ಗಾಂಧೀ ಇಟ್ಟ ಹೆಜ್ಜೆಗೊಂದು ನಮನ : ಶಿಕ್ಷಕರ ಕಲಾ ಸಂಘದಿಂದ ಭಾನಾಪುರಕ್ಕೆ ಪಾದಯಾತ್ರೆ
ಸರಳ ˌಸಾತ್ವಿಕ ಮನದ ಕಡೆಗೆ ಒಂದು ದೃಢವಾದ ಹೆಜ್ಜೆ ಎಂಬ ಸಂಕಲ್ಪದೊAದಿಗೆ ಶಿಕ್ಷಕರ ಕಲಾ ಸಂಘವು ಗಾಂಧೀ ಜಯಂತಿ ನಿಮಿತ್ಯ ನಗರದ ಅಶೋಕ ಸರ್ಕಲ್ ದಿಂದ ಮಹಾತ್ಮ ಗಾಂಧೀಜಿ ಹರಿಜನ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಾನಾಪುರ ರೇಲ್ವೆ ನಿಲ್ದಾಣದವರೆಗೆ ಪಾದಯಾತ್ರೆ ಮಾಡಿ ಅವರಿಗೆ ನಮನ ಸಲ್ಲಿಸುವ ನಮ್ಮ ನಡಿಗೆ ಗಾಂಧೀಯೆಡೆಗೆ ಕಾರ್ಯಕ್ರಮ ಆಯೋಜಿಸಿದೆ.
ಅಂದು ಬೆಳಿಗ್ಗೆ ಸರಿಯಾಗಿ ೫-೩೦ ಕ್ಕೆ ಅಶೋಕ ಸರ್ಕಲ್ ದಿಂದ ಪಾದಯಾತ್ರೆ ಹೊರಡಲಿದೆ.
ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ದೇಶ ಪ್ರವಾಸ ಕೈಗೊಂಡಿದ್ದ ಗಾಂಧೀಜಿ ಭಾನಾಪುರಕ್ಕೆ ೩-೩-೧೯೩೪ ರಂದು ಬರುತ್ತಾರೆ. ಸಾವಿರಾರು ಜನರು ಗಾಂಧೀ ನೋಡಲು ನೆರೆದಿರುತ್ತಾರೆ.ಅಂದು ಗಾಂಧೀಜಿಯವರು ತಳಕಳ್ ಗ್ರಾಮದ ಅಂದಿನ ಒಂದೇ ಹೆಸರಿನ ಇಬ್ಬರು ಯುವತಿಯರು ಸುಟ್ಟವ್ವ ಹರಿಜನ ಗಾಂಧೀಗೆ ನೂಲಿನ ಹಾರ ಹಾಕಿ ಆರತಿ ಬೆಳಗಿ, ಮಹಾತ್ಮರಿಗೆ ನೀರು ಕೊಟ್ಟ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ,
ಇದೇ ಸಂದರ್ಭದಲ್ಲಿ ಭಾನಾಪುರದ ಯುವಕ ಕಾಳಪ್ಪ ಪತ್ತಾರ ಇವರು ಗಾಂಧಿಯವರ ಭಾವಚಿತ್ರ ಚಿತ್ರಿಸಿ ಕೊಡುತ್ತಾರೆ. ಆ ಘಟನೆಯ ಸವಿನೆನಪಿಗಾಗಿ ೧೯೯೮ ರಲ್ಲಿ ಕಾಳಪ್ಪ ಪತ್ತಾರ ಅವರ ಪುತ್ರ ಶಂಕರ ಪತ್ತಾರ ಮಹಾತ್ಮ ಗಾಂಧೀಜಿ ಚಿತ್ರ ಬಿಡಿಸಿ, ಭಾನಾಪೂರ ರೈಲು ನಿಲ್ದಾಣದಲ್ಲಿರಿಸಿದ್ದಾರೆ.
ನಮ್ಮ ನೆಲದಲ್ಲಿ ಗಾಂಧೀ ನಡೆದು ಹೋಗಿದ್ದಾರೆ ಅನ್ನುವುದೆ ನಮಗೆ ಧನ್ಯತೆ ಭಾವ ಮೂಡಿಸಿದೆ.ಹೀಗಾಗಿ ಅವರಿಟ್ಟು ಹೋದ ಹೆಜ್ಜೆಗೆ ನಮನ ಸಲ್ಲಿಸಿ ˌಶ್ರಮದಾನ ಮಾಡಿ ಬರುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.ಮತ್ತು ಸುಟ್ಟವ್ವ ಅವರ ಮಗ ಶೇಖರಪ್ಪ ಹರಿಜನ ˌಕಾಳಪ್ಪ ಪತ್ತಾರ ಅವರ ಮಗ ಶಂಕರ ಪತ್ತಾರ್ ˌಶಿರೂರು ವೀರಭದ್ರಪ್ಪ ಅವರ ಮಗ ಶಿರೂರು ದೇವಪ್ಪ ರನ್ನು ಅಂದು ಸನ್ಮಾನಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಿಕ್ಷಕರ ಕಲಾ ಸಂಘದ ಅಧ್ಯಕ್ಷರಾಗಿರುವ ರಾಮಣ್ಣ ಶ್ಯಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಗಾಂಧೀ ವಿಚಾರ ವೇದಿಕೆ ಕೊಪ್ಪಳ, ಅಶೋಕ ಸರ್ಕಲ್ ರಂಗ ತಂಡ ˌಕಲರವ ಸೇವಾ ಬಳಗˌ ಪತಂಜಲಿ ಯೋಗಸಮಿತಿ ಕೊಪ್ಪಳ ˌವಕೀಲರು ˌಉಪನ್ಯಾಸಕರು ˌಶಿಕ್ಷಕರುˌ ವಿವಿಧ ಇಲಾಖೆಯ ನೌಕರರು, ವರ್ತಕರು ˌಯುವಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಪಾಲ್ಗೊಳ್ಳಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಪ್ರಾಣೇಶ ಪೂಜಾರ : ೯೯೦೨೮೯೩೬೭
ನಾಗರಾಜನಾಯಕ ಡಿ.ಡೊಳ್ಳಿನ : ೯೯೦೧೧೩೫೮೭೪
ಮಹಾಂತೇಶ ಎನ್ ಸಿ : ೯೫೩೫೪೮೮೧೮೫
Comments are closed.