಟ್ನಾಳ ಹೇಳಿದರು.
ನಗರದ ಯುಸೂಫಿಯಾ ಮಸೀದಿಯ ಸಭಾಂಗಣದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರರ (ಸ್ವ ಅ) 1498ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮುಂದುವರೆದು ಮಾತನಾಡಿ
ಈ ಸಮುದಾಯದ ಎಲ್ಲಾ ಮುಖಂಡರು ನಗರದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿದ್ದು. ಬೇರೆ ಸಮಾಜದವರು ಕೂಡ ಸಹೋದರ ಮನೋಭಾವನೆ ಯೊಂದಿಗೆ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷದ ವಿಚಾರ. ಮೊಹಮ್ಮದ್ ಪೈಗಂಬರರು. ಬಸವಣ್ಣನವರು. ಅನೇಕ ಸಾಧು. ಸಂತರು ಡಾ: ಬಿ.ಆರ್. ಅಂಬೇಡ್ಕರ್ ವರಿಗೆ ಕೂಡ ಏಕತೆ ಸಮಾಜದ. ಸಮಾನತೆಯ ಸಂದೇಶವನ್ನು ಕೊಡುವ ಕೆಲಸವನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರನ್ನು ಅಭಿನಂದಿಸುತ್ತೇನೆ. ಕೇವಲ ಒಂದು ಹಬ್ಬ ಅಲ್ಲ.ಎಲ್ಲಾ ಹಬ್ಬದಲ್ಲಿ ಕೂಡ ಎಲ್ಲಾ ಸಮಾಜದವರು ಒಕ್ಕಟ್ಟಾಗಿ ಮಾಡುವಂಥದ್ದಿದ್ದರೆ ಅದು ಕೊಪ್ಪಳ ಕ್ಷೇತ್ರದಲ್ಲಿದೆ.ಎಲ್ಲರೂ ಕೂಡ ಜನ್ಮದಿನೋತ್ಸವ ಆಚರಣೆ ಜೊತೆಗೆ ಅವರ ಒಳ್ಳೆ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸತಕ್ಕಂತಹ ಕೆಲಸ ಮಾಡಬೇಕು.ಅಂದಾಗ ಮಾತ್ರ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಪಕ್ಷದ ಜಿಲ್ಲಾ ಮಾಜಿ ಅಧ್ಯಕ್ಷ ಶಾಂತಣ್ಣ ಮುದಗಲ್ ಮಾತನಾಡಿ ಕಲ್ಮ. ನಮಾಝ್. ರೋಝಾ. ಜಕಾತ್. ಹಜ್ ಈ ಐದು ಇಸ್ಲಾಮಿನ ಸ್ತಂಭಗಳಿವೆ. ಪ್ರಾಣಿಯ ಪ್ರಾರ್ಥನೆ ದೇವರು ಕೇಳ್ತಾನೆ ಅಂದ್ರೆ ನಮ್ಮ ಪ್ರಾರ್ಥನೆ ಕೇಳುವುದಿಲ್ಲವೇ ? ನಮ್ಮ ಪ್ರಾರ್ಥನೆಗೆ ಶ್ರದ್ಧೆ. ವಿಶ್ವಾಸ. ಮೇಲಿನವ ನಮ್ಮನ್ನು ಕಾಪಾಡ್ತಾನೆ ಅನ್ನುವ ನಂಬಿಕೆ ಬೇಕು. ಹಿಂದೂ.ಮುಸ್ಲಿಂ. ಕ್ರಿಶ್ಚಿಯನ್ ಯಾವುದೇ ಧರ್ಮವಿರಲಿ. ಎಲ್ಲಾ ಧರ್ಮಗಳಲ್ಲಿ ಮಾನವೀಯತೆ ಇದೆ. ಮಾನವೀಯತೆ ಇಲ್ಲದ ಧರ್ಮನೆ ಅಲ್ಲ. ಪ್ರವಾದಿಯವರು ಮಾನವೀಯತೆಯನ್ನೇ ಪ್ರತಿಪಾದಿಸಿದ್ದಾರೆ. ಪ್ರವಾದಿಯವರ ಜನ್ಮದಿನಾಚರಣೆಗೆ ಎಲ್ಲಾ ಧರ್ಮದವರು ಭಾಗವಹಿಸಿರುವುದರಿಂದ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಎಸ್.ವಂಟಗೋಡಿ ಮಾತನಾಡಿ ಎಲ್ಲಾ ಧರ್ಮಗಳು ಹೇಳುವುದು ಶಾಂತಿ ಸಹ ಬಾಳ್ವೆ, ಈ ಜಿಲ್ಲೆಯಲ್ಲಿ ಏಳೆಂಟು ತಿಂಗಳಿಂದ ಶಾಂತಿ ಸಹ ಬಾಳ್ವೆ ಜಾಸ್ತಿ ಕಂಡೆ. ಹಿರಿಯರ ಮಾರ್ಗದರ್ಶನ ಮುಂದಿನ ಪೀಳಿಗೆವರೆಗೂ ಮುಂದುವರಿಯಲೆಂದು ಆಶಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುಸೂಫಿಯಾ ಮಸೀದಿಯ ಪೇಷ್ ಇಮಾಮ್ ಮುಫ್ತಿ ಮುಹಮ್ಮದ್ ನಜೀರ್ ಅಹ್ಮದ್ ಮಾತನಾಡಿ ಪ್ರವಾದಿ ಮುಹಮ್ಮದ್ ಪೈಗಂಬರ(ಸ್ವ ಅ) ಜನ್ಮ ದಿನದಂದು ಅಲ್ಲಾಹನು ಕೇವಲ ನಮ್ಮ ಜಿಲ್ಲೆ.ರಾಜ್ಯ. ರಾಷ್ಟ್ರವಷ್ಟೇ ಅಲ್ಲ ಇಡೀ ಮಾನವೀಯತೆಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಮಸೀದಿ ಕಮೀಟಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್. ಶಾಂತಣ್ಣ ಮುದಗಲ್. ಆಸಿಫ್ ಅಲಿ. ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಪೀರಾ ಹುಸೇನ್ ಹೊಸಳ್ಳಿ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ. ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್. ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಡಾ. ಕೆ.ಜಿ.ಕುಲಕರ್ಣಿ. ವಿ.ಎಂ. ಭೂಸನೂರ ಮಠ. ರಾಘವೇಂದ್ರ ಪಾನಘಂಟಿ. ಅಂದಪ್ಪ ಅಗಡಿ. ಮಹಾಂತೇಶ್ ಪಾಟೀಲ್ ಮೈನಹಳ್ಳಿ. ನಾಗರಾಜ್ ಬಳ್ಳಾರಿ. ದ್ಯಾಮಣ್ಣ ಚಿಲವಾಡಗಿ. ಬಸಯ್ಯ ಹಿರೇಮಠ. ವಿರುಪಾಕ್ಷಿ ಮೂರ್ನಾಳ. ಶಿವರೆಡ್ಡಿ ಭೂಮಕ್ಕನವರ್. ಮುತ್ತುರಾಜ್ ಕುಷ್ಟಗಿ. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು. ನವನಗರ ಚರ್ಚಿನ ಫಾದರ್ ಚೆನ್ನಬಸಪ್ಪ ಅಪ್ಪನವರ್. ಶಿವ ಶೆಟ್ಟರ್. ಮಹೆಬೂಬ್ ಅರಗಂಜಿ. ಅಕ್ಬರ್ ಪಾಷಾ ಪಲ್ಟನ್. ಬಾಷು ಸಾಬ್ ಖತೀಮ್. ಅಖ್ತರ್ ಮಕಾಂದಾರ್. ಲಾಲ್ ಶಾ ಮನಿಯಾರ್. ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್. ಇನ್ಸ್ಪೆಕ್ಟರ್ ಸಂತೋಷ್ ಹಳ್ಳೂರು.ರಾಜಶೇಖರ್ ಹಿಟ್ನಾಳ ಹಾಗೂ ಪಂಚ್ ಕಮಿಟಿಗಳ ಅಧ್ಯಕ್ಷರುಗಳಿಗೆ ಯುಸೂಫಿಯಾ ಮಸೀದಿ ಕಮಿಟಿಯ ಅಧ್ಯಕ್ಷ ಸೈಯ್ಯದ್ ಯಝದಾನಿ ಪಾಷಾ ಖಾದ್ರಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸ್ವಾಗತಿಸಿದ ಪಂಚ್ ಕಮಿಟಿಗಳ ಒಕ್ಕೂಟದ ಕಾರ್ಯದರ್ಶಿ ಸೈಯ್ಯದ್ ನಾಸೀರ್ ಕಂಠಿ ನಿರೂಪಿಸಿದರು. ಕೊನೆಯಲ್ಲಿ ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಷಾ ವಂದಿಸಿದರು.
Comments are closed.