ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆ- ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ

ಶ್ರೀರಾಮನಗರ: ಜುಲೈ೨೦: ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶಾಲಾ ಸಂಸತ್ತಿಗೆ (Sಛಿhooಟ ಅಚಿbiಟಿeಣ) ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಗ್ರಹಣ (Iಟಿvesಣiಣuಡಿe ಅeಡಿemoಟಿಥಿ) ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಯ ವಿದ್ಯಾರ್ಥಿಗಳಿಂದ ಚುನಾಯಿತರಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ನಾಯಕತ್ವದ ಬ್ಯಾಡ್ಜ್ಗಳನ್ನು ನೀಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ಅವರು ನಾಯಕತ್ವದ ಗುಣಗಳ ಕುರಿತು ತಿಳಿಸಿ, ತಾವೆಲ್ಲರು ವಿದ್ಯಾರ್ಥಿ ಹಂತದಿAದಲೇ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು, ಜವಾಬ್ದಾರಿಯನ್ನು ಅರಿತು ಅತ್ಯುತ್ತಮ ನಾಯಕರೆನಿಸಿಕೊಳ್ಳಲು ಕಾರ್ಯೋನ್ಮುಖರಾಗಬೇಕು, ಪ್ರತಿಯೊಬ್ಬರು ಸ್ವಯಂ ಶಿಸ್ತು ಮತ್ತು ಸ್ವಚ್ಚತೆಗೆ ಆಧ್ಯತೆ ನೀಡಬೇಕು, ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು, ತಂದೆ-ತಾಯಿಗಳನ್ನು, ಗುರು-ಹಿರಿಯರನ್ನು ಗೌರವಿಸಬೇಕು, ಎಲ್ಲರೊಂದಿಗೆ ಗೌರವಯುತವಾದ ಭಾಷೆಯನ್ನು ಬಳಸಬೇಕು ಎಂದು ಕರೆ ನೀಡಿ ನಮ್ಮ ಸುತ್ತಮುತ್ತಲಿನ ಪರಿಸರದ ಕುರಿತು ಕಾಳಜಿಯನ್ನು ಹೊಂದಿ, ಸಮಾಜದ ಪ್ರಗತಿಗೆ ಕೊಡುಗೆ ನೀಡುವ ಜವಾಬ್ದಾರಿಯುತ ಪೌರರಾಗಬೇಕೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷರಾದ ನೆಕ್ಕಂಟಿ ಆದರ್ಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ|| ನೆಕ್ಕಂಟಿ ಅಖಿಲಾ ಅವರು ಚುನಾಯಿತ ಪ್ರತಿನಿಧಿಗಳಿಗೆ ನಾಯಕತ್ವದ ಬ್ಯಾಡ್ಜ್ಗಳನ್ನು ನೀಡಿದರು.
ಶಾಲೆಯ ಉಪ ಪ್ರಾಂಶುಪಾಲರಾದ ಲಕ್ಷಿö್ಮÃ ಜೆ, ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಸಿ.ಇ.ಓ ನರೇಶ್, ಕ್ಯಾಂಪಸ್ ಮ್ಯಾನೇಜರ್ ಜಿ ನಾಗೇಶ್ವರರಾವ್, ಪಿ.ಆರ್.ಎಮ್. ನಿಂಗಪ್ಪ, ಅಧ್ಯಕ್ಷರ ಕಾರ್ಯದರ್ಶಿಗಳಾದ ಮಂಜುನಾಥ, ಪಿ.ಆರ್.ಓ ಮಲ್ಲನಗೌಡ ಪಾಟೀಲ್, ವಸತಿನಿಲಯದ ಮುಖ್ಯಸ್ಥರಾದ ಕಾಳೇಶ, ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ವಿಜಯಕುಮಾರ ಮತ್ತು ಅಮೃತಾ ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಶಾಲೆಯ ವಿದ್ಯಾರ್ಥಿ ನಾಯಕಿ ಲಕ್ಷಿö್ಮÃ ಪ್ರಸನ್ನ ವಂದನಾರ್ಪಣೆಯನ್ನು ಮಾಡಿದರು
Comments are closed.