2A ಮೀಸಲಾತಿಗಾಗಿ ಜಿಲ್ಲಾ ಬಣಜಿಗ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಮನವಿ

0

Get real time updates directly on you device, subscribe now.

ಕೊಪ್ಪಳ : ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ಜಿಲ್ಲಾ ಬಣಜಿಗ ಸಮಾಜ ಘಟಕದ ವತಿಯಿಂದ ಬಣಜಿಗ ಸಮಾಜಕ್ಕೆ 2A ಮೀಸಲಾತಿ ನೀಡುವಂತೆ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಣಜಿಗ ಸಮಾಜ ಘಟಕದ ಜಿಲ್ಲಾಧ್ಯಕ್ಷ ವೀರೇಶ್ ಬಂಗಾರಶೆಟ್ರು ಮಾತನಾಡಿ, ನಮ್ಮ ಸಮಾಜದ ಶಿಕ್ಷಕಿ ಸುಮಿತ್ರ ಕರ್ನಾಟಕ ರಾಜ್ಯ ಕೇಸ್ ನಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ಏಕ ಸದಸ್ಯಪೀಠ ಹಾಗೂ ಇನ್ನೊಬ್ಬರು ನಮ್ಮ ಸಮಾಜದವರಾದ ನಾಗರಾಜ್ ಶಿವಬಸಪ್ಪ ಅವರ ಕೇಸ್ ನಲ್ಲಿ ಉಚ್ಚ ನ್ಯಾಯಾಲಯದಲ್ಲಿ ಏಕ ಸದಸ್ಯಪೀಠ ಬಣಜಿಗ ಸಮುದಾಯವನ್ನು ಉದ್ಯೋಗ ಉದ್ದೇಶಕ್ಕಾಗಿ ಪ್ರವರ್ಗ ಡಿ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ಪ್ರವರ್ಗ ಬಿ ಅಡಿಯಲ್ಲಿ ವರ್ಗೀಕರಿಸುವುದು ಪರಿಚ್ಛೇದ ಉಲ್ಲಂಘನೆಯಾಗಿರುತ್ತದೆ. ಹಾಗಾಗಿ ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿ ಮರುವರ್ಗೀಕರಿಸಬೇಕೆಂದು ಉಚ್ಚ ನ್ಯಾಯಾಲಯ ಪೀಠವು ಆದೇಶ ನೀಡಿದೆ ಎಂದರು.
ನಮ್ಮ ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದ ರವರಾಗಿರುವುದರಿಂದ ಸರ್ಕಾರಿ ನೇಮಕಾತಿಳಿಂದ ಅವಕಾಶ ವಂಚಿತರಾಗಿದ್ದಾರೆ. ಕಾರಣ ಬಣಜಿಗ ಸಮುದಾಯವನ್ನು ಪರಿಚ್ಛೇದ 16(4) ರ ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿ ವರ್ಗೀಕರಿಸಬೇಕೆಂದು ಉಚ್ಚ ನ್ಯಾಯಾಲಯ ಪೀಠದ ಆದೇಶ ಪ್ರಕಾರ ಬಣಜಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸಂಬಂಧಿಸಿದ ಇಲಾಖೆಗೆ ಸೂಕ್ತ ಆದೇಶ ನೀಡಲು ವಿನಂತಿಸುತ್ತೇವೆ ಎಂದರು.
ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಸುರೇಶ್ ಬಿ ಇ ಟ್ನಾಳ್ ಮಾತನಾಡಿ, ಸಂಬಂಧಪಟ್ಟ ಸಚಿವಾಲಯಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಗೌರವಾಧ್ಯಕ್ಷ ಸಂಗಣ್ಣ ಟೆಂಗಿನಕಾಯಿ, ಉಪಾಧ್ಯಕ್ಷರಾದ ಮಲ್ಲಣ್ಣ ಪಾವಲಿ, ಶರಣಪ್ಪ ಬಳಗಾನೂರ, ಶರಣಪ್ಪ ಗದ್ದಿ, ರಾಚಪ್ಪ ಅಂಗಡಿ, ಪ್ರ.ಕಾರ್ಯದರ್ಶಿ, ಬಸವರಾಜ ಪಗಡದಿನ್ನಿ, ಕಾರ್ಯದರ್ಶಿ ಬಸವರಾಜ ಜೋಳದ, ತಾಲ್ಲೂಕ ಅಧ್ಯಕ್ಷರಾದ ಶಾಂತಪ್ಪ ಸೋಮಲಾಪುರ, ಪ್ರಶಾಂತ ಪ್ರಭುಶೆಟ್ಟರ, ಶಿವಕುಮಾರ ಅರಲೂರ, ಕಪ್ಪತ್ತೆಪ್ಪ ಅಂಗಡಿ, ಪ್ರಭು ಹೊಸಂಗಡಿ, ರಾಜ್ಯ ಸಮಿತಿ ಸದಸ್ಯರಾದ ಬಸವರಾಜ ಪಡಿ, ವಿಶ್ವನಾಥ ಮಳಗಿ ಗುರುರಾಜ ಹಲಗೇರಿ, ವಿರೂಪಾಕ್ಷ ಕೊರಲಹಳ್ಳಿ, ಅನಿಲ ನಾಲವಾಡದ, ಬಸವರಾಜ ವೀರಶೆಟ್ಟರ, ಬಸವರಾಜ ಹುಬ್ಬಳ್ಳಿ, ಪ್ರಭು ಉಪನಾಳ, ಸುನೀಲ್ ಹೆಸರೂರು, ರಾಜು ಬಂಗಾರಶೆಟ್ಟರ, ರಾಜು ಬೆಳವಣಿಕಿ, ವಿಜಯ ಮಹಾಂತೇಶ ಗಲಗಲಿ, ಶರಣು ಅಗಡಿ, ಪ್ರಭು ಹೊಂಬಾಳ, ಶರಣಪ್ಪ ಗುತ್ತಿ, ಈಶಪ್ಪ ಅಂಗಡಿ, ಈಶಪ್ಪ ನಾಲ್ವಡ ಸೇರಿದಂತೆ ಅನೇಕರು ಇದ್ದ

Get real time updates directly on you device, subscribe now.

Leave A Reply

Your email address will not be published.

error: Content is protected !!