ಯುವ ಸಂಘಟನೆ, ಕುಡಿಯುವ ನೀರಿಗೆ ಆದ್ಯತೆ -ಟಿ.ಕೃಷ್ಣಮೂರ್ತಿ

ಕುಷ್ಟಗಿ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ 24 ಗಂಟೆ ನಿಗಾವಹಿಸಿ, ಅಗತ್ಯವಿದ್ದರೆ ಬಾಡಿಗೆ ಬೋರ್‌ವೆಲ್ ಮೂಲಕ ನೀರು ಪೂರೈಸಿ, ಸಮಸ್ಯೆ ಬಗೆಹರಿಯದಿದ್ದರೆ ಹೊಸ ಬೋರ್‌ವೆಲ್ ಕೊರೆಸುವಂತೆ ಸೂಚಿಸಿದರು. ಕಾಮಗಾರಿಗಳ ಜಿಪಿಎಸ್ ಫೋಟೊ, ವಿಡಿಯೊ ಕಡ್ಡಾಯವಾಗಿ ದಾಖಲಿಸಬೇಕು ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಎಂದರು. ಕುಷ್ಟಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಮಾತನಾಡಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಭಾರತ್ ಜೋಡೋ ಯುವ ಸಂಘ ರಚಿಸಿ, 16ರಿಂದ 35 ವರ್ಷದೊಳಗಿನ 100ರಿಂದ 250 ಯುವಕರನ್ನು ಸೇರ್ಪಡೆಗೊಳಿಸುವಂತೆ ಪಿಡಿಒಗಳಿಗೆ ಸೂಚಿಸಿದರು. ಯುವಕರನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದರು.
ರು.
ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ನೀರು ಸೋರಿಕೆ ತಕ್ಷಣ ದುರಸ್ತಿ ಮಾಡಬೇಕು ಎಂದರು. ತಾಪಂ ಇಒ ಅಮರೇಶ ವಸತಿ ನಿಲಯ ವಿದ್ಯಾರ್ಥಿಗಳು ಹಾಗೂ ನರೇಗಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಪ್ರತಿ ಗ್ರಾಪಂನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.
ಬಿಇಒ ಉಮಾದೇವಿ ಬಸಾಪುರ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಎಲ್‌ಬಿಎ ಆ್ಯಪ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ, 28 ಶಾಲೆಗಳಲ್ಲಿ ಎಐ ಶಿಕ್ಷಕರ ವ್ಯವಸ್ಥೆ ಮಾಡಲಾಗಿದೆ ಎಂದರು. ತಾಪಂ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಟಿಎಚ್‌ಒ ಡಾ. ಆನಂದ ಗೋಟೂರು, ಶಿವಯೋಗಪ್ಪ, ರಾಜಶೇಖರ್ ಪಾಟೀಲ್, ಗೀತಾ ಅಯ್ಯಪ್ಪನವರ್, ಡಾ. ಆನಂದ ದೇವರನಾವದಗಿ, ಶೋಭಾ, ಅನ್ನಪೂರ್ಣ ಪಾಟೀಲ, ಸುವರ್ಣ, ಸುರೇಶ ಆನೆಬಣ್ಣ, ವಸಂತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Comments are closed.