ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಶಿಕ್ಷಣ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ

ನಾಲ್ಕು ದಿಕ್ಕು ಸುದ್ದಿ
ಕನಕಗಿರಿ, ಆ.12: ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವನ್ನು ನಡೆಸಲಾಗುತ್ತಿದ್ದು, ಇತ್ತೀಚಿಗಷ್ಟೇ ಮೊದಲ ಬ್ಯಾಚಿನ ವಿದ್ಯಾರ್ಥಿಗಳು ಯಶಸ್ವಿಯಾಗಿ ಪದವಿ ಪೂರೈಸಿ ಹೊರಬಂದಿದ್ದಾರೆ. ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಆಸಕ್ತ ವಿದ್ಯಾರ್ಥಿಗಳು ಇದೇ ತಿಂಗಳ 20ರ ಒಳಗಾಗಿ ಯುಯುಸಿಎಂಎಸ್ ಪೋರ್ಟಲ್’ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಕಾಲೇಜಿನಲ್ಲಿ ಕಡ್ಡಾಯ ಭಾಷಾ ವಿಷಯಗಳೊಂದಿಗೆ ಪತ್ರಿಕೋದ್ಯಮ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಷಯ ಸಂಯೋಜನೆಯಲ್ಲಿ ಬಿಎ ಪದವಿಯನ್ನು ನಡೆಸಲಾಗುತ್ತಿದ್ದು, ಈ ಕೋರ್ಸ್ ಪೂರೈಸಿದವರಿಗೆ ಮಾಧ್ಯಮರಂಗದಲ್ಲಿ ಅಪಾರ ಉದ್ಯೋಗಾವಕಾಶಗಳಿವೆ. ವರದಿಗಾರ, ಉಪಸಂಪಾದಕ, ಫೋಟೋ ಜರ್ನಲಿಸ್ಟ್, ಕಾಪಿ ಎಡಿಟರ್, ನಿರೂಪಕ, ಅನುವಾದಕ, ಕ್ಯಾಮೆರಾಮನ್, ನಿರ್ದೇಶಕ, ನಿರ್ಮಾಪಕ, ಗ್ರಾಫಿಕ್ ಡಿಸೈನರ್, ರೇಡಿಯೋ ಜಾಕಿ, ಸೋಶಿಯಲ್ ಮೀಡಿಯಾ ಮ್ಯಾನೇಜರ್, ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿ.ಆರ್.ಒ), ಕಂಟೆಂಟ್ ಕ್ರಿಯೇಟರ್, ಡಿಜಿಟಲ್ ಮಾರ್ಕೆಟಿಂಗ್ ಸೇರಿದಂತೆ ಹಲವು ಉದ್ಯೋಗಗಳನ್ನು ಪಡೆಯಬಹುದು ಎಂದು ಪ್ರಾಂಶುಪಾಲರಾದ ಡಾ. ಬಜರಂಗಬಲಿ ಅವರು ಮಾಹಿತಿ ನೀಡಿದ್ದಾರೆ. ಕಲೆ, ವಿಜ್ಞಾನ ಅಥವಾ ವಾಣಿಜ್ಯ ವಿಷಯದಲ್ಲಿ ಪಿಯುಸಿ ಪಾಸಾದವರು (10+2 ತತ್ಸಮಾನ) ವಿದ್ಯಾರ್ಹತೆ ಪೂರೈಸಿರುವವರು ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಆನ್ಲೈನ್ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಅರ್ಜಿಯ ಮುದ್ರಿತ ನಕಲು ಪ್ರತಿ, ಅಗತ್ಯ ದಾಖಲಾತಿಗಳು ಹಾಗೂ ಪ್ರವೇಶ ಶುಲ್ಕದೊಂದಿಗೆ ತಿಳಿಸಿದ ದಿನಾಂಕದ ಒಳಗೆ ಕಾಲೇಜಿಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ವಿಭಾಗದ ಮುಖ್ಯಸ್ಥರಾದ ಸಂಗಮೇಶ್ (ಮೊಬೈಲ್ ಸಂಖ್ಯೆ – 7483177162) ಅವರನ್ನು ಅಥವಾ ವಿಭಾಗದ ಅಧ್ಯಾಪಕರಾದ ವಿಜಯ್ ಸರೋದೆ (9483956996) ಅವರನ್ನು ಸಂಪರ್ಕಿಸಬಹುದಾಗಿದೆ.
Comments are closed.